ತುಳುನಾಡ ರಕ್ಷಣಾ ವೇದಿಕೆಗೆ ಮಂಗಳೂರು ನಗರ ನೂತನ ಸಮಿತಿ ರಚನೆ

Monday, January 18th, 2021
TRV commitee

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ನಗರದ ನೂತನ ಸಮಿತಿ ಯ ಪದಾಧಿಕಾರಿಗಳ ಆಯ್ಕೆ ಯ ಚುನಾವಣಾ ಪ್ರಕ್ರಿಯೆ ದಿನಾಂಕ 17-01-2021 ರಂದು ಅದಿತ್ಯವಾರ ಬೆಳಗ್ಗೆ 10:30 ಗಂಟೆಗೆ ಸರಿಯಾಗಿ ಸ್ಟೇಟ್ಸ್ ಬ್ಯಾಂಕ್ ಬಳಿ ಇರುವ ತುಳುನಾಡ ರಕ್ಷಣಾ ವೇದಿಕೆ ಯ ಕೇಂದ್ರ ಕಚೇರಿಯಲ್ಲಿ ನಡೆಯಿತು. 2021-23 ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಶೀರೂರು, ಉಪಾಧ್ಯಕ್ಷರಾಗಿ ಜೋಸೆಫ್ ಲೋಬೋ ಉರ್ವ , ಮುನೀರ್ ಮುಕ್ಕಚೇರಿ, ಪ್ರ.ಕಾರ್ಯದರ್ಶಿಯಾಗಿ ಫಾರೂಕ್ ಗೋಲ್ಡ್ ನ್, ಜೊತೆ ಕಾರ್ಯದರ್ಶಿಯಾಗಿ […]

ಹೈದಾರಾಬಾದ್‌ನಿಂದ ಮಂಗಳೂರು ನಗರಕ್ಕೆ ಸಾಗಾಟ ಮಾಡುತ್ತಿದ್ದ 24 ಕೆ.ಜಿ. ಗಾಂಜಾ ವಶ

Friday, November 27th, 2020
Ganja

ಮಂಗಳೂರು : ನಗರದ ಪಡೀಲ್‌ ಜಂಕ್ಷನ್‌ನಿಂದ ಬಿಕರ್ನಕಟ್ಟೆ ಬರುವ ರಸ್ತೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆಂಧ್ರ ಪ್ರದೇಶದ ಹೈದಾರಾಬಾದ್‌ನಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಸುಮಾರು 24 ಕೆ.ಜಿ. ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕೇರಳದ ಕಾಸರಗೋಡು ನಿವಾಸಿಗಳಾದ ಇಬ್ರಾಹಿಂ ಮಡನ್ನೂರು ಹಾಗೂ ಅಬ್ದುಲ್‌ ನಿಜಾದ್‌ ಎಂದು ಗುರುತಿಸಲಾಗಿದೆ. ಆರೋಪಿತರಿಂದ 3,60,000 ರೂ. ಮೌಲ್ಯದ ಸುಮಾರು 24 ಕೆ.ಜಿ. ಗಾಂಜಾ ಹಾಗೂ 2 ಲಕ್ಷ ಮೌಲ್ಯದ ಟೂರಿಸ್ಟ್‌ ಕಾರು ಹಾಗೂ 23 […]

ಮಂಗಳೂರು ನಗರಕ್ಕೆ ಬಂದ ಹೆಬ್ಬಾವು

Tuesday, August 18th, 2020
snake

ಮಂಗಳೂರು  : ನಗರದ ಹೃದಯ ಭಾಗ ಜಿ.ಹೆಚ್.ಎಸ್. ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೆಲವು ಪಾದಚಾರಿಗಳು ಗಲಿಬಿಲಿ ಗೊಂಡಿದ್ದರು. ಈ ವೇಳೆ ಕೆಲವರು ತರಕಾರಿಗಳನ್ನಿಡುವ ಟ್ರೇಯನ್ನು ಹೆಬ್ಬಾವು ಮೇಲೆ ಹಾಕಿ ಅದು ಚಲಿಸದಂತೆ ಮಾಡಿದ್ದಾರೆ. ಬಳಿಕ ಪೈಪ್‌ವೊಂದರ ಮತ್ತೊಂದು ಭಾಗದಲ್ಲಿ ಗೋಣಿಚೀಲವನ್ನಿಟ್ಟು ಪೈಪ್‌ನೊಳಗೆ ಹಾವು ಹೋಗುವಂತೆ ಮಾಡಲಾಯಿತು. ಗೋಣಿ ಚೀಲದೊಳಗೆ ಹೋದ ಹೆಬ್ಬಾವನ್ನು ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

ಮಂಗಳೂರು ನಗರದಲ್ಲಿ ಮೇ 5 – 6 : ನೀರು ಸರಬರಾಜಿನಲ್ಲಿ ವ್ಯತ್ಯಯ

Monday, May 4th, 2020
Water Cut

ಮಂಗಳೂರು : ಮಂಗಳೂರು ಮಹಾನರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಹೆಚ್.ಎಲ್.ಪಿ.ಎಸ್.-2 ಮತ್ತು ಎಲ್.ಎಲ್.ಪಿ.ಎಸ್.-2 ಸ್ಥಾವರಗಳಿಗೆ ವಿದ್ಯುತ್ ಪೂರೈಕೆ ಮಾಡುವ 33 ಕೆ.ವಿ ತಂತಿಗಳನ್ನು ಮೆಸ್ಕಾಂ ವತಿಯಿಂದ ಸ್ಥಳಾಂತರಿಸುವ ಕೆಲಸವನ್ನು ಮೇ 5 ರಂದು ಹಮ್ಮಿಕೊಂಡಿರುವುದರಿಂದ  ಹೆಚ್.ಎಲ್.ಪಿ.ಎಸ್.-2 ಮತ್ತು ಎಲ್.ಎಲ್.ಪಿ.ಎಸ್.-2 ಸ್ಥಾವರಗಳಿಗೆ ವಿದ್ಯುತ್  ಪೂರೈಕೆ ನಿಲುಗಡೆಗೊಳ್ಳುವುದರಿಂದ ನೀರು ಸರಬರಾಜನ್ನು ಮೇ 5 ರಂದು ಬೆಳಿಗ್ಗೆ 8 ಗಂಟೆಯಿಂದ ಮೇ 6 ರಂದು ಬೆಳಿಗ್ಗೆ 8 ಗಂಟೆವರೆಗೆ 24 ಗಂಟೆ ಅವಧಿಯಲ್ಲಿ ಪಡೀಲ್ ಸ್ಥಾವರದಿಂದ ನೀರು ಪಡೆಯುವ ಪ್ರದೇಶಗಳಾದ ಬಜಾಲ್, […]

ಮಂಗಳೂರು ನಗರದಲ್ಲಿ ಮಹಿಳೆಗೆ ಕೋವಿಡ್-19 ಸೋಂಕು ದೃಢ

Thursday, April 30th, 2020
Bolooru Covid

ಮಂಗಳೂರು: ನಗರದ ಬೋಳೂರು ಪ್ರದೇಶದ ಮಹಿಳೆಯೋರ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೋಳೂರು ಪ್ರದೇಶದ 58 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ಇರುವುದು ಆಕೆಯ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಗುರುವಾರ ದೃಢಪಟ್ಟಿದೆ. ಸೋಂಕಿತ ಸಂಖ್ಯೆ 501ರ ಸಂಪರ್ಕದಿಂದ ಈ ಮಹಿಳೆಗೆ ಸೋಂಕು ತಾಗಿರುವುದು ಖಚಿತವಾಗಿದೆ. ಬೋಳೂರಿನ ಮಹಿಳಿಗೆ ಸೋಂಕು ತಾಗಿರುವುದು ದೃಢಪಟ್ಟ ಹಿನ್ನಲೆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಬ್ಯಾರಿಕೇಡ್ ಗಳನ್ನು ತಂದು ಹಾಕಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ 557 ಸೋಂಕು […]

ಮಂಗಳೂರು ನಗರ ದಕ್ಷಿಣದಲ್ಲಿ 21 ಲಕ್ಷದ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ

Monday, December 16th, 2019
puje

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರ ಸೂಚನೆಯಂತೆ ಸ್ಥಳೀಯ ಮುಖಂಡರು ಗುದ್ದಲಿಪೂಜೆ ನೆರವೇರಿಸಿದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಶಾಸಕರು, ಜೆಪ್ಪು ವಾರ್ಡಿನ ರೈಲ್ವೇ ಗೇಟಿನಿಂದ ಕನಕರಬೆಟ್ಟು ರಸ್ತೆಗೆ 7 ಲಕ್ಷದ ಕಾಂಕ್ರೀಟೀಕರಣದ ಕಾಮಗಾರಿ, ಅಳಪೆ ಉತ್ತರ ವಾರ್ಡಿನಲ್ಲಿ ತೋಡು ದುರಸ್ತಿ ಕಾಮಗಾರಿಗೆ 7 ಲಕ್ಷ, ಕೊಡಿಯಾಲ್ ಬೈಲ್ ವಾರ್ಡಿನಲ್ಲಿ 7 ಲಕ್ಷ ರೂ ವೆಚ್ಚದ ತಡೆಗೋಡೆ ದುರಸ್ತಿ ಕಾಮಗಾರಿಗಳಿಗೆ ಸಾರ್ವಜನಿಕರ ಮೂಲಕ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಶೀಘ್ರವೇ […]

ಮಂಗಳೂರು ನಗರ ದಕ್ಷಿಣದ ದೇವಸ್ಥಾನಗಳಿಗೆ 80 ಲಕ್ಷ ಅನುದಾನ : ಶಾಸಕ ವೇದವ್ಯಾಸ್ ಕಾಮತ್

Wednesday, December 11th, 2019
Vedhavyas

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯ 4 ದೇವಸ್ಥಾನಗಳಿಗೆ ಮುಜರಾಯಿ ಇಲಾಖೆಯಿಂದ 80 ಲಕ್ಷ ಬಿಡುಗಡೆಯಾಗಿದೆ. ಬೋಳೂರು ಜಾರಂದಾಯ ದೈವಸ್ಥಾನ, ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನ ಹಾಗೂ ರಥಬೀದಿ ಕಾಳಿಕಾಂಬ ವಿನಾಯಕ ದೇವಸ್ಥಾನಕ್ಕೆ ತಲಾ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಮಂಗಳೂರು ನಗರ ದಕ್ಷಿಣದ ಜನರ ನಂಬಿಕೆ ಹಾಗೂ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಈ ಅನುದಾನ ಬಿಡುಗಡೆಯಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಹಾಗೂ ಜಿಲ್ಲಾ ಉಸ್ತುವಾರಿ […]

ಗಣೇಶ ಹಬ್ಬದ ತಯಾರಿಯಲ್ಲಿ ಮಂಗಳೂರು ನಗರ

Wednesday, September 12th, 2018
Ganesha Fesival

ಮಂಗಳೂರು : ಭಾದ್ರಪದ ಶುಕ್ಲದ ಶುದ್ಧ ಚೌತಿಯಂದು ಗಣೇಶ ಹುಟ್ಟಿದ ಹಬ್ಬವನ್ನು ಬಹಳ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಅದು ಕೇವಲ ಒಂದು ಊರಿಗೆ ಅಥವ ಕೇರಿಗೆ ಸಂಭದಿಸಿಸುದಲ್ಲ, ಆ ಗಣೇಶನ ಮಹಿಮೆಯನ್ನು ದೇಶ ವಿದೇಶಗಳಲ್ಲೂ ಆಚರಿಸುತ್ತಾರೆ. ಅಷ್ಟೇ ಏಕೆ, ಜಾತಿ ಮತ ಬೇದವನ್ನು ಮರೆತು ಗಣೇಶ ಹಬ್ಬವನ್ನು ಆಚರಿಸಲಾಗುತ್ತಿದೆ. ಗಣಪನಿಗೆ ಸಿಹಿ ತಿನಿಸುಗಳೆಂದರೆ ಬಲು ಇಷ್ಟ ಅದರಲ್ಲೂ ಕಬ್ಬು, ಎಳ್ಳು, ಮೊದಕಗಳೆಂದರೆ ಪಂಚಪ್ರಾಣ. ಆತನ ಭಕ್ತರು ಏನೂ ಇಲ್ಲ ಎಂದರೂ ಕಬ್ಬು, ಎಳ್ಳು, ಪಂಚಾಮೃತ, ಬೆಲ್ಲ, ಪಾಯಸ ಮೊದಲಾದವುಗಳನ್ನು […]

ಮಂಗಳೂರು ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನ ವಿಫಲ : ವೇದವ್ಯಾಸ್ ಕಾಮತ್

Monday, September 10th, 2018
kamath

ಮಂಗಳೂರು : ಶಾಂತಿ ಯುತವಾಗಿದ್ದ ಮಂಗಳೂರು ನಗರವನ್ನು ಭಯದ ವಾತಾವರಣ ಸೃಷ್ಟಿಸಲು ಕಾಂಗ್ರೆಸ್  ಹೊರಟಿದೆ ಇಂದು ಕರೆದ ಭಾರತ ಬಂದ್  ಕರೆ ಸಂಪೂರ್ಣ ವಿಫಲವಾಗಿದೆ . ನಗರದ ಮಹಾ ಜನತೆ ಬುದ್ಧಿವಂತರಾಗಿದ್ದು ಬಂದ್ ಕರೆಗೆ ಹೆಚ್ಚಿನ ಅಂಗಡಿ ಮುಂಗಟ್ಟು ಗಳು ತೆರೆದಿದ್ದು ಎಂದಿನಂತೆ ವ್ಯಾಪಾರ ವಹಿವಾಟು ನಡೆದಿರುತ್ತದೆ ಎಂದು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ . ಮುಂದಿನ ದಿನಗಳಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ದ್ರಷ್ಟಿಯಿಂದ ಈ ಜನ ವಿರೋಧಿ ಬಂದ್ ಕರೆಯಲಾಗಿದೆ . ಜಿಲ್ಲೆಯ […]

ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಶಾಂತಲಾ ಗಟ್ಟಿ

Monday, August 27th, 2018
shanthala gatty

ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಶ್ರೀಮತಿ ಶಾಂತಲಾ ಗಟ್ಟಿ ಇವರನ್ನು ನೇಮಕಾತಿ ಗೊಳಿಸಲಾಯಿತು. ಮಾಜಿ ಶಾಸಕರಾದ ಜೆ.ಆರ್ ಲೋಬೋರವರ ಆದೇಶದಂತೆ, ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ ರವರ ಮಾನ್ಯತೆ ಮೇರೆಗೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶಾಲೆಟ್ ಪಿಂಟೋರವರು ನೇಮಕಾತಿಗೊಳಿಸಿದರು. ಕೆ.ಪಿ.ಸಿ.ಸಿ ಅಧ್ಯಕ್ಷ ಶ್ರೀ ದಿನೇಶ್ ಗುಂಡುರಾವ್ ರವರು ಕಾರ್ಯಕ್ರಮ ವೊಂದರಲ್ಲಿ ಆದೇಶ ಪತ್ರ ಹಸ್ತಾಂತರಿಸಿದರು.