ಮಂಗಳೂರು ಮಹಾನಗರ ಪಾಲಿಕೆಯ ಮಹಿಳಾ ಥ್ರೋಬಾಲ್ ತಂಡಕ್ಕೆ ಜಯ

1:06 PM, Tuesday, December 4th, 2018
Share
1 Star2 Stars3 Stars4 Stars5 Stars
(No Ratings Yet)
Loading...

trowballಮಂಗಳೂರು: ಇತ್ತೀಚೆಗೆ ಬೆಂಗಳೂರು ಬಿ.ಬಿ.ಎಂ.ಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘವು ಮಲ್ಲೇಶ್ವರಂ ಮೈದಾನದಲ್ಲಿ ಏರ್ಪಡಿಸಿದ್ದ ಅಂತರ್ ಮಹಾನಗರ ಪಾಲಿಕೆಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮಹಿಳಾ ನೌಕರರ ತಂಡವು ಜಯಗಳಿಸಿದ್ದು ಟ್ರೋಫಿ ಹಾಗೂ ರೂ. ೫೦ ಸಾವಿರ ನಗದು ಪಡೆದುಕೊಂಡಿದೆ. ಬಿ.ಬಿ.ಎಂ.ಪಿ ತಂಡ ದ್ವಿತೀಯ ಸ್ಥಾನಿಯಾಗಿದೆ.

ಶ್ರೀಮತಿ ಭಾರತಿಎಸ್. ನಾಯಕತ್ವದಲ್ಲಿ ಸೆಣಸಿದ ಮ.ನ.ಪಾ ತಂಡದಲ್ಲಿ ಶ್ರೀಮತಿ ಮೀರಾ (ಉಪನಾಯಕಿ) ಶ್ರೀಮತಿ ಮೀರಾ (ಉಪ ನಾಯಕಿ) ಶ್ರೀಮತಿ ರೇಶ್ಮಾ, ಶ್ರೀಮತಿ ದೀಪಿಕಾ ಶಾಮಿನಿ ಡಿ’ಸೋಜ,ಕುಮಾರಿಯರಾದ, ಸುಮಿತ್ರಾ, ರಾಗಿಣಿ, ಶ್ರುತಿ, ರೇಖಾ ಹಾಗೂ ಶುಭ ಪಾಲ್ಗೊಂಡಿದ್ದರು.

ಎಸ್.ಕೆ. ಮುನಿಸಿಪಲ್ ಎಂಪ್ಲಾಯಿಸ್‌ ಯೂನಿಯನ್ (ರಿ) ಮಂಗಳೂರುಇದರಅಧ್ಯಕ್ಷ ಬಾಲು, ಮಾಜಿಅಧ್ಯಕ್ಷ ಶಿವರಾಜ್ ಪಿ.ಬಿ. ಕಾರ್ಯದರ್ಶಿ ಶ್ರೀನಿವಾಸ ಗಟ್ಟಿ ಮೊದಲಾದವರ ನೇತೃತ್ವದಲ್ಲಿತಂಡ ಬೆಂಗಳೂರಿಗೆ ತೆರಳಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English