ಮುಂಬೈ: ತೈಲ ಬೆಲೆಗೆ ನಿಯಂತ್ರಣಕ್ಕಾಗಿ ಆಡಳಿತ ಪಕ್ಷ, ಪ್ರತಿಪಕ್ಷ, ಜನಸಾಮಾನ್ಯರು ಏನಲ್ಲಾ ಮಾಡುತ್ತಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಮಾತ್ರ ಮೌಂಟ್ ಎವರೆಸ್ಟ್ ಎತ್ತರಕ್ಕೆ ಏರುತ್ತಲೇ ಇದೆ. ಇಂದೂ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಅಚ್ಚೆ ದಿನ್ ಕಬ್ ಆಯೇಂಗೆ ಎಂದು ಜನರು ಪ್ರಶ್ನಿಸುವಂತಾಗಿದೆ.
ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ 81.28 ರೂ. ಹಾಗೂ ಡೀಸೆಲ್ ಬೆಲೆ 73.30 ರೂ. ಆಗಿದೆ. ನಿನ್ನೆಗಿಂತ ಕ್ರಮವಾಗಿ 28 ಪೈಸೆ ಹಾಗೂ 22 ಪೈಸೆಯಷ್ಟು ಏರಿಕೆಯಾಗಿದೆ. ಅಂತೆಯೆ, ಮುಂಬೈನಲ್ಲಿ ಪೆಟ್ರೋಲ್ 28 ಪೈಸೆ ಹಾಗೂ ಡೀಸೆಲ್ 24 ಪೈಸೆಯಷ್ಟು ಏರಿಕೆಯಾಗಿದೆ. ಇಂದು ಪೆಟ್ರೋಲ್ 88.67 ರೂ. ಹಾಗೂ ಡೀಸೆಲ್ 77.82 ರೂ.ಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿಯೂ ಕೆಲವು ಪೈಸೆಗಳಷ್ಟು ಏರಿಕೆ ಕಂಡಿದ್ದು, ಪೆಟ್ರೋಲ್ 83.74 ರೂ. ಹಾಗೂ ಡೀಸೆಲ್ 75.52 ರೂ.ಗಳಿಗೆ ಜಿಗಿದಿದೆ.
ನಿತ್ಯವೂ ಏರಿಕೆ ಕಾಣುತ್ತಿರುವ ತೈಲ ಬೆಲೆಯಿಂದಾಗಿ ವಾಹನ ಸವಾರರು ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ. ಸರ್ಕಾರ ಏನು ಮಾಡುತ್ತಿದೆ. ತೈಲ ಬೆಲೆಯನ್ನು ಮೊದಲು ಇಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
Click this button or press Ctrl+G to toggle between Kannada and English