ಮಂಗಳೂರು: ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ಮಾಡಿದ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್ನ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ ರದ್ದುಗೊಳಿಸಿ ಆದೇಶ ಹೊರಡಿದೆ.
2018 ರ ಜು. 18ರಂದು ನಗರದ ಪಿವಿಎಸ್ ಸಮೀಪದ ಪಿ.ಕೆ. ಹೆಲ್ತ್ ಕ್ಯೂರ್ ಮೆಡಿಕಲ್ ಶಾಪ್‌ನಲ್ಲಿ ಯಾವುದೇ ವೈದ್ಯರ ಚೀಟಿ ಇಲ್ಲದೆ ಮತ್ತು ಬರಿಸುವ ಔಷಧಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಂತೆ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉರ್ವ ಪೊಲೀಸ್ ಠಾಣಾ ನಿರೀಕ್ಷಕರು ಹಗೂ ಮಂಗಳೂರು ಪೂರ್ವ ಠಾಣಾ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ದಾಳಿ ನಡೆಸಿ, ನಿಷೇಧಿತ ಔಷಧ ವಶಪಡಿಸಿಕೊಂಡಿದ್ದರು.
ಮೆಡಿಕಲ್ ಶಾಪ್ ಮಾಲೀಕರ ವಿರುದ್ಧ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆಯ ಸಮಯ ಪಿ.ಕೆ. ಕ್ಯೂರ್ ಮೆಡಿಕಲ್ ಶಾಪ್‌ನವರು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಮತ್ತು ನಿಯಮಾವಳಿಗಳು 1945ರಡಿ ನಿಯಮ 65 ‘ಎ’ ರಲ್ಲಿನ ಉಪ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರದಲ್ಲಿ ತೊಡಗಿದ್ದು ದೃಢಪಟ್ಟ ಕಾರಣ ಆ. 31ರಂದು ಸಂಸ್ಥೆಯ ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
Click this button or press Ctrl+G to toggle between Kannada and English