ಮಂಗಳೂರು: ಸಂವಿಧಾನಕ್ಕೆ ವಿರುದ್ಧವಾಗಿ ಇತಿಹಾಸ, ದಾಖಲೆಗಳೇ ಇಲ್ಲದೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಕೊರೆಗಾಂವ್ನಂತಹ ಹೋರಾಟ ಖಂಡಿತವಾಗಿ ನಡೆಯಲಿದೆ ಎಂದು ಆರ್ಎಸ್ಎಸ್ನವರು ತಿಳಿಯಬೇಕಾಗಿದೆ ಎಂದು ದಲಿತ ಸಂಘಟನೆಯ ಮುಖಂಡ ಆನಂದ ಮಿತ್ತಬೈಲು ಹೇಳಿದರು.
ಎಸ್ಡಿಪಿಐ ವತಿಯಿಂದ ನಡೆದ ಬಾಬರಿ ಮಸೀದ್ ಮರಳಿ ಪಡೆಯೋಣ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಸ್ಥಾಪನೆ ಮಾಡಿಯೇ ಸಿದ್ಧ ಎಂದು ಈ ದೇಶದ ಗೌರವಾನ್ವಿತ ಮಾಜಿ ಮಂತ್ರಿಯಾಗಿದ್ದಂತಹ ಜನಾರ್ದನ ಪೂಜಾರಿಯವರು ಹೇಳಿದ ಮಾತನ್ನು ಮೊನ್ನೆ ಕೇಳಿದ್ದೆ. ಅವರ ಮಾತಿಗೆ ತಿರುಗೇಟು ನೀಡಿ, ಜನಾರ್ದನ ಪೂಜಾರಿಯವರೇ ಕನಸು ಅನ್ನುವುದು ಯುವ ಸಮುದಾಯಲ್ಲಿ ಇರಬೇಕು. ಬದಲಾಗಿ ನಿಮ್ಮ ನಮ್ಮ ಹಾಗೆ ಗಡ್ಡ ಹಣ್ಣಾದ ಮುದುಕರಿಗೆ ಬಾಬರಿ ಮಸೀದಿಯನ್ನು ಧ್ವಂಸ ಮಾಡಿ ಮತ್ತೆ ರಾಮ ಮಂದಿರವನ್ನು ಕಟ್ಟುವ ಕನಸು ಅದು ತಿರುಕನ ಕನಸು ಎಂದು ಲೇವಡಿ ಮಾಡಿದರು.
ಇತ್ತೀಚೆಗೆ ರಾಮ ಮಂದಿರ ಕಟ್ಟಲು ಎಲ್ಲಾ ಕಡೆ ಧರ್ಮ ಸಭೆಗಳು ನಡೆಯುತ್ತಿವೆ. ಆದರೆ ಅದು ಧರ್ಮ ಸಭೆಯಲ್ಲ, ಅದು ಅಧರ್ಮ ಸಭೆ ಎಂದರು. ಮೋದಿ ಆಳ್ವಿಕೆ ಬಂದು ನಾಲ್ಕೂವರೆ ವರ್ಷವಾಯಿತು. ಯಾವ ಮುಸ್ಲಿಂರು, ಯಾವ ಇತಿಹಾಸಕಾರರು ರಾಮ ಮಂದಿರ ಕಟ್ಟಲು ಅಡ್ಡ ಬಂದಿರಲಿಲ್ಲ. ಈಗ ಚುನಾವಣೆ ಬಂದಾಗ ನಿಮಗೆ ರಾಮನ ನೆನಪಾಗಿದೆ ಎಂದು ವ್ಯಂಗ್ಯವಾಡಿದರು.
Click this button or press Ctrl+G to toggle between Kannada and English