ಯುವಕನ ನಾಪತ್ತೆ ಪ್ರಕರಣ: ಹೆತ್ತವರಿಂದ ಹೇಬಿಯಸ್​ ಕಾರ್ಪಸ್​ ದಾವೆ

3:13 PM, Friday, November 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

young-boyಮಂಗಳೂರು: ಮಾಜಿ ಪಿಎಸ್ಐ ಮದನ್ ಜತೆಗಿದ್ದ ಪುತ್ರ ವಿನಾಯಕ್ ನಾಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡಿಕೊಡುವಂತೆ ಹೆತ್ತವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.

ಶಕ್ತಿನಗರದ ನಿವಾಸಿ ಶಿವಕುಮಾರ್ ಹಾಗೂ ಸಾಕಮ್ಮ ದಂಪತಿ ಪುತ್ರ ವಿನಾಯಕ ನವೆಂಬರ್ 8ರಂದು ಬಿಜೈನ ಅಪಾರ್ಟ್ಮೆಂಟ್ನಿಂದ ನಾಪತ್ತೆಯಾಗಿದ್ದ. ನ. 15ರಂದು ವಿನಾಯಕ ನಾಪತ್ತೆ ಯಾಗಿರುವು ದಾಗಿ ಮದನ್ ದೂರವಾಣಿ ಕರೆ ಮಾಡಿ ಆತನ ಹೆತ್ತವರಿಗೆ ತಿಳಿಸಿದ್ದರು. ಬಳಿಕ ಹೆತ್ತವರು ಉರ್ವ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಬಜ್ಪೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಮದನ್ ಹುದ್ದೆಗೆ ರಾಜೀನಾಮೆ ನೀಡಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಈ ಸಂದರ್ಭ ವಿನಾಯಕ ಹಾಗೂ ಇನ್ನಿತರ ಏಳೆಂಟು ಯುವಕರನ್ನು ಬಳಸಿ ಚುನಾವಣಾ ಪ್ರಚಾರ ನಡೆಸಿದ್ದರು.

ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾದ ಬಳಿಕವೂ ವಿನಾಯಕನನ್ನು ಮದನ್ ಮನೆಗೆ ಕಳುಹಿಸದೆ ತನ್ನೊಂದಿಗೆ ಇರಿಸಿಕೊಂಡಿದ್ದರು. ಉರ್ವ ಠಾಣೆಯಲ್ಲಿ ಮದನ್ ತನ್ನೊಂದಿಗೆ ಉಡಾಫೆ ಯಾಗಿ ವರ್ತಿಸಿದ್ದು, ವಿನಾಯಕನ ನಾಪತ್ತೆಗೆ ಮದನ್ ಅವರೇ ಕಾರಣ. ಪೊಲೀಸರ ತನಿಖೆಯಲ್ಲಿ ನಮಗೆ ಸಮಾಧಾನವಿಲ್ಲ. ಆದ್ದರಿಂದ ಹೈಕೋರ್ಟ್ನಲ್ಲಿ‌ ಹೇಬಿಯಸ್ ಕಾರ್ಪಸ್ ದಾವೆ ಹೂಡಿದ್ದೇವೆ ಎಂದು ಮದನ್ ತಂದೆ ಶಿವಕುಮಾರ್ ಹೇಳಿದ್ದಾರೆ.

ವಿನಾಯಕ ಎಂಜಿನಿಯರಿಂಗ್ ಶಿಕ್ಷಣವನ್ನು ಮೊಟಕುಗೊಳಿಸಿ ಮದನ್ ಜತೆ ಸೇರಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ. ಮನೆಗೆ ಬರುವಂತೆ ಕರೆದರೂ ಆತ ಬರುತ್ತಿರಲಿಲ್ಲ. ವಿನಾಯಕ ನಾಪತ್ತೆ ಯಾದ ಸಂದರ್ಭ ಮೊಬೈಲ್ನ್ನು ಮದನ್ ಅಪಾರ್ಟ್ಮೆಂಟಲ್ಲೇ ಬಿಟ್ಟು ಹೋಗಿದ್ದ. ಈ ಸಂದರ್ಭ ಆತ ರಸ್ತೆಯಲ್ಲಿ ನಡೆದು ಹೋಗುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವಿನಾಯಕನ ತಂದೆ ಶಿವಕುಮಾರ್ ಆರೋಪಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English