ಶ್ರೀ ದುರ್ಗಾ ಬಾಲಗೋಕುಲ ಪ್ರಥಮ ವಾರ್ಷಿಕೋತ್ಸವದಲ್ಲಿ, ಮನಸೂರೆಗೊಂಡ ಮಕ್ಕಳ ನೃತ್ಯ ವೈವಿದ್ಯ

10:14 PM, Monday, October 15th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Sri Durga Balagokula ಮಂಗಳೂರು : ಶ್ರೀ ದುರ್ಗಾ ಬಾಲಗೋಕುಲದ ಪ್ರಥಮ ವಾರ್ಷಿಕೋತ್ಸವದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮವನ್ನು ಶ್ರೀ ದುರ್ಗಾದೇವಿ ಕ್ಷೇತ್ರ ತೌಡುಗೋಳಿ ಇದರ ವಠಾರದಲ್ಲಿ ಬೆಳಗ್ಗೆ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಗೋವಿಂದ ಗುರುಸ್ವಾಮಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ವರ್ಕಾಡಿ ನೀರೋಳಿಕೆ ಶ್ರೀ ಮಾತಾ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು, ಹರೀಶ್ ಕನ್ನಿಗುಳಿ, ನಾರಾಯಣ ಭಟ್ ಲಾಡ, ಶ್ರೀ ದುರ್ಗಾ ಬಾಲಗೋಕುಲದ ಅಧ್ಯಕ್ಷೆ ಪ್ರತಿಭಾ ದಿನೇಶ್, ಕಾರ‍್ಯದರ್ಶಿ ಶಿವರಾಜ್, ಉಪಾಧ್ಯಕ್ಷರಾದ ದಿನೇಶ್ ಗುರಿಕಾರ ಮರಿಕಾಪು, ಕೋಶಾಧಿಕಾರಿ ಮಮತಾ ತೌಡುಗೋಳಿ, ಜೊತೆಕಾರ್ಯದರ್ಶಿಗಳಾದ ಲಲಿತಾ ಶಾಂತಿಪಳಿಕೆ, ಸರಿತಾ ತೌಡುಗೋಳಿ ಬಾಲಗೋಕುಲದ ಪ್ರಮುಖ್ ತೇಜಸ್, ಸತೀಶ್ ಮಲಿ ಹಾಗೂ ಮಂಜಣ ಪೂಜಾರಿ, ಗೋಪಾಲ ಕುಲಾಲ್ ಮತ್ತು ಬಾಲಗೋಕುಲದ ಪುಟಾಣಿಗಳು ಸದಸ್ಯರು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

Sri Durga Balagokula ಈ ಸಂದರ್ಭದಲ್ಲಿ ಮಾತನಾಡಿದ ವರ್ಕಾಡಿ ನೀರೋಳಿಕೆ ಶ್ರೀ ಮಾತಾ ಸೇವಾಶ್ರಮದ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಸ್ಪರ್ಧೆಗಳು ಯಾವ ಮಟ್ಟಿಗೆ ಬಂದಿದೆಯೆಂದರೆ ಪ್ರಸ್ತುತ ಸಮಾಜದಲ್ಲಿ ಗುಣವಂತರಾಗಿ ಬದುಕುವುದೇ ಕಷ್ಟ. ಅದಕ್ಕೂ ಸ್ಪರ್ಧೆ ನಡೆಸುವಂತಹ ಸ್ಥಿತಿ ಬಂದಿದೆ. ಪೋಷಕರು ಮಕ್ಕಳನ್ನು ಸಾಕು ಕೋಳಿಯಂತೆ ದಪ್ಪಕ್ಕೆ ಬೆಳೆದರೆ ಸಾಲದು. ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಯ ಬಗ್ಗೆ ಗಮನಹರಿಸಬೇಕು. ನಮ್ಮ ಜೀವನ ರಾಷ್ಟ್ರಜೀವನಕ್ಕೆ ಮುಡಿಪಾಗಿರಲಿ ಎಂದು ಹಾರೈಸಿದರು.

ಬಳಿಕ ಮಕ್ಕಳಿಗೆ ಮತ್ತು ಹಿರಿಯರಿಗೆ ವಿವಿಧ ಸ್ಪರ್ಧೆಗಳು ನಡೆದವು, ವಾರ್ಷಿಕೋತ್ಸವದ ವೇದಿಕೆಯಲ್ಲಿ ನಡೆದ ಪುಟಾಣಿಗಳ ವಿವಿಧ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮನರಂಜಿಸಿತು. ಮಕ್ಕಳ ರೊಮಾಂಚಕ ನೃತ್ಯ ಪ್ರದರ್ಶನಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿ ಮಾಡಿತು.

ಸಮಾರೋಪ ಸಮಾರಂಭ :

ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳಿಗೆ ಆಯಾ ಪ್ರದೇಶ ವ್ಯಾಪ್ತಿಗನುಗುಣವಾಗಿ ತನ್ನದೇ ಆದ ಸಂಪ್ರದಾಯಗಳಿರುತ್ತದೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯಗಳ ಹಿಂದೆ ನಂಬಿಕೆಗಿಂತಲೂ ನಿಖರವಾದ ವೈeನಿಕ ಕಾರಣಗಳು ಅಡಗಿರುತ್ತದೆ. ಹಾಗಾಗಿ ಕ್ಷೇತ್ರಗಳ ಪಾವಿತ್ರ್ಯತೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ಭಕ್ತರ ಜವಬ್ದಾರಿಯಾಗಿದ್ದು, ಧಕ್ಕೆ ತರುವ, ಸಂಪ್ರದಾಯಗಳನ್ನು ಮುರಿಯುವ ಪ್ರಯತ್ನದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ತೌಡುಗೋಳಿಯ ಶ್ರೀ ದುರ್ಗಾ ಬಾಲಗೋಕುಲದ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ತೌಡುಗೋಳಿ ಶ್ರೀ ದುರ್ಗಾ ದೇವಿ ಕ್ಷೇತ್ರದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕೇವಲ ಒಂದು ವರ್ಷಗಳ ಅನುಭವವಿರುವ ತೌಡುಗೋಳಿಯ ಶ್ರೀ ದುರ್ಗಾ ಬಾಲಗೋಕುಲದಲ್ಲಿ ೬೨ಮಕ್ಕಳಿರುವುದು ಸಂತಸದ ವಿಷಯ. ಆ ಎಲ್ಲ ಮಕ್ಕಳು ನಮ್ಮ ಸಂಸ್ಕಾರ ಸಂಸ್ಕ ತಿಯನ್ನು ಕಾಪಾಡಿಕೊಂಡು ಬರಲು ಸನ್ನದ್ಧರಾಗಿರುವುದು ಹಾಗೂ ಅದಕ್ಕಾಗಿ ಶ್ರಮಿಸುತ್ತಿರುವ ಎಲ್ಲರ ಕಾರ್ಯ ಶ್ಲಾಘನೀಯ ಎಂದು ವರ್ಕಾಡಿ ಮರಿಕಾಪು ಶ್ರೀ ಮಡಿಕತ್ತಾಯ ಧೂಮಾವತೀ ಬಂಟ ದೈವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮೀ ನಾರಾಯಣ ಹೊಳ್ಳ ಮರಿಕಾಪು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೈರಂಗಳ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಭಟ್ ಲಾಡ, ಉದ್ಯಮಿ ಹರೀಶ್ ಕನ್ನಿಗುಳಿ, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು, ಶ್ರೀಮಾತಾ ಸೇವಾಶ್ರಮದ ಸಂಚಾಲಕ ನಾರಾಯಣ ಭಟ್ ತಲೆಂಗಳ, ಶಾಂತಿಪಳಿಕೆ ಶ್ರೀ ಮಿತ್ತಮೊಗರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಪ್ರಸನ್ನ ಪಕ್ಕಳ ಬಲೆತ್ತೋಡು, ತೌಡುಗೋಳಿಯ ಶ್ರೀ ಕಾವೀ ಸುಬ್ರಮಣ್ಯ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸೋಮನಾಥ ಕಾರಂತ, ವರ್ಕಾಡಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ ತಚ್ಚರೆ, ಕಾಸರಗೋಡು ಬಾಲಗೋಕುಲ ಪ್ರಮುಖ್ ನಾರಾಯಣ ಮಾಸ್ತರ್ ಕಾಸರಗೋಡು ಹಾಗೂ ಬಾಲಗೋಕುಲದ ಕಾರ್ಯದರ್ಶಿ ಶಿವರಾಜ್ ತೌಡುಗೋಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷಗಳ ಅವಽಯಲ್ಲಿ ಬಾಲಗೋಕುಲದ ಮಕ್ಕಳಿಗೆ ತರಬೇತಿ ನೀಡಿದ ಶಿಕ್ಷಕರುಗಳಾದ ಸುಜಾತಾ ಕೆ. ದೇವಿಪುರ, ಲೀಲಾವತಿ ಸಿ. ಬಜಂಗರೆ ತಲಪಾಡಿ, ಸದಾಶಿವ ಕಡಂಬಾರು ಹಾಗೂ ಆನಂದ ತಚ್ಚರೆ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಭಜನೆ, ದೇಶಭಕ್ತಿ ಗೀತೆ, ಲಿಂಕಾಷ್ಟಕಂ, ಭಗವದ್ಗೀತೆ, ನೃತ್ಯ ವೈವಿಧ್ಯ, ಗುಂಡೆಸೆತ, ಬಾಲ್ ಪಾಸಿಂಗ್, ಸಂಗತ ಕುರ್ಚಿ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ, ಸ್ಮರಣಿಕೆ ಹಾಗೂ ಭಾಗವಹಿಸಿದ ಎಲ್ಲ ಪುಟಾಣಿ ಮಕ್ಕಳಿಗೆ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.

ತೇಜಸ್ ರೈ ಹಳೆಮನೆ, ಕೀರ್ತಿ ಶೆಟ್ಟಿ ಭಂಡಾರಮನೆ, ಸ್ನೇಹಾ ಕನ್ನಿಗುಳಿ, ಶಶಿಕಿರಣ್ ಬೋಳ, ಲಲಿತಾ ಶಾಂತಿಪಳಿಕೆ ಹಾಗೂ ಸತೀಶ್ ಮಲಿ ಸಾಂಸ್ಕ ತಿಕ ಹಾಗೂ ಕ್ರೀಡಾ ಕಾರ್ಯಕ್ರಮ ಸಂಯೋಜಿಸಿದ್ದರು.

ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿದರು. ಬಾಲಗೋಕುಲ ಅಧ್ಯಕ್ಷೆ ಪ್ರತಿಭಾ ದಿನೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಿತಾ ಶಿವಪ್ರಸಾದ್ ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು.

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

Sri Durga Balagokula

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English