ಚಿಕ್ಕಮಗಳೂರು: ಸ್ಕೂಟಿಗೆ ಪೆಟ್ರೋಲ್ ಹಾಕಿಸಿ ಹಣ ನೀಡದೆ ಯುವಕನೋರ್ವ ಪರಾರಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಬಾಳೆಹೊನ್ನೂರಿನ ಶ್ರೀರಂಭಾಪುರಿ ಸವಿ೯ಸ್ ಸ್ಟೇಷನ್ಗೆ ಸ್ಕೂಟಿಯಲ್ಲಿ ಬಂದ ಯುವಕ 300 ರೂ. ಪೆಟ್ರೋಲ್ ಹಾಕಿಸಿ ಹಣ ಪಾವತಿಸದೆ ಪರಾರಿಯಾಗಿದ್ದಾನೆ.
ಹಣ ನೀಡದೆ ಯುವಕ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೊದಲಿಗೆ ಎಟಿಎಂ ಕಾರ್ಡ್ ಕೊಟ್ಟಿದ್ದಾನೆ. ಆದರೆ ಅದರಲ್ಲಿ ಹಣ ಇಲ್ಲದ ಕಾರಣ ಪೆಟ್ರೋಲ್ ಬಂಕ್ನವರು ಯುವಕನ ಬಳಿ ಹಣ ಕೇಳಿದ್ದಾರೆ. ಹಣ ಕೇಳುತ್ತಿದಂತೆ ಸ್ಕೂಟಿಯಲ್ಲಿದ್ದ ಯುವಕ ಸ್ಕೂಟಿ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English