ಮಂಗಳೂರು: ಉಪ್ಪಿನಂಗಡಿಯ ಕುಪ್ಪೆಟ್ಟಿ ನದಿ ಬಳಿ ನಡೆದ ಕೇರಳದ ರೌಡಿ ಶೀಟರ್ ಉಣ್ಣಿಕೃಷ್ಣನ್ ಕೊಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿವೋರ್ವನನ್ನು ಪೊಲೀಸರು ಕೊಚ್ಚಿಯಲ್ಲಿ ಬಂಧಿಸಿದ್ದಾರೆ.
ಕೇರಳದ ಎರ್ನಾಕುಲಂ ನಿವಾಸಿ ನಟೋರಿಯಸ್ ಗ್ಯಾಂಗ್ನ ರೌಡಿ ಶೀಟರ್ ಅನಾಸ್(35) ಬಂಧಿತ ಆರೋಪಿ.
ಸೆ.2 ರಂದು ಉನ್ನಿಕೃಷ್ಣನ್ನನ್ನು ಕೊಲೆ ಮಾಡಿ ಉಪ್ಪಿನಂಗಡಿಯ ಕುಪ್ಪೆಟ್ಟಿ ನದಿ ಬಳಿ ಶವ ಎಸೆದು ಹೋಗಿದ್ದರು. ಸೆ.4ರಂದು ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸಿ 4 ಜನರನ್ನು ಬಂಧಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಅವರು ವಿಶೇಷ ತನಿಖೆ ಮಾಡಲು ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ಅವರಿಗೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಎಸ್ಐ ನಂದಕುಮಾರ್ ಹಾಗೂ ಅವರ ತಂಡ ವಿಶೇಷ ತನಿಖೆ ನಡೆಸಿ ಕೊಚ್ಚಿಯಲ್ಲಿದ್ದ ರೌಡಿ ಶೀಟರ್ ಅನಾಸ್ನನ್ನು ಬಂಧಿಸಿದೆ.
ಕೇರಳ ಪೊಲೀಸರ ಸಹಾಯದಿಂದ ಗುರುವಾರ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡ ಪೊಲೀಸರು, ಉಪ್ಪಿನಂಗಡಿ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಅನಾಸ್ ಎರ್ನಾಕುಲಂನಲ್ಲಿ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಹಲವು ದಂಧೆಗಳನ್ನು ಮಾಡುತ್ತಿದ್ದ ಎಂದು ಮಾಹಿತಿ ಉಪ್ಪಿನಂಗಡಿ ಪೊಲೀಸರಿಗೆ ಲಭ್ಯವಾಗಿದೆ.
Click this button or press Ctrl+G to toggle between Kannada and English