ಮಂಗಳೂರು : ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಾಟ ಹಾಗೂ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಮಾರಾಟಕ್ಕೂ ಲೈಸೆನ್ಸ್ ಕಾನೂನು ತರುವುದಕ್ಕೆ ಯೋಜನೆ ಸಿದ್ದಪಡಿಸಲಾಗುತ್ತಿದೆ ಎಂದು ರಾಜ್ಯ ವಸತಿ ಹಾಗು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಕೆ ಡಿ ಪಿ ಸಭೆಯಲ್ಲಿ ಮಾತನಾಡಿದ ಅವರು ಮದ್ಯ ಮಾರಾಟಕ್ಕೆ ಲೈಸೆನ್ಸ್ ಮಾದರಿಯಲ್ಲೇ ಸಿಗರೇಟ್, ಬೀಡಿ ಹಾಗೂ ಇತರ ತಂಬಾಕು ಮಾರಾಟಕ್ಕೂ ಲೈಸೆನ್ಸ್ ಕಾನೂನು ತರುವುದಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.
ಅಂಗಡಿಗಳಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಸಿಗರೇಟ್ ಮಾರುತ್ತಿದ್ದಾರೆ. ಸಿಗರೇಟ್ , ಬೀಡಿ ಸೇರಿದಂತೆ ಇನ್ನಿತರ ತಂಬಾಕು ಉತ್ಪನ್ನಗಳ ಚಿಲ್ಲರೆ ಮಾರಾಟ ಮಾಡುವುದಕ್ಕೆ ಕೂಡಾ ನಿಯಂತ್ರಣ ಹೇರಲಾಗುವುದು ಎಂದು ಖಾದರ್ ಸ್ಪಷ್ಟ ಪಡಿಸಿದ್ದಾರೆ.
Click this button or press Ctrl+G to toggle between Kannada and English