ಮಂಗಳೂರು: ರಮಾನಾಥ ರೈಯವರು ಕಾಂಗ್ರೆಸ್ನಲ್ಲಿ ಈಗ ಸಕ್ಕರೆ ಇಲ್ಲದ ಚಹಾದಂತಾಗಿದ್ದಾರೆ. ಅಧಿಕಾರ ಇಲ್ಲದೆ ಚಡಪಡಿಸುವ ಸ್ಥಿತಿಯಲ್ಲಿದ್ದಾರೆ ಎಂದು ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ವ್ಯಂಗ್ಯವಾಡಿದರು.
ರಮಾನಾಥ ರೈ ಅವರು ಇತ್ತೀಚೆಗೆ ನಡೆದ ಪ್ರತಿಭಟನೆಯೊಂದರಲ್ಲಿ ಸಂಸದ ನಳಿನ್ಕುಮಾರ್ ಕಟೀಲು ಸತ್ತ ಹಾಗೆ. ಇನ್ನು ಅವರ ಶವ ಸಂಸ್ಕಾರ ಬಾಕಿ ಇದೆ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ. ಒಬ್ಬ ಜನಪ್ರತಿನಿಧಿಯ ಶವ ಸಂಸ್ಕಾರವನ್ನು ನೋಡಬೇಕೆಂಬ ಹಸಿವು ಇರುವ ರಮಾನಾಥ ರೈ ಅವರು ಜಿಹಾದಿ ಸಂಸ್ಕಾರದಲ್ಲಿ ಇದ್ದಾರೋ ಎಂಬ ಅನುಮಾನ ಬರುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ನ ಪ್ರತಿಯೊಬ್ಬ ಶಾಸಕರು, ಸಚಿವರು ಮತ್ತೊಬ್ಬರ ಸಾವನ್ನು ಸಂಭ್ರಮಿಸುತ್ತಿರುವುದು ನಾವು ಕಾಣುತ್ತಿದ್ದೇವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ಗೆ ಬಿಜೆಪಿ ವಿರುದ್ಧ ಅಲ್ಲ. ಆದರೆ ಬಂಟ್ವಾಳದಲ್ಲಿರುವ ಇಂದಿರಾ ಕ್ಯಾಂಟೀನ್ನ ತಡೆಗೋಡೆಯನ್ನು ವಾಹನ ಪಾರ್ಕಿಂಗ್ ಸ್ಥಳದಲ್ಲಿಯೇ ಕಟ್ಟಲಾಗಿದೆ. ಇವರ ಈ ಜಿಹಾದಿ ಮನಸ್ಥಿತಿಯನ್ನು ಕಂಡ ಬಂಟ್ವಾಳದ ಜನತೆ, ಇವರನ್ನು ಮೂವತ್ತು ವರ್ಷ ವಿಧಾನಸಭೆಗೆ ಕಳಿಸಿದ್ದು ತಪ್ಪು ಎಂದು ಗೊತ್ತಾಗಿ ಈಗ ಮನೆಗೆ ಕಳುಹಿಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.
Click this button or press Ctrl+G to toggle between Kannada and English