ಮಂಗಳೂರು : ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರನ್ನು ಖ್ಯಾತಿಗೊಳಿಸಿ , ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಣ್ಣಪ್ರಾಯದಲ್ಲೇ ಕಠಿಣ ಪರಿಶ್ರಮದ ಮೂಲಕ ಗುರಿಯನ್ನು ತಲುಪಲು ಯಶಸ್ವಿಯಾದ ತುಳುನಾಡಿನ ಹೆಮ್ಮೆಯ ಯುವ ಕ್ರೀಡಾಪಟು ಸಿಫು ವಿಕಿತ್ ಎಂ. ರವರು ದುಬೈನಲ್ಲಿ ವೃತ್ತಿ ಜೀವನ ನಡೆಸಿದ್ದ ಮಕ್ಕಳಿಗೆ ಹಾಗೂ ಯುವಕರಿಗೆ ಕರಾಟೆ ಕಲಿಸುತ್ತಿರುವ ಇವರ ಸಾಧನೆ ಅಗ್ರಗಣ್ಯ. ಮೂಲತಃ ತುಳುನಾಡಿನ ಮಂಗಳೂರಿನವರಾದ ವಿಖಿತ್ ತನ್ನ ವಿದ್ಯಾರ್ಥಿ ಜೀವನದಲ್ಲೇ ಕರಾಟೆ ಕುಂಫು ಮೊದಲಾದ ಕ್ರೀಡೆಗಳನ್ನು ಕಳಿತು ನಂತರ ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಆಗಿರುವ ಇವರ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಬೆಳ್ಳಿ ಹಾಗೂ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ, ಇವರ ಈ ಸಾಧನೆಯನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆಯು ಇಂದು ಮಂಗಳೂರಿನ ತನ್ನ ಕೇಂದ್ರೀಯ ಕಚೇರಿಯಲ್ಲಿ ಸರಳ ಸಮಾರಂಭದ ಮೂಲಕ ಇವರನ್ನು ಸನ್ಮಾನಿಸಲಾಯಿತು. ಮುಖ್ಯ ಅತೀಥಿಗಳಾಗಿ ಮಂಗಳೂರಿನ ಕ್ರೈಂ ಬ್ರಾಂಚ್ ಇನ್ಸಪೆಕ್ಟರ್ ಶಾಂತಾರಾಮ್ ಅವರು ವಿಕಿತ್ ರವರಿಗೆ ಶಾಲು ಹೊದಿಸಿ, ಹೂ ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಿದರು.
ಸ್ಥಾಪಕ ಅಧ್ಯಕ್ಷರಾದ ಶ್ರೀ ಯೋಗೀಶ್ ಶೆಟ್ಟಿ ಜೆಪ್ಪು ರವರು ಮಾತನಾಡಿ ತುಳುನಾಡಿನ ವಿಕಿತ್ ರವರ ಸಾಧನೆ ಇಂದಿನ ಯುವಕರಿಗೆ ಪ್ರೇರಣೆಯಾಗಲಿ ಹಾಗೂ ಅವರು ಇನ್ನೂ ಖ್ಯಾತಿ ಪಡೆಯಲಿ ಎಂದರು, ಗೌರವ ಸ್ವೀಕರಿಸಿ ಮಾತನಾಡಿದ ಸಿಫು ವಿಕಿತ್ ಎಂ ರವರು ತುಳುನಾಡ ರಕ್ಷಣಾ ವೇದಿಕೆಯ ಕಾರ್ಯಸಾಧನೆಗಳ ಬಗ್ಗೆ ದೂರದ ದುಬೈನಲ್ಲಿ ನನ್ನ ಸ್ನೇಹಿತರು ಹಾಗೂ ಇತರ ಮೂಲಗಳಿಂದ ತಿಳಿದಿರುತ್ತೇನೆ ನಾಡು ನುಡಿಯ ರಕ್ಷಣೆಗಾಗಿ ತುರವೇ ಹೋರಾಟ ಹಾಗೂ ಕಾರ್ಯಕ್ರಮಗಳು ಶ್ಲಾಘನೀಯ, ಈ ಸಂಘಟನೆಯಿಂದ ನನಗೆ ದೊರಕಿತದಂತಹ ಸನ್ಮಾನಕ್ಕೆ ಅಭಾರಿಯಾಗಿದ್ದೇನೆ ಎಂದರು.
ಈ ಕಾರ್ಯಕ್ರಮದಲ್ಲಿ ತುರವೇ ಕೇಂದ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಕೇಂದ್ರೀಯ ಕೋಶಾಧಿಕಾರಿ ಅಬ್ದುಲ್ ರಶೀದ್ ಜೆಪ್ಪು, ಸಂಘಟಣಾ ಕಾರ್ಯದರ್ಶಿ ಆನಂದ್ ಅಮೀನ್ ಅಡ್ಯಾರ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದಶರ್ಿ ಎಂ. ಸಿರಾಜ್ ಅಡ್ಕರೆ , ಕಂಕನಾಡಿ ಯುವ ಘಟಕದ ಅಧ್ಯಕ್ಷರಾದ ತನ್ವೀರ್, ಸ್ಟಾರ್ ಶಿಕ್ಷಣ ಸಂಸ್ಥೆಯ ಸಲೀಂ ಮಲಾರ್, ಶಿವಪ್ರಸಾದ್, ಹನೀಫ್ ಕನ್ನೂರು ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English