ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು 3ಡಬ್ಲ್ಯು ಕಾನ್ಸೆಪ್ಟ್ ಸಂಸ್ಥೆ ಜಂಟಿಯಾಗಿ ಫೆ. 3ರಿಂದ 5ರ ವರೆಗೆ ಆಯೋಜಿಸಿದ ‘ಸ್ಪ್ರಿಂಗ್ ಝೂಕ್’ ಅಂತಾರಾಷ್ಟ್ರೀಯ ಮಟ್ಟದ ಸಂಗೀತ ಮತ್ತು ಕಲಾ ಉತ್ಸವ ಶುಕ್ರವಾರ ಶುಭಾರಂಭಗೊಂಡಿತು.
ಮೂರುದಿನಗಳಕಾಲ ನಡೆಯುವ ‘ಸ್ಪ್ರಿಂಗ್ ಝೂಕ್’ ಕಲಾ ಉತ್ಸವದಲ್ಲಿ ಪ್ರಸಿದ್ಧ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಹುಲಿಕುಣಿತ, ಯಕ್ಷಗಾನ, ಭೂತಕೋಲ ವಾದ್ಯ, ಕುಡುಬಿಯವರ ನೃತ್ಯ, ಡೊಳ್ಳುಕುಣಿತ, ಮರಾಠಿಗರ ನೃತ್ಯವೇ ಮೊದಲಾದ ಸ್ಥಳೀಯ ತಂಡಗಳು ಪಾಲ್ಗೊಳ್ಳುತ್ತಿವೆ. ರಾಜ್ಯದ ಇತರ ಭಾಗದ ಮೂರು ಜಾನಪದ ತಂಡಗಳು ಪಾಲ್ಗೊಳ್ಳುತ್ತವೆ. ವಿಶ್ವ ದರ್ಜೆಯ ಸಂಗೀತಕಾರರಾದ ಪ್ರೇಮ್ ಜೋಶುವ, ಜುನೊ ರಿಯಾಕ್ಟರ್, ಹೈಲೈಟ್ ಟ್ರೈಬ್ ತಂಡ ಪಾಲ್ಗೊಳ್ಳುವುದು ಉತ್ಸವಕ್ಕೆ ಅಂತರಾಷ್ಟ್ರೀಯ ಮೆರುಗನ್ನು ನೀಡಿದೆ. ಸಂಗೀತ ಮಾತ್ರವಲ್ಲದೆ ಕರಕುಶಲ ಸಾಮಗ್ರಿಗಳ ಮೇಳವೂ ವಿದೇಶೀ ಪ್ರವಾಸಿಗರನ್ನು ಆಕರ್ಷಿಸಿದೆ. ಕರಾವಳಿಯನ್ನು ಪ್ರವಾಸೋದ್ಯಮ ದೃಷ್ಟಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಖಾಸಗಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ.
ಶಾಸಕ ಕೆ.ರಘುಪತಿ ಭಟ್, ಜಿಲ್ಲಾಧಿಕಾರಿ ಡಾ| ಎಂ.ಟಿ. ರೆಜು, 3ಡಬ್ಲ್ಯು ಕಾನ್ಸೆಪ್ಟ್ ಸಂಸ್ಥೆಯ ಆಡಳಿತ ಪಾಲುದಾರ ಗಿರೀಶ್ ಶೆಟ್ಟಿ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಡರು.
Click this button or press Ctrl+G to toggle between Kannada and English