ಪಂಚರಾಜ್ಯಗಳ ಚುನಾವಣೆ: ದೇಶದಲ್ಲಿ ಅಲೆ ಎಬ್ಬಿಸಿದ್ದ ಬಿಜೆಪಿಗೆ ಕಾಂಗ್ರೆಸ್​ ಚಾಟಿ ಏಟು..!

12:24 PM, Tuesday, December 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

congressನವದೆಹಲಿ: ಜನರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಈಗಾಗಲೇ ಮಹತ್ವದ ಘಟ್ಟ ತಲುಪಿದೆ. ದೇಶದಲ್ಲಿ ಅಲೆ ಎಬ್ಬಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಚಾಟಿ ಏಟು ನೀಡುತ್ತಿದೆ. ಚುನಾವಣೆಯಲ್ಲಿ ಬಲ ಸಾಧಿಸುತ್ತಿರುವ ಕೈ ಪಾಳಯಕ್ಕೆ ಇಂದು ಮತ್ತೊಂದು ಖುಷಿ ಇದೆ.

ರಾಹುಲ್ ಗಾಂಧಿ ಎಐಸಿಸಿಯ ಅಧ್ಯಕ್ಷ ಪಟ್ಟಕ್ಕೇರಿ ಇಂದಿಗೆ ಒಂದು ವರ್ಷ ಸಂದಿದೆ. ಅಧ್ಯಕ್ಷರಾದಾಗಿನಿಂದ ಸದಾ ಟೀಕೆಗೆ ಒಳಗಾಗುತ್ತಿದ್ದ ರಾಹುಲ್ ಈ ಬಾರಿ ಡಬಲ್ ಖುಷಿ ಅನುಭವಿಸುತ್ತಿದ್ದಾರೆ. ವರ್ಷ ಪೂರ್ಣಗೊಂಡ ಬೆನ್ನಲ್ಲೆ ಚುನಾವಣೆ ಫಲಿತಾಂಶದಲ್ಲಿ ಮುನ್ನಡೆಯೂ ಅವರಿಗೆ ಅಪಾರ ಸಂತಸ ತಂದಿದೆ ಎನ್ನಲಾಗ್ತಿದೆ.

ಕಾಂಗ್ರೆಸ್ ಅಧ್ಯಕ್ಷರಾದಾಗಿನಿಂದ ರಾಹುಲ್ಗೆ ಅಷ್ಟು ಪ್ರಬುದ್ಧತೆ ಇಲ್ಲ ಎಂಬ ನಿರಂತರ ಟೀಕೆಗಳು ವ್ಯಕ್ತವಾದವು. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ರಾಹುಲ್ ಸಮರ್ಥರೇ ಅಲ್ಲ ಎಂಬುದಂತೂ ಅವರನ್ನು ಪ್ರತಿಬಾರಿ ಅವಮಾನಕ್ಕೀಡು ಮಾಡುತ್ತಿತ್ತು. ಅಧ್ಯಕ್ಷರಾದ ನಂತರ ನಡೆದ ಕೆಲ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಂಭಂಗ ಅನುಭವಿಸಿದಾಗಲಂತೂ ರಾಹುಲ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದೇ ಲೇಸು ಎಂಬ ಚುಚ್ಚು ಮಾತುಗಳೇ ಕೇಳಿಬಂದಿದ್ದವು. ಇಷ್ಟೆಲ್ಲಾ ನೋವು ಅನುಭವಿಸಿದ ರಾಹುಲ್ ತಾವು ಅಧ್ಯಕ್ಷರಾದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುವ ಸಮಯ ಇದು ಎನ್ನಲಾಗ್ತಿದೆ.

ತಾವು ಯಾವುದೇ ಕಾರಣಕ್ಕೂ ಬಗ್ಗಲ್ಲ – ಜಗ್ಗಲ್ಲ ಎನ್ನುವ ಮೂಲಕ ರಾಹುಲ್ ಗಾಂಧಿ ಹಿಂದಿ ರಾಜ್ಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಮಾನಸ ಕೈಲಾಸ ಸರೋವರ ಯಾತ್ರೆ, ಟೆಂಪಲ್ ರನ್, ಮೃದು ಹಿಂದುತ್ವ ಹಾಗೂ ಮೋದಿ ವಿರುದ್ಧದ ರಫೇಲ್ ಡೀಲ್ ಹಗರಣ, ಡಿಮಾನಟೈಸೇಷನ್ ಬಗ್ಗೆ ನಿರಂತರ ಪ್ರಸ್ತಾಪ ಮಾಡುವ ಮೂಲಕ ರಾಹುಲ್ ಪ್ರಧಾನಿಗೆ ಟಕ್ಕರ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English