ಚಿಕ್ಕಮಗಳೂರು: ಕಳೆದ ಮೂರು ವರ್ಷದ ಹಿಂದೆ ಬಂಪರ್ ಬೆಳೆಯಿಂದಾಗಿ ರೈತರಿಗೆ ಹೆಚ್ಚಿನ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ರೈತರಿಗೆ ಕಣ್ಣೀರು ತರಿಸಿದೆ. ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಬೆಳೆದ ಶೇ. 50 ರಷ್ಟು ಈರುಳ್ಳಿ ಈ ಬಾರಿಯ ಅತಿಯಾದ ಮಳೆಯಿಂದ ಸಂಪೂರ್ಣ ಹಾನಿಯಾಗಿತ್ತು. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಕೆಜಿಗೆ 3 ರಿಂದ 4 ರೂ. ಕುಸಿತ ಕಂಡಿರೋದು ಈರುಳ್ಳಿ ಬೆಳೆಗಾರರನ್ನ ಕಂಲಾಗಿಸಿದೆ.
ಹೌದು, ಬಿರು ಬಿಸಿಲಲ್ಲಿ ಈರುಳ್ಳಿ ಚೀಲ ರೆಡಿ ಮಾಡ್ತಿರೋ ರೈತರ ಮನದಲ್ಲಿ ಈಗ ಮಂದಹಾಸ ಇಲ್ಲ. ಯಾಕಂದ್ರೆ, ಕಳೆದ ಮೂರು ವರ್ಷದ ಹಿಂದೆ ಬಂಪರ್ ಬೆಲೆಯಿದ್ದ ಕಾರಣ ಈ ಬಾರಿಯೂ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು, ತರೀಕೆರೆ, ಅಜ್ಜಂಪುರದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗಿತ್ತು. ಆದ್ರೆ, ಈ ವರ್ಷ ಸುರಿದ ಅತಿಯಾದ ಮಳೆಯಿಂದ ಈರುಳ್ಳಿ ಫಸಲು ಸಂಪೂರ್ಣ ನೆಲಕಚ್ಚಿದೆ. ಮಳೆ ಹೆಚ್ಚಾದ ಪರಿಣಾಮ ಈರುಳ್ಳಿ ಗೆಡ್ಡೆ ದಪ್ಪವಾಗಿಲ್ಲ.
ಸದ್ಯ ಈರುಳ್ಳಿ ಫಸಲು ಅರ್ಧದಷ್ಟು ರೈತರ ಕೈ ಸೇರಿದೆ. ಆದ್ರೆ, ಕೈ ಬಂದ ತುತ್ತು ಬಾಯಿಗೆ ಬರದ ರೀತಿಯಲ್ಲಿ ಆಗಿದೆ ಈರುಳ್ಳಿ ಬೆಳೆಗಾರರ ಬದುಕು. ಯಾಕಂದ್ರೆ, ಮಾರುಕಟ್ಟೆಗೆ ಬಂದಿರೋ ಈರುಳ್ಳಿ ಬೆಳೆಯ ಬೆಲೆ ದಿಢೀರ್ ಕುಸಿತ ಕಂಡು ಕೆಜಿಗೆ 3 ರಿಂದ 4 ರೂ. ಬೆಲೆ ನಿಗದಿಯಾಗಿರೋದು ಈರುಳ್ಳಿ ಬೆಳೆಗಾರರಿಗೆ ನುಂಗಲಾರದ ಬಿಸಿತುಪ್ಪದಂತಾಗಿದೆ.
ಎಕರೆಯೊಂದಕ್ಕೆ 150 ರಿಂದ 200 ಚೀಲ ಈರುಳ್ಳಿ ಸಿಗಬೇಕಾದ ಜಾಗದಲ್ಲಿ 50 ರಿಂದ 100 ಚೀಲದಷ್ಟು ಸಿಕ್ಕಿದೆ. ಇದರಿಂದಾಗಿ ಲಾಭದ ಆಸೆಯಿಂದ ಈರುಳ್ಳಿ ಬೆಳೆದ ರೈತರ ಮುಖದಲ್ಲಿ ಬೇಸರ ಉಂಟಾಗಿದ್ದು, ಈರುಳ್ಳಿಗೆ ಬೆಂಬಲ ಬೆಲೆ ನೀಡಬೇಕು ಎನ್ನುತ್ತಿದ್ದಾರೆ ಅವರು. ಕಳೆದ ವರ್ಷ ಮಳೆ ಹಾಗೂ ಸರಿಯಾದ ಬೆಲೆ ಸಿಗದೆ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸಿದ್ರು. ಈ ಬಾರಿ ಭಾರೀ ಮಳೆ ಬಂದಿದ್ರಿಂದ ಅಲ್ಪ ಸ್ವಲ್ಪ ಬೆಳೆದ ಈರುಳ್ಳಿ ರೈತರ ಕೈ ಸೇರಿದ್ದು, ಸರಿಯಾದ ಬೆಲೆ ಸಿಗದೆ ಬೆಳೆಗಾರರು ಕಂಗಲಾಗಿದ್ದಾರೆ.
Click this button or press Ctrl+G to toggle between Kannada and English