ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 66.24%, ಉಡುಪಿ 75.23% ಮತ ಚಲಾವಣೆ, ಅಲ್ಲಲ್ಲಿ ಮಾತಿನ ಸಂಘರ್ಷ, ಕಲ್ಲು ತೂರಾಟ

9:26 PM, Thursday, March 7th, 2013
Share
1 Star2 Stars3 Stars4 Stars5 Stars
(5 rating, 5 votes)
Loading...

MCC Election ಮಂಗಳೂರು : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮಾರ್ಚ್  7 ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಜೆ 5ಕ್ಕೆ ಮುಕ್ತಾಯ ಗೊಂಡಿದೆ. ಮತದಾನದ ಕೊನೆಯ ಅಂಕಿ ಅಂಶ ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡಾ 66.24 ಮತದಾನ ನಡೆದಿದೆ. ಒಟ್ಟು 1,48,311 ಪರುಷ ಮತ್ತು 1,59,226 ಮಹಿಳಾ ಮತದಾರರು ಮತಚಲಾಯಿಸಿದ್ದಾರೆ. ಬಹುತೇಕ ಶಾಂತಿಯುತ ಮತದಾನ ವಾಗಿದ್ದರೂ ಅಲ್ಲಲ್ಲಿ ಸಣ್ಣ ಪುಟ್ಟ ಮಾತಿನ ಸಂಘರ್ಷ ಮತ್ತು ಸಂಜೆಯ ವೇಳೆಗೆ ಮಂಗಳೂರಿನ ಬದ್ರಿಯ ಕಾಲೇಜು ಸಮೀಪ  ಕಲ್ಲು ತೂರಾಟ ನಡೆದಿದೆ.

ಅಲ್ಲಲ್ಲಿ ಕಹಿ ಘಟನೆಗಳು :

ಸೈಂಟ್ ಆಗ್ನೇಸ್

ಸೈಂಟ್ ಆಗ್ನೇಸ್ ಕಾಲೇಜಿನ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಹಾಕಿದ ಚುನಾವಣಾ ಬೂತನ್ನು ಚುನಾವಣಾ ಅಧಿಕಾರಿಯವರು. ಎಸಿಪಿ ಕವಿತಾ ನೇತೃತ್ವದಲ್ಲಿ ತೆರವುಗೊಳಿಸಿದ ಘಟನೆ ಬೆಳಗ್ಗೆ ನಡೆಯಿತು.

ಬದ್ರಿಯಾ ಕಾಲೇಜು

ಸಂಜೆಯ ವೇಳೆಗೆ ಯುನಿಟಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಂಸ್ಥೆಯ ವಾಹನದಲ್ಲಿ ಮತಚಲಾಯಿಸಲು ನಗರದ ಬದ್ರಿಯಾ ಕಾಲೇಜಿನ ಮತಗಟ್ಟೆಗೆ ಬಂದಾಗ ಕೆಲ ಪಕ್ಷದ ಕಾರ್ಯಕರ್ತರು ಅದನ್ನು ಪ್ರತಿರೋಧಿಸಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಮತದಾನ ಪಟ್ಟಿಯನ್ನು ಪರಿಶೀಲಿಸಿದಾಗ ಅವರು ಮತದಾನಕ್ಕೆ ಅರ್ಹತೆಯಿರುವ ವಿಷಯ ಬೆಳಕಿಗೆ ಬಂತು, ಅಷ್ಟು ಹೊತ್ತಿಗೆ ಕೆಲವರು ಮತ ಚಲಾಯಿಸಿಯಾಗಿತ್ತು. ಉಳಿದವರನ್ನು ಪೊಲೀಸರು ಲಾಠಿ ಬೀಸಿ ಓಡಿಸಿದರು, ಆಗ ಅಲ್ಲೇ ನಿಲ್ಲಿಸಿದ್ದ ಕಾರಿಗೆ ಕಲ್ಲು ತೂರಾಟ ನಡೆಸಲಾಯಿತು. ಕಾಲೇಜಿನ ಕಟ್ಟಡಕ್ಕೂ ಕಲ್ಲು ತೂರಿದ ಘಟನೆ ನಡೆಯಿತು.

MCC Election ಕುದ್ರೋಳಿ

ಕುದ್ರೋಳಿಯ ಜೋಡುಕರೆಯಲ್ಲಿ ಚುನಾವಣಾ ನೀತಿ ಉಲ್ಲಂಘಿಸಿ ಮತಯಾಚನೆ ಮಾಡಿದ್ದಕ್ಕೆ ಕಾಂಗ್ರೆಸ್ ಮತ್ತು ಜೆಡಿಯಸ್ ಕಾರ್ಯಕರ್ತರ ನಡುವೆ ಮಾತಿನ ಸಂಘರ್ಷ ನಡೆಯಿತು.

ಉಳ್ಳಾಲ

ಉಳ್ಳಾಲ ಒಂಭತ್ತುಕೆರೆ ಮತ್ತು ಕೋಟೆಪುರದಲ್ಲಿ ಮತದಾನದ ವಿಷಯದಲ್ಲಿ ಕಾಂಗ್ರೆಸ್, ಜೆಡಿಯಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಕಾಳಗ ನಡೆಯಿತು.

ಸುರತ್ಕಲ್

ಸುರತ್ಕಲ್ ನ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಮಾಡಿದ ಸಂಗತಿ ತಡವಾಗಿ ಬೆಳಕಿಗೆ ಬಂದಿದ್ದು. ಪರಿಸರದಲ್ಲಿ ಗೊಂದಲದ ವಾತಾವರಣ ಸಂಜೆವೇಳೆಗೆ ಉಂಟಾಗಿತ್ತು.

ತೊಕ್ಕೊಟ್ಟು

ತೊಕ್ಕೊಟ್ಟು ಚೊಂಬುಗಡ್ಡೆಯಲ್ಲಿ ಮತದಾನ ಮಾಡಲು ಬಂದ ಮತದಾರರಿಗೆ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿ ಮತದಾನವಿಲ್ಲದೆ ವಾಪಾಸಾಗಬೇಕಾದ ಪರಿಸ್ಥಿತಿ ಉಂಟಾಯಿತು.

ಕುಳಾಯಿ

ಕುಳಾಯಿ ಮತಗಟ್ಟೆಯ ಅಧಿಕಾರಿಯೊಬ್ಬರು ಮಾಹಿತಿಯಕೊರತೆಯಿಂದ ಪತ್ರಕರ್ತರಿಗೆ ಮತ್ತು ವಾರ್ತಧಿಕಾರಿಯವರಿಗೆ ಮಾಹಿತಿ ನೀಡಲು ನಿರಾಕರಿಸಿದರು.

ಉಳಿದಂತೆ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು ಮಂಗಳೂರು ಮಹಾನಗರ ಪಾಲಿಕೆ 63.29, ಉಳ್ಳಾಲ ಪುರಸಭೆ-70.8, ಮೂಡಬಿದ್ರೆ ಪುರಸಭೆ-73.84, ಬಂಟ್ವಾಳ ಪುರಸಭೆ-76.09, ಪುತ್ತೂರು ಪುರಸಭೆ-71.25, ಬೆಳ್ತಂಗಡಿ ಪಟ್ಟಣ ಪಂಚಾಯತ್ -75.49, ಸುಳ್ಯ ಪಟ್ಟಣ ಪಂಚಾಯತ್- 80.10 ಮತದಾನವಾಗಿದೆ.

MCC Election

ಉಡುಪಿ ಜಿಲ್ಲೆಯಲ್ಲಿ 75.23% ಮತದಾನವಾಗಿದ್ದು, ಉಡುಪಿ ನಗರ-72.08% , ಸಾಲಿಗ್ರಾಮ-77.53% , ಕುಂದಾಪುರ-76.15% , ಕಾರ್ಕಳ-75.16% , ಮತದಾನವಾಗಿದೆ.

ಮತದಾರರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಚುನಾವಣಾ ಫಲಿತಾಂಶ ಮಾರ್ಚ್ 11 ರಂದು ಹೊರಬೀಳಲಿದೆ.

MCC Election

MCC Election

MCC Election

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English