ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ ವೇಗದ ಬೌಲರ್​ ಮುನಾಫ್​ ಪಟೇಲ್..!

3:32 PM, Saturday, November 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

munaf-patelನವದೆಹಲಿ: ಭಾರತದ ವೇಗದ ಬೌಲರ್ ಮುನಾಫ್ ಪಟೇಲ್ ಶನಿವಾರ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ವಯಸ್ಸು ಹಾಗೂ ಸದೃಢತೆ ಕಾಪಾಡಿಕೊಳ್ಳುವುದು ಅಸಾಧ್ಯ ಎಂಬ ಕಾರಣ ನೀಡಿ ಮುನಾಫ್ ಪಟೇಲ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಇದ್ದಕ್ಕಿದ್ದಂತೆ ಕ್ರಿಕೆಟ್ಗೆ ವಿದಾಯ ಹೇಳಲು ಯಾವುದೇ ಇನ್ನಿತರ ಕಾರಣಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಮೂಲದ ಮುನಾಫ್ ಪಟೇಲ್ ಭಾರತದ ಪರ 13 ಟೆಸ್ಟ್, 70 ಏಕದಿನ ಹಾಗೂ 3 ಟಿ-20 ಪಂದ್ಯಗಳಲ್ಲಿ ಆಟವಾಡಿದ್ದಾರೆ.

ನಿವೃತ್ತಿ ಘೋಷಿಸಿ ಮಾತನಾಡಿರುವ ಅವರು, ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡುತ್ತಿರುವ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ. ಜೀವನದಲ್ಲಿ ಒಮ್ಮೆ ಎಲ್ಲರ ಸಮಯ ಒಳ್ಳೆಯದಾಗಿರುತ್ತದೆ. ನನ್ನ ಜೊತೆಗಿದ್ದವರು ಎಲ್ಲರು ಆಡುತ್ತಿದ್ದು, ತಾವೊಬ್ಬರೇ ನಿವೃತ್ತಿ ಘೋಷಿಸಿದ್ದರೆ ತುಸು ಬೇಜಾರಾಗುತ್ತಿತ್ತು. ಆದರೆ ಈಗ ಧೋನಿ ಅವರನ್ನು ಬಿಟ್ಟರೆ ಇನ್ನುಳಿದವರೆಲ್ಲ ನಿವೃತ್ತಿ ಘೋಷಿಸಿದ್ದಾರೆ ಎಂದಿದ್ದಾರೆ ಮುನಾಫ್ ಪಟೇಲ್.

ಅಂತಾರಾಷ್ಟ್ರೀಯ ಹಾಗೂ ದೇಶಿ ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅವರು ಕ್ರಿಕೆಟ್ ಅಂಗಳದಿಂದ ದೂರ ಉಳಿಯುವುದಿಲ್ಲ ಯುಎಇಯಲ್ಲಿ ನಡೆಯಲಿರುವ ಟಿ-10 ಲೀಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ.

13 ಟೆಸ್ಟ್ಗಳಲ್ಲಿ 38.54 ರ ಸರಾಸರಿಯಲ್ಲಿ 35 ವಿಕೆಟ್ ಪಡೆದಿರುವ ಮುನಾಫ್ ಪಟೇಲ್, 70 ಒಡಿಐ ಪಂದ್ಯಗಳಲ್ಲಿ 86 ವಿಕೆಟ್ ಪಡೆದು ಮಿಂಚಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English