ಮಂಗಳೂರು : ನಗರದ ಹೃದಯ ಭಾಗ ಜಿ.ಹೆಚ್.ಎಸ್. ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೆಲವು ಪಾದಚಾರಿಗಳು ಗಲಿಬಿಲಿ ಗೊಂಡಿದ್ದರು.
ಈ ವೇಳೆ ಕೆಲವರು ತರಕಾರಿಗಳನ್ನಿಡುವ ಟ್ರೇಯನ್ನು ಹೆಬ್ಬಾವು ಮೇಲೆ ಹಾಕಿ ಅದು ಚಲಿಸದಂತೆ ಮಾಡಿದ್ದಾರೆ.
ಬಳಿಕ ಪೈಪ್ವೊಂದರ ಮತ್ತೊಂದು ಭಾಗದಲ್ಲಿ ಗೋಣಿಚೀಲವನ್ನಿಟ್ಟು ಪೈಪ್ನೊಳಗೆ ಹಾವು ಹೋಗುವಂತೆ ಮಾಡಲಾಯಿತು. ಗೋಣಿ ಚೀಲದೊಳಗೆ ಹೋದ ಹೆಬ್ಬಾವನ್ನು ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.
Click this button or press Ctrl+G to toggle between Kannada and English