ನಿಮಗೆ ಅಧಿಕಾರ ನಡೆಸಲು ಹೇಳಿ ಕೊಟ್ಟವರೇ ನಾವು: ಯಡಿಯೂರಪ್ಪಗೆ ಸಿಎಂ ಟಾಂಗ್

2:31 PM, Tuesday, October 30th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamyಶಿವಮೊಗ್ಗ: ನಿಮಗೆ ಅಧಿಕಾರ ನಡೆಸಲು ಹೇಳಿ ಕೊಟ್ಟವರೇ ನಾವು. ಇಲ್ಲದಿದ್ದರೆ ನಿಮಗೆ ಅಧಿಕಾರ ನಡೆಸಲು ಬರುತ್ತಿರಲಿಲ್ಲ ಎಂದು ಶಿವಮೊಗ್ಗದಲ್ಲಿ ಸಿಎಂ ಕುಮಾರಸ್ವಾಮಿ ಮಾಜಿ ಸಿಎಂ ಯಡಿಯೂರಪ್ಪಗೆ ಟಾಂಗ್ ನೀಡಿದ್ದಾರೆ.

ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಾದಾಗಿನಿಂದ ಮಾಧ್ಯಮದವರನ್ನು ಬಿಜೆಪಿಯವರು ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಡೆಡ್ಲೈನ್ ನೀಡುತ್ತಾ ಬರುತ್ತಿದ್ದಾರೆ. ಇವರೇನು ಜ್ಯೋತಿಷ್ಯಗಳಾ..? ಎಂದು ಟಾಂಗ್ ನೀಡಿದರು. ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕರನ್ನು ಕೊಂಡುಕೊಂಡಿದ್ದೇವೆ. ದೀಪವಾಳಿಯ ನಂತರ ಸರ್ಕಾರ ಬಿದ್ದು ಹೋಗುತ್ತೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. 2005ರಲ್ಲಿ ಸಚಿವ ಸ್ಥಾನ ಕೊಡಿ ಎಂದು ಚೀಟಿ ಕಳುಹಿಸಿದ್ದು ಯಾರು? ಎಂದು ಪ್ರಶ್ನಿಸಿದರು.

ರಾಹು, ಕೇತುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಹಿಂದೆ ನಿಮ್ಮನಿಮ್ಮಲ್ಲಿಯೇ ಕೆಸರೆರಾಚಾಟ ಮಾಡಿಕೊಂಡ್ರಲ್ಲಾ ಅದು ಏನು? ಅಧಿಕಾರಕ್ಕೆ ಬಂದು 24ಗಂಟೆಯಲ್ಲಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತಿನಿ ಅಂತ ಹೇಳಿದ್ದ ನಿಮಗೆ ಈಗ ಸಿದ್ದರಾಮಯ್ಯನವರ ಬಗ್ಗೆ ಅನುಕಂಪ ಬಂತಾ? ಬಿಎಸ್ವೈಯವರು ಹಗರಣ ಮುಚ್ಚಿ ಹಾಕಿಕೊಳ್ಳಲು ಏನೇನೂ ಮಾಡಿದ್ರಿ ಅನ್ನೋದು ಗೊತ್ತು ಎಂದು ಸಿಎಂ ಹೇಳಿದ್ರು.

ನಾನು ಸಮ್ಮಿಶ್ರ ಸರ್ಕಾರದಲ್ಲಿದಾಗ ಗ್ರಾಮ ವಾಸ್ತವ್ಯ ಮಾಡಿದಾಗ ನೀವು ಬೆಂಗಳೂರಿನಲ್ಲಿ ಕುಳಿತುಕೊಂಡು ಏನು ಮಾಡಿದ್ರಿ ಅಂತ ಗೂತ್ತು. ಶಿವಮೊಗ್ಗ ಅಭಿವೃದ್ಧಿ ಅಂತ ಹೇಳಿದ್ರಲ್ಲಾ. ಎಷ್ಟು ಕಾರ್ಖಾನೆ ಉಳಿಸಿದ್ರಿ, ಎಷ್ಟು ಕಾರ್ಖಾನೆ ಪ್ರಾರಂಭಿಸಿದ್ರಿ…? ವರ್ಗಾವಣೆಯಲ್ಲಿ ಹಣ ಮಾಡಿದ್ದೇವೆ ಅಂತಿರಲ್ಲ.. ಈಶ್ವರಪ್ಪ ಕುಟುಂಬದವರಿಗೆ ವರ್ಗಾವಣೆ ಮಾಡಿದ್ದಕ್ಕೆ ಎಷ್ಟು ಕೊಟ್ರು ಅಂತ ಅವರೇ ಹೇಳಬೇಕು ಎಂದರು.

ರಾಜ್ಯದ ಉಪ ಚುನಾವಣೆಯಲ್ಲಿ ಅತಿ ಮುಖ್ಯವಾಗಿರುವುದು ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಭಾ ಕ್ಷೇತ್ರಗಳಾಗಿವೆ. ಆದ್ರೆ ಬಿಜೆಪಿಯವರು ಕೇವಲ ಆರೋಪ, ಪ್ರತ್ಯಾರೋಪದಲ್ಲೇ ತೊಡಗಿಕೊಂಡಿದ್ದಾರೆ. ಅಭಿವೃದ್ಧಿಯ ಬಗ್ಗೆ ಎಲ್ಲೂ ಮಾತನಾಡುತ್ತಿಲ್ಲ. ಬಿಜೆಪಿಯವರು ಚುನಾವಣಾ ಆಯೋಗದವರಿಗೆ ನನ್ನ ವಿರುದ್ಧ ದೂರು ನೀಡಿದ್ದಾರೆ. ಈ ಕುರಿತು ಬಿಜೆಪಿ ನಾಯಕರಿಗೆ ಮನವಿ ಮಾಡುತ್ತೇನೆ. ಸರ್ಕಾರ ರಚನೆಯಾದ ಮೇಲೆ ಜನಪರ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಿದ್ದೇನೆ. ಸಾಲ ಮನ್ನಾದ ಬಗ್ಗೆ ಬಿಜೆಪಿಯವರು ಅಪಪ್ರಚಾರ ನಡೆಸುತ್ತಿರುವಾಗ ಅದರ ಕುರಿತು ಉತ್ತರ ನೀಡಿದ್ದೇನೆ. ಅದಕ್ಕೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಅಂತ ದೂರ ನೀಡಿರುವುದು ಎಷ್ಟು ಸರಿ ಎಂದು ಸಿಎಂ ಪ್ರಶ್ನಿಸಿದರು.

ಶಿರಾಳಕೊಪ್ಪದಲ್ಲಿ ಸಾರ್ವಜನಿಕರು ನೀರಾವರಿ ಸಮಸ್ಯೆಯ ಬಗ್ಗೆ ಮನವಿ ಮಾಡಿದಾಗ ಸರ್ಕಾರದ ನೀರಾವಾರಿ ಕ್ರಮದ ಬಗ್ಗೆ ತಿಳಿಸಿದ್ದೇನೆ. ಬಿಎಸ್ವೈ 20 ಉಪಚುನಾವಣೆ ನಡೆಸಿದರು. ಈ ವೇಳೆ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿದ್ರೆ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ರಲ್ಲಾ ಅದು ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತೆ ಅಲ್ವಾ? ಎಂದು ಪ್ರಶ್ನಿಸಿದರು.

ರಾಜ್ಯ ತೆರಿಗೆಯಲ್ಲಿ ಶೇ. 52ರಷ್ಟು ಪ್ರಗತಿಯನ್ನು ಈಗಾಗಲೇ ಸಾಧಿಸಿಯಾಗಿದೆ. ಮಾರ್ಚ್ ಅಂತ್ಯಕ್ಕೆ ಶೇ.102 ಕ್ಕೆ ಏರಿಕೆಯಾಗಲಿದೆ. ನಾನು ರಾಜ್ಯದ 30 ಜಿಲ್ಲೆಗಳಿಗೂ ಸಿಎಂ. ಕೇವಲ ಮಂಡ್ಯ ಮೈಸೂರಿಗೆ ಅಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳ ಸಾಲಮನ್ನಾಗೆ ಪ್ರತ್ಯೇಕ ಸೆಲ್ ತೆಗೆದಿದ್ದೇನೆ. ಅದಕ್ಕೆ ಓರ್ವ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿದ್ದೇನೆ. ಮುಂದಿನ ಬಜೆಟ್ನಲ್ಲಿ 35 ಸಾವಿರ ಕೋಟಿರೂ ಮನ್ನಾ ಮಾಡುವ ಬಗ್ಗೆ ಯೋಚನೆ ಮಾಡಲಾಗಿದೆ. ರಾಹುಲ್ ಗಾಂಧಿ ರಾಜ್ಯದ ಸಾಲ ಮನ್ನಾದ ಬಗ್ಗೆ ಮಾಹಿತಿ ತರಿಸಿಕೊಂಡಿದ್ದು, ಮಧ್ಯ ಪ್ರದೇಶದಲ್ಲಿ ಮುಂದೆ ಸಾಲಮನ್ನಾ ಮಾಡುವ ಯೋಚನೆಯಲ್ಲಿದ್ದಾರೆ ಎಂದು ಹೇಳಿದರು.

2019ರ ಲೋಕಸಭಾ ಚುನಾವಣೆಗೆ ಈ ಉಪ ಚುನಾವಣೆ ದಿಕ್ಸೂಚಿಯಾಗಲಿದೆ. ಈ ಕುರಿತು ಈಗಾಗಲೇ ಎರಡು ಪಕ್ಷಗಳ ಮುಖಂಡರು ಕುಳಿತು ಮಾತನಾಡಿದ್ದೇವೆ. 8 ವಿಧಾನ ಸಭಾ ಕ್ಷೇತ್ರಗಳ ಪ್ರವಾಸ ಮಾಡಿ ಮಧು ಬಂಗಾರಪ್ಪರಿಗೆ ಮತ ನೀಡಿ ಎಂದು ಮನವಿ ಮಾಡಿದ್ದೇನೆ. ನನ್ನ ಅಭಿವೃದ್ಧಿಯ ಮೇಲೆ ಮತ ಕೇಳಿದ್ದೇನೆ. ಒಂದು ರಾಜಕೀಯ ಬದಲಾವಣೆಗೆ ಮತ ನೀಡಿ ಎಂದು ಕೇಳಿಕೊಂಡಿದ್ದೇನೆ. ಚುನಾವಣೆ ಎರಡು ಪಕ್ಷದ ನಾಯಕರ ದುಡಿಮೆ ಮೇಲೆಯೇ ನಿಂತಿದೆ. ಯಾರೂ ಯಾರನ್ನು ಸೋಲಿಸಲು ಆಗುವುದಿಲ್ಲ. ಯಾರನ್ನು ಸೋಲಿಸಬೇಕು ಎಂದು ಜನ ತೀರ್ಮಾನ ಮಾಡುತ್ತಾರೆ ಎಂದರು.

ಬಿಜೆಪಿಯವರು ರಾಮನ ಹೆಸರು ಹೇಳಿ ಎಷ್ಟು ಸರ್ಕಾರ ರಚನೆ ಮಾಡಿದ್ರು. ರಾಜ್ಯಗಳಲ್ಲೂ ಸಹ ಅಧಿಕಾರ ಹಿಡಿದ್ರು. ಬಿಜೆಪಿಯವರಿಗೆ ರಾಮಮಂದಿರ ಬಿಟ್ಟು ಬೇರೆ ವಿಷಯಗಳಿಲ್ಲ. ಈಗಾಗಲೇ ಎರಡು ಲೋಕಸಭಾ ಕ್ಷೇತ್ರ ಗೆದ್ದಿದ್ದೇವೆ ಎಂಬ ಬಿಎಸ್ವೈ ಹೇಳಿಕೆ ಅಹಂನಿಂದ ಕೊಡಿದೆ. ನಮ್ಮ ಅಭ್ಯರ್ಥಿಯ ಮೇಲೆ ಜನರ ವಿಶ್ವಾಸವನ್ನು ಪ್ರಚಾರದ ವೇಳೆ ಕಾಣುತ್ತಿದ್ದೇನೆ. ವಾಲ್ಮಿಕಿ ಸಮಾಜದವರ ಬಗ್ಗೆ ನನಗೆ ಗೌರವವಿದೆ. ನನಗೆ ಅನಾರೋಗ್ಯವಿದ್ದ ಕಾರಣ ವಾಲ್ಮಿಕಿ ಕಾರ್ಯಕ್ರಮಕ್ಕೆ ಹೋಗಲಿಲ್ಲ. ಇದಕ್ಕೆ ವಾಲ್ಮಿಕಿ ಸಮಾಜದವರು ತಪ್ಪು ತಿಳಿಯುವ ಅವಶ್ಯಕತೆ ಇಲ್ಲ ಎಂದರು.

ಚುನಾವಣಾ ಬಹಿಷ್ಕಾರದ ಬಗ್ಗೆ ತಿಳಿದಿದೆ. ಯಾರು ಸಹ ಮತದಾನ ಬಹಿಷ್ಕಾರ ಮಾಡಬೇಡಿ ಎಂದು ಹೆಚ್ಡಿಕೆ ವಿನಂತಿ ಮಾಡಿದರು. ಮುಂದಿನ ದಿನಗಳಲ್ಲಿ ಗ್ರಾಮಗಳ ಬಗ್ಗೆ ಗಮನ ಹರಿಸಲಾಗುವುದು. ಈಗ ಏನಾದ್ರೂ ಹೇಳಿದ್ರೆ ಅದು ನೀತಿ ಸಂಹಿತೆ ಉಲ್ಲಂಘನೆಯಾದಂತೆ ಆಗುತ್ತದೆ. ಹಿಂದೆ ಅಧಿಕಾರದಲ್ಲಿದ್ದ ಬಿಎಸ್ವೈ ಹಾಗೂ ಅವರ ಮಗ ಏನೂ ಮಾಡಿದ್ರು ಅಂತ ಈ ವೇಳೆ ಪ್ರಶ್ನಿಸಿದರು. ಮಧು ಬಂಗಾರಪ್ಪ, ಸಚಿವರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪುರ್ ಸೇರಿದಂತೆ ಇತರರು ಹಾಜರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English