ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ: ಬಿಜೆಪಿ ವಕ್ತಾರ ಸಿ.ಟಿ. ರವಿ

3:45 PM, Wednesday, November 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

c-t-raviಮಂಗಳೂರು: ಪತ್ರಕರ್ತ ಸಂತೋಷ್ ತಮ್ಮಯ್ಯರನ್ನು ಬಂಧಿಸಿದ ರಾಜ್ಯ ಸಮ್ಮಿಶ್ರ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಸಿ.ಟಿ. ರವಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ, ಭಗವದ್ಗೀತೆ, ವಿವೇಕಾನಂದ, ‌ಮೋದಿ ಅವಹೇಳನ ಮಾಡುವವರಿಗೆ ಒಂದು ನೀತಿ, ಟಿಪ್ಪು ವಿರೋಧಿಸುವವರಿಗೆ ಒಂದು ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ ಎಂದರು.

ರಾಮ, ರಾಮಾಯಣ ಅವಹೇಳನ ಮಾಡಿದ ಪ್ರೊ ಭಗವಾನ್, ಮಹೇಶ್ ಚಂದ್ರ, ಯೋಗೀಶ್ ಮಾಸ್ಟರ್ ಅವರನ್ನು ಸರ್ಕಾರ ಬಂಧಿಸುವುದಿಲ್ಲ. ನಗರ ನಕ್ಸಲ್ ಎಂದು ಬೋರ್ಡ್ ಹಾಕಿ ತಿರುಗಿದ ಗಿರೀಶ್ ಕಾರ್ನಾಡ್ ಅವರನ್ನು ಬಂಧಿಸುವುದಿಲ್ಲ. ಆದರೆ ಟಿಪ್ಪು ಬಗ್ಗೆ ಮಾತನಾಡಿದಕ್ಕೆ ಸಂತೋಷ್ ತಮ್ಮಯ್ಯರನ್ನು ಬಂಧಿಸಲಾಗಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ , ರಾಜ್ಯ ಸರ್ಕಾರ ಇಂತಹ ದ್ವಂದ್ವ ನೀತಿ ಬಿಡಬೇಕು ಎಂದು ಆಗ್ರಹಿಸಿದರು.

ಅಸಹಿಷ್ಣುತೆ ಎಂದು ಬೋರ್ಡ್ ಹಾಕಿ ತಿರುಗಿದವರು ಸಂತೋಷ್ ತಮ್ಮಯ್ಯ ಬಂಧನಕ್ಕೆ ಮೌನವಾಗಿದ್ದಾರೆ ಎಂದು ಆಪಾದಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ , ಶಾಸಕ ಸಂಜೀವ ಮಠಂದೂರು‌‌ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English