ಭಾರತ ಸರ್ಕಾರವು ಶಬರಿಮಲೆಯಲ್ಲಿ ಹಿಂದೂ ಪರಂಪರೆಯನ್ನು ರಕ್ಷಿಸಬೇಕು!

12:58 PM, Saturday, September 29th, 2018
Share
1 Star2 Stars3 Stars4 Stars5 Stars
(4 rating, 1 votes)
Loading...

trupti-desaiಮಂಗಳೂರು: ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವಬಹುದೆಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ನಾವು ಸರ್ವೋಚ್ಚ ನ್ಯಾಯಾಲಯವನ್ನು ಗೌರವಿಸುತ್ತೇವೆ; ಆದರೆ ನ್ಯಾಯಾಲಯದ ಈ ತೀರ್ಪು ದುರ್ದೈವಿಯಾಗಿದೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದೇವಿಯ ಸ್ಥಾನವನ್ನು ನೀಡಿದ್ದು ಅವಳನ್ನು ಪೂಜಿಸಲಾಗುತ್ತದೆ.

ಹೀಗಿರುವಾಗ ‘ಇಂಡಿಯನ್ ಯಂಗ್ ಲಾಯರ‍್ಸ್ ಅಸೋಸಿಯೇಷನ್’ನ ಅಧ್ಯಕ್ಷರಾದ ನೌಶಾದ್ ಉಸ್ಮಾನ್ ಖಾನ್ ಇವರು ಹಿಂದೂ ಧರ್ಮಕ್ಕೆ ಸಂಬಂಧಿಸಿ ಸಲ್ಲಿಸಿದ ಅರ್ಜಿಯಿಂದಾಗಿ ಹಿಂದೂಗಳ 800 ವರ್ಷಗಳ ಪರಂಪರೆಯನ್ನು ಭಂಗಗೊಳಿಸಲಾಗಿದೆ, ಇದು ಬುದ್ದಿಗೆ ನಿಲುಕದ್ದಾಗಿದೆ. ಅರ್ಜಿದಾರರು ಸ್ವಧರ್ಮದಲ್ಲಿಯ ಮುಸ್ಲೀಮ್ ಮಹಿಳೆಯರಿಗೆ ಮಸೀದಿಯಲ್ಲಿ ಪ್ರವೇಶ ಇಲ್ಲದಿರುವ ಬಗ್ಗೆ ಮಾತ್ರ ಅರ್ಜಿಯನ್ನು ಸಲ್ಲಿಸುವುದಿಲ್ಲ! ಯಾವುದೇ ಧಾರ್ಮಿಕ ವಿಷಯದಲ್ಲಿ ಧರ್ಮಶಾಸ್ತ್ರದ ಆಧಾರವನ್ನು ತೆಗೆದುಕೊಂಡು ನಿರ್ಣಯವಾಗಬೇಕು; ಆದರೆ ದೌರ್ಭಾಗ್ಯದಿಂದ ಹೀಗೆ ಆಗುತ್ತಿರುವುದು ಕಾಣಿಸುತ್ತಿಲ್ಲ ಹಾಗೂ ಈ ರೀತಿ ಕೇವಲ ಹಿಂದುಗಳ ವಿಷಯದಲ್ಲಿ ಮಾತ್ರ ಆಗುತ್ತದೆ, ಎಂದು ಖೇದದಿಂದ ಹೇಳಬೇಕಾಗುತ್ತದೆ.

ಕೆಲವು ತಿಂಗಳ ಹಿಂದೆ ಮುಂಬೈ ಉಚ್ಚ ನ್ಯಾಯಾಲಯವು ಮಹಾರಾಷ್ಟ್ರದಲ್ಲಿಯ ಶ್ರೀ ಶನಿಶಿಂಗಣಾಪುರದಲ್ಲಿಯ ಶನಿಯ ಪೀಠದ ಮೇಲೆ ಮಹಿಳೆಯರಿಗೆ ಪ್ರವೇಶ ನೀಡುವ ನಿರ್ಣಯವನ್ನು ಕೊಟ್ಟಿತು; ಆದರೆ ಕೆಲವು ತಥಾಕಥಿತ ಪುರೋಗಾಮಿಗಳನ್ನು ಬಿಟ್ಟರೇ ಧರ್ಮಪರಂಪರೆಯನ್ನು ನಂಬಿರುವ ಸ್ಥಳೀಯ ಗ್ರಾಮದ ಸಾವಿರಾರು ಶನಿಭಕ್ತ ಮಹಿಳೆಯರು ಇಂದಿಗೂ ಪೀಠದ ಮೇಲೆ ಪ್ರವೇಶ ಮಾಡುತ್ತಿಲ್ಲ. ಅದರಂತೆ ಶಬರಿಮಲೆಯ ಬಗ್ಗೆಯೂ ಮಹಿಳಾ ಭಕ್ತಾದಿಗಳು ಧರ್ಮಪರಂಪರೆಯ ಪಾಲನೆಯನ್ನು ಮಾಡುವರು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಹೇಳಿದ್ದಾರೆ.

ಸಂವಿಧಾನವು ಪ್ರತಿಯೊಬ್ಬರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ, ಹೀಗೆ ಅದು ಹಿಂದೂಗಳಿಗೆ ಹಾಗೂ ಅವರ ದೇವಸ್ಥಾನಕ್ಕೂ ನೀಡಿದೆ. ಈ ನಿರ್ಣಯದಿಂದ ಹಿಂದೂಗಳ ಧರ್ಮಪಾಲನೆಯ ಅಧಿಕಾರದ ಮೇಲೆ ಗದಾ ಪ್ರಹಾರ ಮಾಡಲಾಗುತ್ತಿದೆ. ದೇಶದಾದ್ಯಂತ ಶಬರಿಮಲೆ ದೇವಸ್ಥಾನದಂತೆ ಕೆಲವು ನಿರ್ದಿಷ್ಟ ದೇವಸ್ಥಾನದಲ್ಲಿ ಈ ನಿಯಮ ಇವೆ, ಉಳಿದ ಎಲ್ಲಾ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶ ಇದೆ. ಆದರೂ ಉದ್ದೇಶಪೂರ್ವಕವಾಗಿ ಅಪಪ್ರಚಾರವನ್ನು ಮಾಡಲಾಗುತ್ತಿದೆ.

ಇಂದು ಯಾವ 5 ನ್ಯಾಯಮೂರ್ತಿಗಳು ಈ ನಿರ್ಣಯವನ್ನು ಕೊಟ್ಟರೋ, ಅದರಲ್ಲಿ ಓರ್ವ ಮಹಿಳಾ ನ್ಯಾಯಮೂರ್ತಿಯೂ ಇದ್ದರು ಮತ್ತು ಈ ನಿರ್ಣಯಕ್ಕೆ ವಿರೋಧವನ್ನು ವ್ಯಕ್ತಪಡಿಸಿದರು. ಇದರ ಬಗ್ಗೆ ನಾವು 4 ಪುರುಷ ನ್ಯಾಯಮೂರ್ತಿಯು ಓರ್ವ ಮಹಿಳಾ ನ್ಯಾಯಮೂರ್ತಿಯ ಅಭಿಪ್ರಾಯವನ್ನು ಲೆಕ್ಕಿಸದೇ ಪುರುಷರೇ ನಿರ್ಣಯವನ್ನು ತೆಗೆದುಕೊಂಡರು, ಹೀಗೆ ನಾವು ಹೇಳಲು ಸಾಧ್ಯವಿಲ್ಲ; ಅದೇ ರೀತಿ ದೇವಸ್ಥಾನದ ವಿಷಯದಲ್ಲಿಯೂ ಪುರುಷರ ಅಧಿಕಾರ ಇದೆ ಎಂದೂ ಹೇಳಲು ಯೋಗ್ಯವಲ್ಲ.

ಈ ಹಿಂದೆ ಶಾಹಬಾನೋ ಪ್ರಕರಣದಲ್ಲಿ ಆಗಿನ ಕಾಂಗ್ರೇಸ್ ಸರಕಾರವು ಅದೇ ರೀತಿ ಪ್ರಸಕ್ತ ಆಟ್ರೋಸಿಟಿಯ ಸಂದರ್ಭದಲ್ಲಿ ಈಗಿರುವ ಸರಕಾರವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬದಲಾಯಿಸಲು ಕಾನೂನನ್ನು ನಿರ್ಮಿಸಿದರು, ಆಗ ಮಾತ್ರ ಈ ಪ್ರಕರಣದಲ್ಲಿ ಹಿಂದೂಗಳ ಯಾವುದೇ ಧಾರ್ಮಿಕ ವಿಷಯದ ಬಗ್ಗೆ ಹಿಂದೂ ಧರ್ಮಶಾಸ್ತ್ರಾನುಸಾರ ನಿರ್ಣಯವನ್ನು ತೆಗೆದುಕೊಳ್ಳಬೇಕು ಮತ್ತು ಹಿಂದೂ ಸಂಸ್ಕೃತಿಯ ರಕ್ಷಣೆ ಆಗಬೇಕು, ಅದಕ್ಕಾಗಿ ಕಾನೂನನ್ನು ಮಾಡುವಂತೆ ಶ್ರೀ. ರಮೇಶ ಶಿಂದೆ ಇವರು ಕೇಂದ್ರ ಸರಕಾರವನ್ನು ಅಗ್ರಹಿಸಿದ್ದಾರೆ.

image description

5 ಪ್ರತಿಕ್ರಿಯ - ಶೀರ್ಷಿಕೆ - ಭಾರತ ಸರ್ಕಾರವು ಶಬರಿಮಲೆಯಲ್ಲಿ ಹಿಂದೂ ಪರಂಪರೆಯನ್ನು ರಕ್ಷಿಸಬೇಕು!

  1. Chandru, Sindhnur

    Dharmada ಆಚರಣೆಯ ವಿಚಾರ ಅವರವರ ಶ್ರದ್ಧೆಗೆ ಬಿಟ್ಟದ್ದು kanunu & ಧರ್ಮ ಸೂಕ್ಷ್ಮ galannu ವಂದರೊಳಗೊಂದು ಬೆರೆಸಿ ಪಾವಿತ್ರತೆಗೆ dhakke ತರುವದು ಉಚಿತವಲ್ಲ.

  2. ಚಂದ್ರಶೇಖರ್, ಕೊಣಾಲು

    ಶಬರಿಮಲೆ ಕ್ಷೇತ್ರಕ್ಕೆ ಮಹಿಳೆಯರು ಪ್ರವೇಶಿಸಬಹುದು ಎನ್ನುವ ತೀರ್ಪು ನೀಡಿ ಮಹಿಳೆಯರಿಗೆ ಸಮಾನತೆ ನೀಡಿದ್ದಾರಂತೆ ಹಾಗೆಯೇ ನನ್ನದೊಂದು ಮನವಿ ಇಸ್ಲಾಂ ಧರ್ಮದಲ್ಲಿ ಅವರ ಮಂದಿರಕ್ಕೆ ಮಹಿಳೆಯರ ಪ್ರವೇಶ ನಿಷೇಧ ಇಲ್ಲಿಯೂ ಮಹಿಳೆಯರಿಗೆ ಸಮಾನತೆಯನ್ನು ನೀಡಬೇಕು

  3. ಉದಯ, ನೆರಿಯ

    ನ್ಯಾಯಾಲಯವು ಯಾವುದೇ ಹಿಂದೂ ಸಂತರನ್ನು(ಧರ್ಮದ ಬಗ್ಗೆ ಜ್ಞಾನ ಇರುವವರನ್ನು) ವಿಚಾರಿಸದೆ ನಿರ್ಣಯ ಅಂದರೆ ನ್ಯಾಯಲಯದಿಂದ ಹಿಂದೂ ಧರ್ಮಕ್ಕೆ ದ್ರೋಹ, ಮಸೀದಿಗೆ ಮಹಿಳೆಯರು ಪ್ರವೇಶದ ಬಗ್ಗೆ ವಿಚಾರಣೆ ಇಲ್ಲ.

  4. ಯಂ ಸುದರ್ಶನ್ ಕುಮಾರ್, Indabettu

    ಇದು ದುಷ್ಟರ ಕಾಲ.ಹಾಗಾಗಿ ಇಂದು ಈ ತರಹದ ತೀರ್ಪು ಬಂದಿದೆ.ಇನ್ನು ಕೆಲವೇ ದಿನ ಮಾತ್ರ ಅವರ ಗೆಲುವು.
    ಜೈ ಶ್ರೀ ರಾಮ್

  5. ಕೇಶವ ಗೌಡ, ಉಪ್ಪಿನಂಗಡಿ

    ಹಿಂದೂಗಳ ಧಾರ್ಮಿಕ ಭಾವನೆಗಳ ಸಂದರ್ಭದಲ್ಲಿ ಮಾತ್ರ ಚೆಲ್ಲಾಟವಾಡುವ ಕೋರ್ಟ್; ಮಸೀದಿ ಬಗ್ಗೆಯೂ ಇದೇ ತೀರ್ಪು ನೀಡಲಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English