ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ

12:12 PM, Saturday, October 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

alwas-clgಮೂಡಬಿದ್ರೆ: ವಿದ್ಯಾರ್ಥಿಗಳು ಸತ್ಯ ಹಾಗೂ ನ್ಯಾಯದಿಂದ, ಸನ್ಮಾರ್ಗದಲ್ಲಿ ನಡೆದಾಗ ಭವಿಷ್ಯದಲ್ಲಿ ಯಶಸ್ಸು ಲಭ್ಯವಾಗುತ್ತದೆ ಎಂದು ಶತಾಯುಷಿ ಮಿಜಾರುಗುತ್ತು ಆನಂದ್ ಆಳ್ವ ಹೇಳಿದರು.

ಇವರು ಆಳ್ವಾಸ್ ಇಂಜಿನಿಯರಿಂಗ್ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ತುಳು ಸಂಘ ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಜನಾಂಗವು ಕೇವಲ ಸಂಪತ್ತಿಗೆ ಕೇಂದ್ರಿಕೃತವಾಗಿದ್ದು, ಭಾಂದವ್ಯಗಳಿಂದ ವಂಚಿತರಾಗಿರುತ್ತಾರೆ. ಆದರೆ ತುಳುನಾಡ ಜನರು ಈ ದುಸ್ಥಿತಿಯನ್ನು ಎದುರಿಸದೇ ಕೂಡು ಕುಟುಂಬದ ಪ್ರೀತಿ ಭಾಂದವ್ಯದಲ್ಲಿ ಬೆಳೆದಿದ್ದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಅವರು ಹೇಳಿದರು.

ತುಳು ಸಾಹಿತ್ಯ ನಿರ್ದೇಶಕರಾದ ಪರಮಾನಂದ್ ಸಾಲಿಯಾನ್ ಮಾತನಾಡಿ, ತುಳು ಭಾಷೆ ತನ್ನ ಶ್ರೇಷ್ಠ ಸಂಸ್ಕೃತಿಯಿಂದ ಇಂದು ಅಭಿವೃದ್ಧಿಗೊಂಡು ಉನ್ನತ ಮಟ್ಟದ ಅಧ್ಯಯನಕ್ಕಾಗಿ ತನ್ನನ್ನು ತೆರೆದುಕೊಂಡಿದೆ. ದೇವರ ಅಸ್ತಿತ್ವದ ಕುರಿತು ಹಲವಾರು ಚರ್ಚೆಗಳಿದ್ದರೂ ತುಳುನಾಡಿನಲ್ಲಿ ಕೂಡು ಕುಟುಂಬವನ್ನು ಉಳಿಸಿರುವುದು ಈ ದೈವ, ನಾಗಗಳಂತಹ ತುಳುನಾಡ ಆಚರಣೆಗಳು.

ಗತಕಾಲದಿಂದ ಭಾವನೆಗಳನ್ನೇ ಬದುಕಾಗಿಸಿಕೊಂಡ ತುಳು ಸಂಸ್ಕೃತಿಯು ಇಂದು ಮೌಲ್ಯಗಳನ್ನು ಕಳೆದುಕೊಂಡು ದುರಂತ ಸ್ಥಿತಿಗೆ ತಲುಪಿದೆ. ಯುವಜನಾಂಗ ತಂತ್ರಜ್ಞಾನ ,ಶಿಕ್ಷಣ ವಿಷಯದಲ್ಲಿ ಏಳಿಗೆಯನ್ನು ಕಂಡಿದ್ದರೂ ಸಂಸ್ಕಾರ- ಸಂಸ್ಕೃತಿಯ ವಿಷಯದಲ್ಲಿ ಮಹತ್ವವನ್ನು ಕಳೆದುಕೊಂಡು ಬದುಕುತ್ತಿದೆ. ಮುಂದಿನ ಜನಾಂಗಕ್ಕೆ ನಮ್ಮ ತುಳು ಸಂಸ್ಕೃತಿಯನ್ನು ಕೊಂಡ್ಯೊಯಲು ಪ್ರಸಕ್ತ ಜನಾಂಗ ತುಳು ಸಂಸ್ಕೃತಿಯನ್ನು ತಿಳಿಯುವ ಅವಶ್ಯಕತೆಯಿದೆ ಎಂದು ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಮಾತನಡಿ, ಹಿರಿಯರ ಪರಿಶ್ರಮದಿಂದ ಬೆಳೆದ ತುಳು ಸಂಸ್ಕೃತಿಗೆ ಇಂದಿನ ಯುವಜನಾಂಗ ಉತ್ತಮ ಸ್ವರೂಪವನ್ನು ಕೊಟ್ಟಾಗ ಮಾತ್ರ ಆ ಸಂಸ್ಕೃತಿ ಉಳಿಯುತ್ತದೆ. ಯಾವುದೇ ಸಂಘವನ್ನು ಪ್ರಾರಂಭ ಮಾಡುವುದು ದೊಡ್ಡ ವಿಷಯವಲ್ಲ ಅದರಲ್ಲಿರುವ ವೈಶಿಷ್ಟ್ಯಗಳನ್ನು ನಾಲ್ಕು ಜನರಿಗೆ ತಿಳಿಸಿದಾಗ ಮಾತ್ರ ಆ ಸಂಘವು ಸಾರ್ಥಕ್ಯವನ್ನು ಹೊಂದುತ್ತದೆ. ಹಾಗೆಯೇ ಈ ತುಳು ಸಂಘವು ಮುಂದಿನ ದಿನಗಳಲ್ಲಿ ಭಾಷೆಯನ್ನು ಉಳಿಸಿ ಬೆಳಸುವಲ್ಲಿ ಸದಾ ನಿರತವಾಗಲಿ ಎಂದು ಹೇಳಿದರು.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ವಹಿಸಿದ್ದರು. ಎಂ.ಬಿ.ಎ ಉಪನ್ಯಾಸಕರಾದ ನಾಗೇಂದ್ರ, ಮೆಕಾನಿಕಲ್ ವಿಭಾಗದ ಉಪನ್ಯಾಸಕ ಸುರೇಶ್, ಹಾಗೂ ಗಣಿತಶಾಸ್ತ್ರವಿಭಾಗದ ಉಪನ್ಯಾಸಕಿ ಪ್ರಮೀಳಾ ಕೊಳಕೆ ಉಪಸ್ಥಿತರಿದ್ದರು. ಕಾರ‍್ಯಕ್ರಮ ಸಂಯೋಜPಸರಾದ ಸುಧಾಕರ್ ಪೂಂಜ ಪ್ರಸ್ತಾವನೆ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ಐಶ್ವರ್ಯ ಕಾರ‍್ಯಕ್ರಮವನ್ನು ಸ್ವಾಗತಿಸಿ, ಶ್ರೀರಕ್ಷಾ ಶೆಟ್ಟಿ ವಂದಿಸಿ, ವಿದ್ಯಾರ್ಥಿ ಸಾತ್ವಿಕ್ ಶೆಟ್ಟಿ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English