ಮಂಗಳೂರು: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾದರೂ ಕೇಂದ್ರ ಸರ್ಕಾರ ಈವರೆಗೆ ನಯಾಪೈಸೆ ಕೊಟ್ಟಿಲ್ಲವೆಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‌ಡಿಆರ್ಎಫ್ ನಿಂದ ರಾಜ್ಯದ 8 ಜಿಲ್ಲೆಗಳಿಗೆ 546 ಕೋಟಿ ರೂಪಾಯಿ ನೀಡಲಾಗಿದೆ. ಸರಾಸರಿ ಲೆಕ್ಕ ಹಾಕಿದರೆ ಒಂದು ಜಿಲ್ಲೆಗೆ 60 ಕೋಟಿ ಸಿಗುತ್ತದೆ. 60 ಕೋಟಿಯಲ್ಲಿ ಸಂಪಾಜೆ ರಸ್ತೆ ಸರಿಮಾಡಲಾದರೂ ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಕೊಡಗು ಜನತೆ ಮನೆ ಮಠ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮಾನವೀಯತೆಯ ಆಧಾರದಲ್ಲಿ 9 ಲಕ್ಷದ ಮನೆಯನ್ನು ಕಟ್ಟಿಕೊಡುತ್ತಿದೆ. ಮನೆ ಆಗುವವರೆಗೆ ಪ್ರತಿ ತಿಂಗಳು ಹತ್ತು ಸಾವಿರ ಬಾಡಿಗೆಯನ್ನೂ ನೀಡುತ್ತದೆ. ಅದಕ್ಕೆ ಕೂಡ ಕೇಂದ್ರ ನಯಾಪೈಸೆ ಕೊಟ್ಟಿಲ್ಲ. ಕೊಡಗು ಬಗ್ಗೆ ಕಾಳಜಿಯಿದ್ದರೆ ಪ್ರತಾಪ್ ಸಿಂಹ ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಲಿ ಎಂದರು.
Click this button or press Ctrl+G to toggle between Kannada and English