ಅಪಾಯಕಾರಿ ಹಂತದಲ್ಲಿ ಕೂಳೂರು ಸೇತುವೆ… ವಾಹನ ಸಂಚಾರಕ್ಕೆ ನಿಷೇಧ ಸಾಧ್ಯತೆ!

10:19 AM, Wednesday, October 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

kuloorಮಂಗಳೂರು: ಮಂಗಳೂರಿನ ಕೂಳೂರಿನಲ್ಲಿ ಇರುವ ಸೇತುವೆಯೊಂದು ಅಪಾಯದ ಅಂಚಿನಲ್ಲಿದೆ ಎಂದು ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ವಿಭಾಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು ತತ್ ಕ್ಷಣದಿಂದ ಸೇತುವೆಯಲ್ಲಿ ಸಂಚಾರ ನಿಷೇಧಿಸಲು ಸೂಚಿಸಿದೆ.

ಕೇರಳದಿಂದ ಉತ್ತರ ಭಾರತಕ್ಕೆ ಸಂಪರ್ಕಿಸುವ ಮಂಗಳೂರಿನ ಕೂಳೂರು ಸೇತುವೆ ವಾಹನ ಸಂಚಾರಕ್ಕೆ ಯೋಗ್ಯವಲ್ಲ. ಅದರಲ್ಲಿ ಸಂಚಾರ ಮಾಡುವುದು ಅಪಾಯಕಾರಿಯಾದದ್ದು ಎಂಬ ವರದಿಯನ್ನು ಹೆದ್ದಾರಿ ಇಲಾಖೆಯ ಇಂಜಿನಿಯರ್ ವಿಭಾಗ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ ಈ ಸೇತುವೆಯಲ್ಲಿ ಸಂಚಾರ ನಿಷೇಧ ಆದೇಶ ಮಾಡಲಿದೆ.

ಸ್ವಾತಂತ್ರ್ಯ ಪೂರ್ವದಿಂದಲೇ ಇದ್ದ ಈ ಸೇತುವೆ ಶಿಥಿಲಾವಸ್ಥೆ ತಲುಪಿದ್ದು ಈ ಸೇತುವೆ ಬಗ್ಗೆ ನೀಡಿರುವ ವರದಿ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕೂಳೂರಿನಲ್ಲಿ ಎರಡು ಸೇತುವೆಯಿದೆ .ಒಂದು ಸೇತುವೆ ಮಂಗಳೂರಿನಿಂದ ಉಡುಪಿಗೆ ಹೋಗುವ ದಾರಿಯಲ್ಲಿದೆ. ಮತ್ತೊಂದು ಸೇತುವೆ ಉಡುಪಿಯಿಂದ ಮಂಗಳೂರಿಗೆ ಬರುವ ಹಾದಿಯಲ್ಲಿದೆ. ಈ ಎರಡು ಸೇತುವೆ ಏಕಮುಖ ಸಂಚಾರವನ್ನು ಹೊಂದಿರುವಂತಹದು. ಇದೀಗ ಒಂದು ಸೇತುವೆಯನ್ನು ಮುಚ್ಚಿ ಮತ್ತೊಂದು ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಆದೇಶ ಜಿಲ್ಲಾಡಳಿತ ಹೊರಡಿಸಲಿದೆ .ಇದರಿಂದ ಈಗ ಇರುವ ಮತ್ತೊಂದು ಸೇತುವೆ ಕೂಡ ಅಧಿಕ ವಾಹನದಟ್ಟಣೆಗೆ ಒಳಗಾಗಲಿದೆ. ಮುಚ್ಚುವ ಹಳೆ ಸೇತುವೆ ಮತ್ತು ಈಗ ವಾಹನ ಸಂಚಾರವಿರುವ ಹೊಸ ಸೇತುವೆಯ ಮಧ್ಯೆ ಇನ್ನೊಂದು ಸೇತುವೆಗೆ ಸರ್ಕಾರ ನಿರ್ಧರಿಸಿದ್ದು ಈ ಸೇತುವೆ ನಿರ್ಮಾಣವಾಗುವವರೆಗೆ ಇಲ್ಲಿ ಟ್ರಾಫಿಕ್ ಜಾಮ್ ಸಾಧ್ಯತೆ ಹೆಚ್ಚಾಗಲಿದೆ.

ಈಗ ಏಕಮುಖ ಸಂಚಾರ ವಿರುವ 2 ಸೇತುವೆಗಳಲ್ಲಿ ಘನ ವಾಹನಗಳ ಓಡಾಟವೇ ಅಧಿಕ . ಈ ಭಾಗದಲ್ಲಿರುವ ಬೃಹತ್ ಕೈಗಾರಿಕೆಗಳಿಂದ ಇಲ್ಲಿ ಘನ ವಾಹನಗಳು ಅತ್ಯಧಿಕ ಸಂಖ್ಯೆಯಲ್ಲಿ ಓಡಾಡುತ್ತಿದೆ. ಅಪಾಯಕಾರಿಯಾಗಿರುವ ಸೇತುವೆಯಲ್ಲಿಯೂ ಮತ್ತು ಹೊಸ ಸೇತುವೆಯಲ್ಲಿಯು ಘನ ವಾಹನಗಳು ಅತ್ಯಧಿಕ ಸಂಖ್ಯೆಯಲ್ಲಿ ಓಡಾಡುತ್ತಿದ್ದು, ಜೊತೆಗೆ ಕೇರಳದಿಂದ ಉತ್ತರ ಭಾರತ ಸಂಪರ್ಕಿಸುವ ಹೆದ್ದಾರಿ ಆಗಿರುವುದರಿಂದ ಭಾರಿ ವಾಹನಗಳ ಓಡಾಟ ಆಗುತ್ತಿದೆ. ಈ ಮೊದಲೇ ಯಾವುದೇ ಎಚ್ಚರಿಕೆ ನೀಡದೆ ಈಗ ಏಕಾಏಕಿ ಸೇತುವೆ ಅಪಾಯದಲ್ಲಿದೆ ಎಂದು ವರದಿ ನೀಡಿ ಅದು ಮುಚ್ಚಬೇಕೆಂದು ಆದೇಶ ಹೊರಡಿಸಿರುವುದರಿಂದ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ .ಸರಕಾರ ಶೀಘ್ರ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕಾಗಿದೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English