ಕದ್ರಿ ಮತ್ತು ಅತ್ತಾವರದಲ್ಲಿ ಮೊಸರು ಕುಡಿಕೆ ಉತ್ಸವ

2:15 PM, Tuesday, September 4th, 2018
Share
1 Star2 Stars3 Stars4 Stars5 Stars
(4 rating, 1 votes)
Loading...

shree-krishnaಮಂಗಳೂರು: ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿಯ ಅತ್ತಾವರ ಮುಂಡತ್ತಾಯ ದೇವಸ್ಥಾನದಲ್ಲಿ ಟೇಬಲ್ಯೂಕ್ಸ್ ಮತ್ತು ಇತರ ಮನರಂಜನಾ ತಂಡಗಳೊಂದಿಗೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. 109 ನೇ ಮೊಸರು ಕುಡಿಕೆಯನ್ನು ಸಂಗೀತ ರಾತ್ರಿ ಮತ್ತು ಇತರ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ಆಚರಿಸಲಾಯಿತು.  ಮಂಗಳೂರಿನಲ್ಲಿ ಶ್ರೀ ಕೃಷ್ಣ ಜನ್ಮದಿನದ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ನಡೆಯಿತು. ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಿತು.

ಕದ್ರಿ ಮಂಜುನಾಥ ದೇವಸ್ಥಾನದ ವಠಾರ, ಉತ್ಸವ ನಡೆದ ರಸ್ತೆಗಳು, ಬೀದಿಗಳು ಶೃಂಗಾರಗೊಂಡಿದ್ದವು. ದಾರಿಯುದ್ದಕ್ಕೂ ಎತ್ತರದ ಕಮಾನುಗಳನ್ನು ಕಟ್ಟಿ ಅದರಲ್ಲಿ ವಿವಿಧ ಬಣ್ಣಗಳ, ಆಕಾರದ ಮೊಸರಿನ ಗಡಿಗೆಗಳನ್ನು ಕಟ್ಟಲಾಗಿತ್ತು. ಅದರೊಂದಿಗೆ ಬಾಳೆ ಹಣ್ಣು, ಚಕ್ಕುಲಿ,ಉಂಡೆ ಮತ್ತಿತರ ಇತರ ಸಿಹಿ ಪದಾರ್ಥಗಳನ್ನು ಈ ಕಮಾನುಗಳಿಗೆ ತೂಗು ಹಾಕಲಾಗಿತ್ತು.

‌ಸಂಜೆ ಶ್ರೀ ಗೋಪಾಲಕೃಷ್ಣ ಮಠದಿಂದ ಭವ್ಯಾಲಂಕೃತ ಮಂಟಪದಲ್ಲಿ ಶ್ರೀಕೃಷ್ಣನ ಭಜನೆ, ವಿದ್ಯುದೀಪಾಂಕೃತವಾದ ಸ್ತಬ್ಧ ಚಿತ್ರಗಳು, ವಾದ್ಯವೃಂದ, ದಾಂಡಿಯಾ ನೃತ್ಯ, ಚೆಂಡೆ, ಬೊಂಬೆಕುಣಿತಗಳು, ವಿವಿಧ ವೇಷಗಳು, ಆಕರ್ಷಕ ಸುಡುಮದ್ದುಗಳ ಪ್ರದರ್ಶನ ದೊಂದಿಗೆ ಮೆರವಣಿಗೆ ನಡೆಯಿತು. ಈ ಮೆರವಣಿಗೆ ಮೊಸರುಕುಡಿಕೆ ತಂಡದೊಂದಿಗೆ ಹೊರಟು ಕದ್ರಿಕಂಬಳ ರಸ್ತೆ, ಮಲ್ಲಿಕಟ್ಟೆ, ಮೂಲಕ ಸಾಗಿ ಕದ್ರಿ ದೇವಾಲಯದ ರಾಜಾಂಗಣವನ್ನು ತಲುಪಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಪರಿಣತ ಸಾಹಸಿ ಯುವಕರ ತಂಡ ಗಡಿಗೆಗಳನ್ನು ಒಡೆಯುತ್ತಾ ಸಾಗಿ ಗಮನ ಸೆಳೆದ್ರು.‌ ಸಾವಿರಾರು ಜನ ರಸ್ತೆ ಉದ್ದಕ್ಕೂ ನಿಂತು ಈ ಸಂಭ್ರಮಕ್ಕೆ ಸಾಕ್ಷಿಯಾದರು.

shree-krishna-2

shree-krishna-3

shree-krishna-4

shree-krishna-5

shree-krishna-6

shree-krishna-7

shree-krishna-8

shree-krishna-9

shree-krishna-10

shree-krishna-11

shree-krishna-12

shree-krishna-14

shree-krishna-15

shree-krishna-16

shree-krishna-17

shree-krishna-18

shree-krishna-19

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English