ಮಂಗಳೂರಿನಲ್ಲಿ ವಿಬ್‌ಗಯಾರ್ ಶಿಕ್ಷಣ ಸಂಸ್ಥೆಯಿಂದ ಹೊಸ ಶಾಲೆ ಆರಂಭ

1:10 PM, Friday, October 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

vibgayrಮಂಗಳೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯದ ನಾಯಕರನ್ನಾಗಿ ರೂಪಿಸುವ, ಪೋಷಿಸುವ ಗುರಿ ಹೊಂದಿರುವ ಅಂತರರಾಷ್ಟ್ರೀಯ ಗುಣಮಟ್ಟದ ವಿಬ್‌ಗಯಾರ್ ಶಿಕ್ಷಣ ಸಂಸ್ಥೆ ಮಂಗಳೂರಿನಲ್ಲಿ ಹೊಸ ಶಾಲೆ ಆರಂಭಿಸಿದೆ.

ನೂತನ ಶಾಲೆಯನ್ನು ನಗರದ ಹೊರವಲಯದ ಕೂಳೂರಿನ ರಿವರ್ ರಸ್ತೆಯಲ್ಲಿ ಗುರುವಾರ ಲೋಕಾರ್ಪಣೆ ಮಾಡಲಾಯಿತು. ದಕ್ಷಿಣ ಭಾರತದಲ್ಲಿ ತನ್ನ ಸೇವೆಯನ್ನು ಗಣನೀಯವಾಗಿ ವಿಸ್ತರಿಸುವ ಉದ್ದೇಶವಿದೆ ಎಂದು ಲೋಕಾರ್ಪಣೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸಿ‌ಇ‌ಓ ಆಶೀಶ್ ಟಿಬ್ಡಿವಾಲ್ ಹೇಳಿದರು.

ಆರಂಭದಲ್ಲಿ ಪೂರ್ವಪ್ರಾಥಮಿಕ ತರಗತಿಯಿಂದ 5ನೇ ತರಗತಿವರೆಗೆ ಸೇವೆ ನೀಡಲಾಗುತ್ತಿದೆ. ೫೦ಕ್ಕೂ ಹೆಚ್ಚು ಮಂದಿ ಪರಿಣತ ಹಾಗೂ ಪ್ರಖ್ಯಾತ ಶಿಕ್ಷಕವರ್ಗವನ್ನು ಹೊಂದಿರುವ ಮಂಗಳೂರು ವಿಬ್‌ಗಯಾರ್ ಶಾಲೆ, ನಗರದ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೌಕರ್ಯ ಮತ್ತು ಕಲಿಕಾ ಸಾಧನಗಳೊಂದಿಗೆ ಕಲಿಕೆಯ ಪರಿಪೂರ್ಣ ಪರಿಸರ ಸೃಷ್ಟಿಸುವ ಗುರಿ ಹೊಂದಿದೆ ಎಂದು ಅವರು ವಿವರಿಸಿದರು.

ಮುಂದಿನ ಕೆಲ ವರ್ಷಗಳಲ್ಲಿ ಶಾಲೆಯ ವಿದ್ಯಾರ್ಥಿಬಲವನ್ನು 2500ಕ್ಕೆ ಹೆಚ್ಚಿಸಲು ಮತ್ತು 250 ಮಂದಿ ಬೋಧಕ ಸಿಬ್ಬಂದಿಯನ್ನು ಹೊಂದಿದ ಸುಸಜ್ಜಿತ ಶಾಲೆಯಾಗಿ ಇದು ರೂಪುಗೊಳ್ಳಲಿದೆ. ಕರಾವಳಿಯ ವೈವಿಧ್ಯಮಯ ಸಂಸ್ಕೃತಿ ಹಾಗೂ ಹೆಚ್ಚಿನ ಸಾಕ್ಷರತೆ ಪ್ರಮಾಣ ವಿಬ್‌ಗಯಾರ್‌ನ ಉತ್ಕೃಷ್ಟ ಶಿಕ್ಷಣದ ಕನಸಿಗೆ ಪೂರಕವಾಗಿದೆ. ವಿದ್ಯಾರ್ಥಿ ಕೇಂದ್ರಿತ ಗುಣಾತ್ಮಕ ಕಲಿಕೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಬಣ್ಣಿಸಿದರು.

ಹದಿನಾಲ್ಕು ವರ್ಷಗಳ ಹಿಂದೆ ಮುಂಬೈನಲ್ಲಿ ಆರಂಭವಾದ ಶಾಲೆ, ವಿದ್ಯಾರ್ಥಿಗಳಿಗೆ ಬೌದ್ಧಿಕ, ಸಾಮಾಜಿಕ, ದಃಯಕಿ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ತತ್ವಗಳ ಆಧಾರದಲ್ಲಿ ಬೋಧನಾ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಜಾಗತಿಕ ಮಟ್ಟದ ಶಿಕ್ಷಣ ನೀಡಲು ಸಾಂಪ್ರದಾಯಿಕ ಕಲಿಕೆಯ ಜತೆಗೆ ಅನುಭವ ಆಧರಿತ ಮತ್ತು ವಿಶ್ಲೇಷಣಾ ಪದ್ಧತಿಗಳನ್ನು ಬೋಧನಾ ವಿಧಾನವಾಗಿ ಆಯ್ಕೆ ಮಾಡಿಕೊಂಡಿರುವುದು ನಮ್ಮ ವಿಶೇಷತೆ ಎಂದು ಹೇಳಿದರು.

ಪ್ರಸ್ತುತ ದೇಶಾದ್ಯಂತ ವಿಬ್‌ಗಯಾರ್‌ನ 27 ಶಾಲೆಗಳಲ್ಲಿ 48 ಸಾವಿರ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ದಕ್ಷಿಣ ವಲಯದ ಕ್ಲಸ್ಟರ್ ಪ್ರಾಚಾರ್ಯ ರೋಶನ್ ಡಿಸೋಜಾ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥ ಎ.ಕೆ.ಮುನೀರ್ ಉಪಸ್ಥಿತರಿದ್ದರು.

vibgayr-2

vibgayr-3

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English