ಮಂಗಳೂರು ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನ ವಿಫಲ : ವೇದವ್ಯಾಸ್ ಕಾಮತ್

2:40 PM, Monday, September 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kamathಮಂಗಳೂರು : ಶಾಂತಿ ಯುತವಾಗಿದ್ದ ಮಂಗಳೂರು ನಗರವನ್ನು ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್  ಹೊರಟಿದೆ ಇಂದು ಕರೆದ ಭಾರತ ಬಂದ್  ಕರೆ ಸಂಪೂರ್ಣ ವಿಫಲವಾಗಿದೆ . ನಗರದ ಮಹಾ ಜನತೆ ಬುದ್ಧಿವಂತರಾಗಿದ್ದು ಬಂದ್ ಕರೆಗೆ ಹೆಚ್ಚಿನ ಅಂಗಡಿ ಮುಂಗಟ್ಟು ಗಳು ತೆರೆದಿದ್ದು ಎಂದಿನಂತೆ ವ್ಯಾಪಾರ ವಹಿವಾಟು ನಡೆದಿರುತ್ತದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ .

ಮುಂದಿನ ದಿನಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ದ್ರಷ್ಟಿಯಿಂದ ಈ ಜನ ವಿರೋಧಿ ಬಂದ್ ಕರೆಯಲಾಗಿದೆ . ಜಿಲ್ಲೆಯ ಹೆಚ್ಚಿನ ಪ್ರದೇಶಗಳ್ಳಲ್ಲಿ ಸರ್ಕಾರೀ ಬಸ್ಸು ಹಾಗೂ ಖಾಸಗಿ ಶಾಲಾ ಕಾಲೇಜು ಗಳನ್ನೂ ಬಲವಂತವಾಗಿ , ಉದ್ದೇಶಪೂರ್ವಕವಾಗಿ ಬಂದನ್ನು ಯಶಸ್ವಿ ಗೊಳಿಸುವ ಉದ್ದೇಶದಿಂದ ರಜೆ ಸಾರಲಾಗಿದೆ , ಕೆಲವೊಂದು ಪ್ರದೇಶಗಳ್ಲಲಿ ಕಾಂಗ್ರೆಸ್ ಗುಂಡಾ ಗಳ ಪ್ರೇರಿತ ಅಹಿತಕರ ಘಟನೆಗಳು ನಡೆದಿದ್ದು , ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಜೆಲ್ಲೆಯ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹಾಗೂ ಎಲ್ಲಾ ಕ್ಷೇತ್ರದ ಶಾಸಕರು ಸೂಚಿಸಿ ಆದೇಶ ನೀಡಲಾಗಿದೆ , ಸಾರ್ವಜನಿಕ ಯಾವುದೇ ಸೊತ್ತುಗಳ ನಾಶ ಮಾಡಿದಲ್ಲಿ ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸುವಂತೆ ತಿಳಿಸಲಾಗಿದೆ .

ಮಂಗಳೂರಿನ ಜನತೆ ಬುದ್ಧಿವಂತ ಜನತೆ ಕಾಂಗ್ರೆಸ್ ಪಕ್ಷಕ್ಕೆ ಈ ಹಿಂದೆಯೇ ವಿಧಾನ ಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದೆ, ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲೂ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯ ಜನತೆ ಇದೆ ರೀತಿಯಲ್ಲಿ ಶಾಂತ ರೀತಿಯಲ್ಲಿ ಇದ್ದು ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಲಿದೆ ಎಂದು  ಕಾಮತ್ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English