ಪುತ್ತೂರು ನಗರಸಭೆ ಚುನಾವಣೆಯಲ್ಲಿ  ಮತ ಹಕ್ಕು ಚಲಾಯಿಸಿದ ಕೇಂದ್ರ ಸಚಿವ ಸದಾನಂದಗೌಡ

3:19 PM, Friday, August 31st, 2018
Share
1 Star2 Stars3 Stars4 Stars5 Stars
(No Ratings Yet)
Loading...

sadanand-gowdaಮಂಗಳೂರು: ಪುತ್ತೂರು ನಗರಸಭೆ ಚುನಾವಣೆ ಹಿನ್ನೆಲೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಮತದಾನ ಮಾಡಿದರು. ಪುತ್ತೂರಿನ ಹಾರಾಡಿ ಶಾಲೆಯಲ್ಲಿ ಮತ ಚಲಾಯಿಸಿದ ಸದಾನಂದಗೌಡ, ಚುನಾವಣೆಯಲ್ಲಿ ಹೆಚ್ಚಿನ ಕಡೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರಕಾರದ ನೂರು ದಿನಕ್ಕೆ ಜನರು ಬೇಸರದಲ್ಲಿದ್ದಾರೆ. ಸರಕಾರ ಬರೀ ಘೋಷಣೆ, ಆಶ್ವಾಸನೆಗಳಿಗೆ ಸೀಮಿತವಾಗಿದೆ. ಸಮ್ಮಿಶ್ರ ಸರಕಾರದಲ್ಲಿ ಅಸಮಾಧಾನವೇ ತುಂಬಿದೆ. ಇಂತಹ ಅಸ್ಥಿರ ಸರಕಾರ ಕರ್ನಾಟಕದಲ್ಲಿ ಹಿಂದೆಂದೂ ಇರಲಿಲ್ಲ ಎಂದರು.

ಪದೇ ಪದೆ ನಡೆಯುವ ಚುನಾವಣೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಏಕಕಾಲದಲ್ಲಿ ಚುನಾವಣೆ ನಡೆದರೆ ಅನುಕೂಲ. ಇದಕ್ಕೆ ಜನರ ಸಹಮತ ಕೂಡ ಇದೆ ಎಂದರು.

ಭೀಮಾ ಗೋರೆಗಾಂವ್ ಪ್ರಕರಣದಲ್ಲಿ ಬಂಧಿತರಾದವರು ದೇಶದ ಭದ್ರತೆಗೆ ಕಂಟಕವಾಗಿದ್ದಾರೆ. ನರೇಂದ್ರ ಮೋದಿ ಸರಕಾರ ದೇಶದ ಭದ್ರತೆಯ ದೃಷ್ಟಿಯಿಂದ ಕಠಿಣ ಕ್ರಮ ಜರುಗಿಸಲಿದೆ. ಪ್ರತಿಪಕ್ಷಗಳಿಗೆ ಬೇರೆ ವಿಚಾರವಿಲ್ಲದ ಕಾರಣ ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದೆ ಎಂದರು.

ಶಿರಾಡಿ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಶೀಘ್ರ ತೆರೆಯಬೇಕು. ಈ ಸಂಬಂಧ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಬಳಿ ಮಾತನಾಡಲಾಗಿದೆ. ಘಾಟ್ ರಸ್ತೆಯನ್ನು ಆರು ತಿಂಗಳು ಬಂದ್ ಮಾಡುವ ಸಹಮತವಿಲ್ಲ. ಈ ರೀತಿ ಮಾಡಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರನ್ನು ಬೇರ್ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದವರು ಆಪಾದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English