ಮಂಗಳೂರು: ಕೇಂದ್ರ ಸರ್ಕಾರ ಮೂರು ಬ್ಯಾಂಕುಗಳನ್ನು ವಿಲೀನ ಮಾಡುವ ಪ್ರಸ್ತಾಪವನ್ನು ಇರಿಸಿರುವ ವಿಚಾರದಿಂದ ಆಕ್ರೋಶಗೊಂಡಿರುವ ಬ್ಯಾಂಕ್ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು
ಕೇಂದ್ರ ಸರ್ಕಾರವು ರಾಷ್ಟ್ರೀಯ ಬ್ಯಾಂಕುಗಳಾದ ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾವನ್ನು ವಿಲೀನ ಮಾಡುವ ಪ್ರಸ್ತಾಪವನ್ನು ನಿನ್ನೆ ಮಾಡಿತ್ತು . ಹಣಕಾಸು ಸಚಿವ ರಂಜನ್ ಅವರು ಈ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಇದರ ವಿರುದ್ಧ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಯುನೈಟೆಡ್ ಫೋರಂ ಬ್ಯಾಂಕ್ ಯೂನಿಯನ್ ನೇತೃತ್ವದಲ್ಲಿ ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕ್ ಕಚೇರಿಯ ಮುಂದೆ ನೂರಾರು ಬ್ಯಾಂಕ್ ನೌಕರರು ಪ್ರಸ್ತಾಪವನ್ನು ವಿರೋಧಿಸಿ ಪ್ರತಿಭಟಿಸಿದರು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಈ ಪ್ರಸ್ತಾಪವನ್ನು ವಿರೋಧಿಸಿ ಪೋಷಣೆಗಳನ್ನು ಮಾಡಿದರು.
Click this button or press Ctrl+G to toggle between Kannada and English