ವರ್ಕಾಡಿ : ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ಸಿದ್ದತೆಗಳು ಬಿರುಸಿನಿಂದ ಸಾಗಿದ್ದು ಡಿಸೆಂಬರ್ 14 ರಂದು ಚುನಾವಣೆ ನಡೆಯಲಿದೆ.
ಗ್ರಾಮ ಪಂಚಾಯತ್, ಬ್ಲಾಕ್ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ತ್ರೀ ಸ್ತರಗಳಲ್ಲಿ ಚುನಾವಣೆ ನಡೆಯಲಿದೆ.
ವರ್ಕಾಡಿ 3ನೇ ಡಿವಿಷನ್ ನಲ್ಲಿ ಈ ಬಾರಿ ತೀವ್ರ ಪೈಪೋಟಿ ಇದ್ದು ಬ್ಲಾಕ್ ಪಂಚಾಯತ್ ನಲ್ಲಿ ಮುಸ್ಲಿಂ ಲೀಗ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. ಜಿಲ್ಲಾ ಪಂಚಾಯತ್ ನಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ.
2015 ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಯಲ್ಲಿ ವರ್ಕಾಡಿ 3ನೇ ಡಿವಿಷನ್ ನಲ್ಲಿ ಜಿಲ್ಲಾ ಪಂಚಾಯತ್ ನಲ್ಲಿ ಹರ್ಷಾದ್ ವರ್ಕಾಡಿ 14,922 ಮತಗಳನ್ನು ಪಡೆದು ಕಾಂಗೆಸ್ಸ್ ಪಕ್ಷದಿಂದ ಜಯಗಳಿಸಿದ್ದರು. ಬ್ಲಾಕ್ ನಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ 4005 ಮತಗಳನ್ನು ಪಡೆದು ಜಯಗಳಿಸಿದ್ದರು.
ಈ ಬಾರಿ ಮೀಸಲಾತಿ ಬದಲಾದುದರಿಂದ ಅಭ್ಯರ್ಥಿಗಳು ಬದಲಾಗಿದ್ದಾರೆ. ಕಳೆದ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ 2,697 ಮತಗಳ ಅಂತರದಿಂದ ವಿಜಯಿಯಾಗಿತ್ತು. ಬ್ಲಾಕ್ ನಲ್ಲಿ ಮುಸ್ಲಿಂ ಲೀಗ್ ಸಿಪಿಐ ವಿರುದ್ಧ 986 ಮತಗಳ ಅಂತರದಿಂದ ವಿಜಯಗಳಿಸಿತ್ತು. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು.
ಈ ಬಾರಿ ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಕಮಲಾಕ್ಷಿ, ಬಿಜೆಪಿಯಿಂದ ಜಯಕಲಾ ಮಾಡ, ಸಿಪಿಐನಿಂದ ಪುಷ್ಪ ಜಯರಾಜ್ ಸ್ಪರ್ಧಿಸುತ್ತಿದ್ದಾರೆ.
ಬ್ಲಾಕ್ ಪಂಚಾಯತ್ ನಲ್ಲಿ ಬಿಜೆಪಿಯಿಂದ ಆನಂದ ತಚ್ಚಿರೆ , ಮುಸ್ಲಿಂ ಲೀಗ್ ನಲ್ಲಿ ಮೂಸ ಕುಂಞ, ಸಿಪಿಐ ನಲ್ಲಿ ಮೊಯ್ದಿನ್ ಕುಂಞ, ಸ್ಪರ್ಧಿಸುತ್ತಿದ್ದಾರೆ.
ಉತ್ತರ ಕೇರಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುತ್ತಿದ್ದು ಜಿಲ್ಲಾ ಪಂಚಾಯತ್ ಮತ್ತು ಬ್ಲಾಕ್ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಹುರುಪಿನಿಂದ ಮತಬೇಟೆಯಲ್ಲಿ ತೊಡಗಿದ್ದಾರೆ.
ಬ್ಲಾಕ್ ಪಂಚಾಯಿತಿಗೆ ಆನಂದ ತಚ್ಚಿರೆ ಸಮರ್ಥ ಅಭ್ಯರ್ಥಿ
ಕಳೆದ 35 ವರ್ಷಗಳಿಂದ ವರ್ಕಾಡಿ ಗ್ರಾಮ ಪಂಚಾಯತಿನ 15ನೇ ವಾರ್ಡ್ ನಲ್ಲೆಂಗಿ ಸಿಪಿಐ ಹಿಡಿತದಲ್ಲಿತ್ತು 2015 ರ ಚುನಾವಣೆಯಲ್ಲಿ ಆನಂದ ತಚ್ಚಿರೆ ಅವರು 492 ಮತಗಳನ್ನು ಪಡೆದು ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ್ದರು. ಬಡವರಿಗೆ, ಕಾರ್ಮಿಕ ವರ್ಗದವರಿಗೆ, ಕೃಷಿಕರಿಗೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ತಲುಪಿಸುವುದರಲ್ಲಿ ಯಶಸ್ವೀ ಆಗಿದ್ದರು. ಗ್ರಾಮೀಣ ಸಮಸ್ಯೆಗಳಾದ ರಸ್ತೆ, ಸಾರಿಗೆ, ಕುಡಿಯುವ ನೀರು ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿದ್ದರು. ಎಲ್ಲಾ ವರ್ಗದ ಜನರೊಂದಿಗೆ ಸಾಮಾನ್ಯವಾಗಿ ಬರೆಯುವ ವ್ಯಕ್ತಿತ್ವ ಇವರದು ಬ್ಲಾಕ್ ಪಂಚಾಯತಿನಲ್ಲಿ ಬಿರುಸಿನಿಂದ ಪ್ರಚಾರ ನಡೆಸುತ್ತಿದ್ದು ಮತದಾರರು ನನ್ನ ಕಡೆ ಬೆಂಬಲ ನೀಡುತ್ತಿದ್ದಾರೆ ಎಂದಿದ್ದಾರೆ.
Click this button or press Ctrl+G to toggle between Kannada and English