ಮಂಗಳೂರು: ಕಸಾಯಿಖಾನೆ ವಿವಾದಕ್ಕೆ ಸಂಬಂಧಪಟ್ಟಂತೆ ಶಾಸಕ ಸಂಜೀವ ಮಠಂದೂರು ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಿಂದ ಅರ್ಧದಲ್ಲೇ ಹೊರನಡೆದ ಘಟನೆ ನಡೆದಿದೆ.
ಕಸಾಯಿಖಾನೆ ವಿವಾದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಸಂಜೀವ ಮಠಂದೂರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ 15 ಕೋಟಿ ಲೂಟಿ ಮಾಡುವ ರೀತಿಯಲ್ಲಿ ಕುದ್ರೋಳಿ ಕಸಾಯಿಖಾನೆಗೆ ಅನುದಾನವನ್ನು ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ತಬ್ಬಿಬ್ಬಾದ ಶಾಸಕರು ಗೋಷ್ಠಿಯನ್ನು ಅರ್ಧದಲ್ಲಿಯೇ ಮುಗಿಸಿ ಹೊರನಡೆಯಲು ಸಜ್ಜಾದರು. ಆಗ ಪತ್ರಕರ್ತರು ಪ್ರಶ್ನೆಗಳನ್ನು ಕೇಳಿದಾಗ ನನಗೆ ಶಾಸಕನಾಗಿ ತುಂಬಾ ಕೆಲಸ ಇದೆ. ಹೋಗುತ್ತಿದ್ದೇನೆ ಎಂದು ಹೊರನಡೆದರು.
Click this button or press Ctrl+G to toggle between Kannada and English