ಉಡುಪಿ: ಉಡುಪಿಯ ಬೈಂದೂರಿನಲ್ಲಿ ಚುನಾವಣಾ ಪ್ರಚಾರ ಸಂದರ್ಭ ಅವರು ಮಾತನಾಡಿದರು. ಕರಾವಳಿ ಜನ ಹಿಂದುತ್ವಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ-ಮುಸಲ್ಮಾನರು ಸಂಘರ್ಷಕ್ಕೆ ಒಳಗಾಗಬೇಡಿ. ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ. ಭಾವನಾತ್ಮಕ ವಿಚಾರವನ್ನು ಜನರ ಮುಂದಿಡುತ್ತ ಬಿಜೆಪಿ ಚುನಾವಣೆ ನಡೆಸುತ್ತೆ ಎಂದು ಸಿಎಂ ಗುಡುಗಿದರು.
ನಾನು ಯಾವುದೇ ತಪ್ಪು ಮಾಡಿಲ್ಲ. ಚುನಾವಣೆ ಸಂದರ್ಭ ವೈಯುಕ್ತಿಕ ವಿಚಾರದ ಬಗ್ಗೆ ಚರ್ಚೆ ಮಾಡಲ್ಲ. ಕುಮಾರ್ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದೆ. ನಾನು ಈ ಬಗ್ಗೆ ಮಾತನಾಡಲ್ಲ. ಎಲ್ಲವನ್ನು ಎದುರಿಸುವ ಸಾಮರ್ಥ್ಯವನ್ನು ದೇವರು ಕೊಟ್ಟಿದ್ದಾನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. (ಕುಮಾರಸ್ವಾಮಿ ಕೂಡ ಮೀ ಟೂ ಆರೋಪಕ್ಕೆ ಒಳಗಾಗಬಹುದು: ಕುಮಾರ್ ಬಂಗಾರಪ್ಪ)
ಬಂಗಾರಪ್ಪರ ಮಗನಾಗಿ ಕುಮಾರ್ ಬಂಗಾರಪ್ಪ ಏನು ಮಾಡಿದ್ದಾರೆ. ಜಿಲ್ಲೆಗೆ, ರಾಜ್ಯಕ್ಕೆ ಕುಮಾರ್ ಬಂಗಾರಪ್ಪನ ಕೊಡುಗೆ ಏನು? ಬಂಗಾರಪ್ಪ ಹೆಸರು ದುರುಪಯೋಗಪಡಿಸಿ ಮತ ಕೇಳುವ ಅವಶ್ಯಕತೆ ನಮಗಿಲ್ಲ. ಮಧು ಬಂಗಾರಪ್ಪ ಸ್ಮಾರಕದ ವಿನ್ಯಾಸ ರೆಡಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ನಾಯಕರು ಸರ್ಕಾರ ಬೀಳಿಸುವ ಕನಸಿನಲ್ಲಿದ್ದಾರೆ. ನಮಗೆ ದೇವರ ಪ್ರೇರೇಪಣೆ ಇದೆ. ನಾನು ಎಷ್ಟು ದಿನ ಅಧಿಕಾರದಲ್ಲಿ ಇರಬೇಕೆಂದು ದೇವರು ತೀರ್ಮಾನಿಸುತ್ತಾನೆ. ಉಪ ಚುನಾವಣೆ ನಂತರ ನಾನು ಮನೆಗೆ ಹೋಗಲ್ಲ. ಯಡಿಯೂರಪ್ಪ ಹೇಳಿದಂತೆ ಯಾವುದೂ ಆಗಲ್ಲ. ಬಡವರ ಮನೆಗೆ ನಾನು ಬರುತ್ತೇನೆ. ಬಡವರ ಮನೆಯಲ್ಲಿ ಕುಳಿತು ಚರ್ಚೆ ಮಾಡ್ತೇನೆ. ಸರ್ಕಾರದ ಖಜಾನೆಯಲ್ಲಿ ಸಾಕಷ್ಟು ದುಡ್ಡಿದೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಉಪ ಚುನಾವಣೆಯಲ್ಲಿ ಅಪ್ಪ-ಮಕ್ಕಳನ್ನು ಸೋಲಿಸಬೇಕು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Click this button or press Ctrl+G to toggle between Kannada and English