ಬೆಂಗಳೂರು: ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ್ ನಿನ್ನೆ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ, ನಿನ್ನೆ ನಿಧನರಾಗಿದ್ದಾರೆ. ಕುಟುಂಬದವರನ್ನು ಹೊರತು ಪಡಿಸಿ ಇನ್ಯಾರಿಗೂ ಸಾವಿನ ವಿಷಯ ತಿಳಿಯಬಾರದು ಎಂದು ಮಕ್ಕಳಿಗೆ ಹೇಳಿದ್ದ ಕಾರಣ, ಅವರ ಇಚ್ಛೆಯಂತೆ ನಿನ್ನೆ ಬನಶಂಕರಿ ಚಿತಾಗಾರದಲ್ಲಿ ಕುಟುಂಬವರ್ಗದವರು ಅಂತ್ಯಕ್ರಿಯೆ ಮುಗಿಸಿದ್ದಾರೆ.
ಕೆಲ ವರ್ಷದಿಂದ ಮರೆವಿನ ಖಾಯಿಲೆಯಿಂದ ಬಳಲುತ್ತಿದ್ದ ಇವರು, ಇದೇ ಸಮಸ್ಯೆಯಿಂದ ಕಳೆದ ವರ್ಷ ಕುಮಟಾದಿಂದ ಕಾಣೆಯಾಗಿದ್ದರು. ನಟ ಶಿವರಾಜ್ಕುಮಾರ್, ಸುದೀಪ್ ಕೂಡ ಇವರ ನೆರವಿಗೆ ಮುಂದಾಗಿದ್ದರು. ಆದರೆ ಸ್ವಾಭಿಮಾನಿಯಾಗಿದ್ದ ಸದಾಶಿವ್ ನಟರ ನೆರವನ್ನು ನಿರಾಕರಿಸಿದ್ದರಂತೆ.
90 ವರ್ಷ ವಯಸ್ಸಿನ ಸದಾಶಿವ್ ಬ್ರಹ್ಮಾವರ್, ಕನ್ನಡದ ನೂರಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ತಮ್ಮ ಪಾತ್ರಗಳಿಂದಲೇ ಇವರು ಅಪಾರ ಜನಮನ್ನಣೆಯನ್ನೂ ಗಳಿಸಿದ್ದರು.
Click this button or press Ctrl+G to toggle between Kannada and English