ಶಬರಿಮಲೆ ಕ್ಷೇತ್ರಕ್ಕೆ ಅದರದ್ದೇ ಆದ ಸಾಂಪ್ರದಾಯಿಕ ಸೌಂದರ್ಯವಿದ್ದು, ಅದನ್ನು ಉಳಿಸಿಕೊಳ್ಳಬೇಕು: ವೀರೇಂದ್ರ ಹೆಗ್ಗಡೆ

10:18 AM, Wednesday, October 24th, 2018
Share
1 Star2 Stars3 Stars4 Stars5 Stars
(No Ratings Yet)
Loading...

Manjushaಧರ್ಮಸ್ಥಳ: ಮಹಿಳೆಯರು ಶಬರಿಮಲೆಗೆ ಹೋದರೆ ಸಂಯಮದ ತತ್ವವೇನಿದೆಯೋ, ಅದು ಸಡಿಲವಾಗುತ್ತದೆ. ಅವರ ಪ್ರವೇಶದಿಂದ ಸಂಯಮಕ್ಕೆ, ಮನೋನಿಗ್ರಹಕ್ಕೆ ಧಕ್ಕೆಯಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಪಟ್ಟಿದ್ದಾರೆ.

ಶಬರಿಮಲೆಗೆ ಸ್ತ್ರೀಯರ ಪ್ರವೇಶ ವಿವಾದಕ್ಕೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಶಬರಿಮಲೆ ಪ್ರವೇಶ ಭಕ್ತಿಯಿಂದ ಮಾಡುವುದಾದರೆ ಮನೆಯಲ್ಲಿ ಕೂಡಾ ಮಾಡಬಹುದು. ಅಲ್ಲಿಗೇ ಹೋಗಬೇಕಾಗಿಲ್ಲ. ಪುರುಷರಿಗೆ ಸಂಯಮದ ಅಭ್ಯಾಸ ಮಾಡಿಸಲಿಕ್ಕಾಗಿ ಈ ಪದ್ಧತಿಯಿದೆ ಎಂದು ನನ್ನ ಒಂದು ಕಲ್ಪನೆ. ಯಾಕೆಂದರೆ 48 ದಿನಗಳ ಕಾಲ ವ್ರತನಿಷ್ಠನಾಗಿ, ಬ್ರಹ್ಮಚರ್ಯನಾಗಿ ದಿವಸಕ್ಕೆ ಕನಿಷ್ಠ ಮೂರು ಸಲ ಸ್ನಾನ ಮಾಡಬೇಕು. ಮಹಿಳೆಯರು ಮಾಡಿದ ಅಡುಗೆಯನ್ನೂ ಸೇವಿಸಬಾರದು. ಆ ಮಟ್ಟಿಗೆ ವ್ರತದ ನಿಯಮವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಅಲ್ಲಿಗೆ ಹೋದರೆ ಸಂಯಮದ ತತ್ವ ಏನಿದೆ ಅದು ಸಡಿಲವಾಗುತ್ತದೆ ಎಂದರು.

Manjusha 2ಕೆಲವೊಂದು ಕ್ಷೇತ್ರಕ್ಕೆ ಇರುವ ವಿಶೇಷವೇನಿದೆಯೋ, ಅದೇ ಅದಕ್ಕೆ ಸೌಂದರ್ಯ. ವಿದೇಶಗಳಲ್ಲಿ ಕೂಡಾ ಕೆಲವೊಂದು ಕಡೆ ಮಹಿಳೆಯರು ಇಂತಹ ಸ್ಥಳಗಳಿಗೆ ಹೋಗಬಾರದೆಂಬ ನಿಯಮವಿದೆ. ಅಥವಾ ಕೆಲವೊಂದು ಕಡೆ ಹೋಗುವಾಗ ತಲೆಗೆ ಬಟ್ಟೆಯನ್ನು ಕಟ್ಟಿಕೊಂಡು ಹೋಗಬೇಕೆಂಬ ನಿಯಮವಿದೆ ಎಂದು ಧರ್ಮಾಧಿಕಾರಿ ಹೇಳಿದರು.

ನಮ್ಮ ಹಿರಿಯರು ಕೆಲವೊಂದು ನಿಯಮ ಮಾಡಿದ್ದು, ಒಬ್ಬ ಪುರುಷನಿಗೆ ಸ್ಥೈರ್ಯ ಬರಬೇಕು. ತನ್ನ ಸಂಸಾರದ ಹೊರತು ಬೇರೆ ಕಡೆಗೆ ನೋಡಬಾರದು, ಬೇರೆಯವರಿಗೆ ತೊಂದರೆ ಕೊಡಬಾರದು. ಮನೋನಿಗ್ರಹ ಮಾಡಿಕೊಳ್ಳಬೇಕು ಎಂದು.

ನನ್ನ ದೃಷ್ಠಿಯಲ್ಲಿ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವುದು ಬಿಡುವುದು ಬೇರೆ ವಿಷಯ. ಆದರೆ ಒಂದೊಂದು ಕ್ಷೇತ್ರಕ್ಕೆ ಅದರದ್ದೇ ಆದ ಸಾಂಪ್ರದಾಯಿಕ ಸೌಂದರ್ಯವಿದ್ದು, ಅದನ್ನು ಉಳಿಸಿಕೊಳ್ಳಬೇಕು ಎಂದು ಹೆಗ್ಗಡೆಯವರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English