ಕುಂದಾಪುರ: ತುಳುನಾಡಿನ ಸಂಸ್ಕøತಿ ಅದು ಸಮಗ್ರ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿಯ ದೈವಾರಾಧನೆಯಾಗಲೀ, ಆಚಾರ-ವಿಚಾರವಾಗಲಿ ಇವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಭಾಷೆಯಲ್ಲ ಅದು ಒಂದು ದೇಶ. ಅದರಲ್ಲಿ ಸಂಸ್ಕøತಿ ಅಡಗಿದೆ ಆ ಸಂಸ್ಕøತಿಯನ್ನು ಗಟ್ಟಿಗೊಳಿಸುವುದು ತುಳುನಾಡೋಚ್ಚಯ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಅಪ್ಪಣ್ಣ ಹೆಗ್ಡೆ ಬಸ್ರೂರು ಅಭಿಪ್ರಾಯಪಟ್ಟರು. ಅವರು ಬಸ್ರೂರಿನ ನಿವೇದಿತಾ ಫ್ರೌಢಶಾಲೆಯಲ್ಲಿ ನಡೆದ ತುಳುನಾಡೋಚ್ಚಯದ ಸ್ವಾಗತ ಸಮಿತಿ ರೂಪೀಕರಣದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತುಳು ಎಂದರೆ ದ್ರಾವಿಡ ಸಂಸ್ಕøತಿ, ಕನ್ನಡ, ಕುಂದಗನ್ನಡವು ದ್ರಾವಿಡ ಸಂಸ್ಕøತಿಯ ಮೂಲವಾಗಿದೆ. ಕುಂದಾಪುರದಲ್ಲಿ ಹಲವಾರು ಕುಟುಂಬಗಳು ತುಳು ಮತ್ತು ಕುಂದಗನ್ನಡ ಭಾಷೆಗಳ ಸಮ್ಮಿಲನವಾಗಿದೆ. ಈ ಭಾಷಾ ಬಾಂಧವ್ಯವನ್ನು ಇನ್ನಷ್ಟು ಬೆಳೆಸುವ ಬೆಸುಗೆಯಾಗಿ ತುಳುನಾಡೋಚ್ಚಯ ಮೂಡಿಬರಲಿ ಎಂದು ಡಾ. ಕನರಾಡಿ ವಾದಿರಾಜ್ ಭಟ್ಟ್ ಆಶಿಸಿದರು.
ಸಭೆಯನ್ನುದ್ದೇಶಿಸಿ ತುಳುವೆರೆ ಆಯನೊ ಕೂಟ ಕುಡ್ಲದ ಗೌರವಾಧ್ಯಕ್ಷರಾದ ಡಾ. ಆರೂರು ಪ್ರಸಾದ್ ರಾವ್ ಮಾತನಾಡಿ ಬಸ್ರೂರಿನಲ್ಲಿರುವ ತುಳುವೇಶ್ವರನ ಅಭಿವೃದ್ಧಿಯ ಕೆಲಸವು ಈ ಕಾರ್ಯಕ್ರಮದ ಜೊತೆ ನಡೆಯ ಬೇಕಿರುವುದರಿಂದ ಇದು ಒಂದು ಧಾರ್ಮಿಕ ಕಾರ್ಯಕ್ರಮವೂ ಆಗಿದೆ. ಆದುದರಿಂದ ಎಲ್ಲರೂ ಈ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾಗಿ ಸಹಕರಿಸಬೇಕು ಎಂದು ವಿನಂತಿಸಿದರು.
ವಿಶ್ವ ತುಳುವೆರೆ ಆಯನೊ ಕೂಟ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಒಡಿಪು ತುಳು ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಸ್ರೂರಿನಲ್ಲಿ “ತುಳುನಾಡಿನಲ್ಲಿ ಜಾತಿ,ಮತ,ಭಾಷಾ ಸೌಹಾರ್ದತೆ” ಎಂಬ ನೆಲೆಗಟ್ಟಿನಲ್ಲಿ “ತುಳುನಾಡೋಚ್ಚಯ 2018” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ.
ಪ್ರಸ್ತುತ ಕರಾವಳಿ ಜಿಲ್ಲೆಗಳ ಪರಿಸ್ಥಿತಿಯಲ್ಲಿ ಭಾವೈಕ್ಯತೆಯನ್ನುಂಟು ಮಾಡುವುದು ಮತ್ತು ತುಳು ಭಾಷಾ ಸಂಸ್ಕøತಿಯನ್ನು ಇನ್ನಷ್ಟು ಬಲಪಡಿಸುವುದು “ತುಳುನಾಡೋಚ್ಚಯ 2018″ರÀ ಮೂಲ ಉದ್ದೇಶವಾಗಿದೆ. ಅಲ್ಲದೆ ಬಸ್ರೂರಿನÀ ಪ್ರಾಚೀನ ತುಳುಸಂಸ್ಕøತಿಯ ಅನಾವರಣವನ್ನು ಜಗತ್ತಿಗೆ ಪರಿಚಯಿಸುವುದು ಮತ್ತು ಪುರಾತನ ದೇವಾಲಯವಾದ ತುಳುವೇಶ್ವರನ ಅಭಿವೃದ್ಧಿ ಹಾಗೂ ಹೆಚ್ಚಿನ ಜನಾಕರ್ಷಣೆ ಸೆಳೆಯುವುದು ಪ್ರಮುಖ ಉದ್ದೇಶವಾಗಿದೆ.
ಡಿಸೆಂಬರ್ ತಿಂಗಳಲ್ಲಿ ನಡೆಯುವ “ತುಳುನಾಡೋಚ್ಚಯ”ದಲ್ಲಿ ತುಳುನಾಡ ಭಾಷಾ ಸಂಸ್ಕøತಿಯ ಹಾಗೂ ಜಾತಿ,ಮತ,ಭಾಷಾ ಸೌಹಾರ್ದತೆಯನ್ನು ಸಾರುವ ವಿವಿಧ ಗೋಷ್ಠಿ, ಪ್ರಾತ್ಯಕ್ಷಿಕೆ ಮತ್ತು ವಸ್ತು ಪ್ರದರ್ಶನಗಳು, ಜಾನಪದ ಪ್ರದರ್ಶನಗಳು, ಆಹಾರೋತ್ಸವ, ಕುಲ ಕಸುಬು ಪ್ರದರ್ಶನಗಳು ನಡೆಯಲಿವೆ.
ಸಮ್ಮೇಳನದಲ್ಲಿ ಕನ್ನಡ, ತುಳು, ಕುಂದಗನ್ನಡ, ಕೊಂಕಣಿ, ಮರಾಠಿ, ಹವ್ಯಕ, ಶಿವಳ್ಳಿ, ಮಲೆಯಾಳ, ಮಾವಿಲ, ಉರ್ದು, ಕರ್ಹಾಡ, ಅರೆಗನ್ನಡ, ಕೊಡವ, ಕೊರಗ, ಬ್ಯಾರಿ ಭಾಷೆಗಳ ಸಾಹಿತ್ಯ, ಸಾಂಸ್ಕøತಿಕ, ಜನಪದ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಲ್ಲದೆ ತುಳು ಭಾಷಾ ಸಂಸ್ಕøತಿಯ, ಮತ್ತು ಜಾತಿ, ಮತ, ಭಾಷಾ ಸೌಹಾರ್ದತೆಗೆ ಕೊಡುಗೆ ನೀಡಿದ ಗಣ್ಯರನ್ನು ಗೌರವಿಸಲಾಗುವುದು ಎಂದು ವಿಶ್ವ ತುಳುವೆರೆ ಆಯನೊ ಕೂಟದ ಸಂಚಾಲಕ ಡಾ. ರಾಜೇಶ ಆಳ್ವ ಪ್ರಾಸ್ತವಿಕವಾಗಿ ಮಾತನಾಡಿದರು.
ತುಳುವೆರೆ ಆಯನೊ ಕೂಟ ಕುಡ್ಲದ ಅಧ್ಯಕ್ಷರಾದ ದಯಾನಂದ ಕತ್ತಲ್‍ಸಾರ್ ಅವರು ತುಳುನಾಡಿನ ದೈವಾರಾಧನೆಯ ವೈಶಿಷ್ಠ್ಯತೆಯ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತುಳುವೆರೆ ಆಯನೊ ಕೂಟ ಕಾಸರಗೋಡಿನ ಗೌರವಾಧ್ಯಕ್ಷ ಪ್ರೊ. ಎ. ಶ್ರೀನಾಥ್, ಶಾರದ ಕಾಲೇಜು ಬಸ್ರೂರಿನ ನಿವೃತ್ತ ಎಚ್.ಒ.ಡಿ ಪ್ರೊ. ಜಗದೀಶ್, ನಿವೃತ್ತ ಬಿ.ಇ.ಒ. ಗೋಪಾಲ್ ಶೆಟ್ಟಿ, ಕುóಂದಪ್ರಭಾ ಪತ್ರಿಕೆಯ ಯು.ಎಸ್. ಶೆಣೈ, ತಾಲೂಕು ಪಂಚಾಯತು ಸದಸ್ಯರಾದ ರಾಮಕಿಶನ್ ಹೆಗ್ಡೆ, ಶಾರದ ಕಾಲೇಜು ಪ್ರಾಂಶುಪಾಲರಾದ ಪ್ರೊ ಕೆ.ರಾಧಾಕೃಷ್ಣ ಶೆಟ್ಟಿ,ಮೊದಲಾದವರು ಅಭಿಪ್ರಾಯ ಮóಂಡಿಸಿದರು. ನಿವೇದಿತಾ ಪ್ರೌಢಶಾಲೆಯ ಪ್ರಾದ್ಯಾಪಕರಾದ ದಿನಕರ ಶೆಟ್ಟಿ ಸ್ವಾಗತಿಸಿ ಅಖಿ¯ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ಧನ್ಯವಾದವಿತ್ತರು.
Click this button or press Ctrl+G to toggle between Kannada and English