ಮಂಗಳೂರು : ಇಂಧನಗಳ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನೀಡಿದ್ದ ಕರೆಯ ಮೇರೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಹಂಪನಕಟ್ಟೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಯಿತು.
ಮೆರವಣಿಗೆಯ ಸಂದರ್ಭ ಎತ್ತಿನಗಾಡಿ, ಬೈಕ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್, ಕಟ್ಟಿಗೆಯನ್ನಿಟ್ಟು ವಿನೂತನವಾಗಿ ಪ್ರತಿರೋಧವನ್ನು ಪ್ರದರ್ಶಿಸಲಾಯಿತು. ಐವನ್ ಡಿಸೋಜ ತಮ್ಮ ಚತುಷ್ಚಕ್ರ ವಾಹನವನ್ನು ದೂಡಿಕೊಂಡು ಬಂದರಲ್ಲದೆ, ಸೈಕಲ್ ಏರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಪ್ರದರ್ಶನದ ವೇಳೆ ಐವನ್ ಡಿಸೋಜ ವೇದಿಕೆಯಲ್ಲಿ ಕಟ್ಟಿಗೆ ಹೊರೆಯನ್ನು ತಲೆ ಮೇಲೆ ಹೊತ್ತುಕೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಎದುರು ನಡು ರಸ್ತೆಯಲ್ಲೇ ಒಲೆ ಉರಿಸಿ ಚಹಾ ತಯಾರಿಸಿದ ಪ್ರಸಂಗವೂ ನಡೆಯಿತು.
Click this button or press Ctrl+G to toggle between Kannada and English