ಡಿಸೆಂಬರ್ 23ರಿಂದ 30 ರ ವರೆಗೆ ಕುಲಶೇಖರ ಮೇಗಿನ ಮನೆ ಗದ್ದೆಯಲ್ಲಿ ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ

8:55 PM, Wednesday, December 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Shanyeswara Yagaಮಂಗಳೂರು : ಹಿಂದೂ ಯುವ ಸೇನೆ ಪದವು ಶಾಖೆ ವತಿಯಿಂದ ಕುಲಶೇಖರ ಮೇಗಿನ ಮನೆ ಬಳಿಯ ಎದುರಿನ ವಿಶಾಲವಾದ ಸ್ಥಳದಲ್ಲಿ ಡಿಸೆಂಬರ್ 23ರಿಂದ 30 ರ ವರೆಗೆ ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ  ನಡೆಯಲಿದೆ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ  ಮೋನಪ್ಪ ಭಂಡಾರಿ ಹೇಳಿದ್ದಾರೆ.

ಯಾಗ ನಡೆಯುವ ಕುಲಶೇಖರ ಮೇಗಿನ ಮನೆ ಬಳಿಯ ಚಪ್ಪರದಲ್ಲಿ ಮಾತನಾಡಿದ ಅವರು  ಪೂರ್ವಭಾವಿಯಾಗಿ ಡಿ.23ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಶನಿದೇವರ ವಿಗ್ರಹ ಮತ್ತು ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಡಲಿದೆ ಎಂದು ಹೇಳಿದರು.

ಡಿ.29 ರಂದು ಮಹಾಯಾಗದ ಪೂರ್ಣಾಹುತಿ ಬೆಳಿಗ್ಗೆ 11ಕ್ಕೆ ನಡೆಯಲಿದೆ,ಡಿ.30 ರಂದು ಸಂಜೆ 4.00ಕ್ಕೆ ಸಮಾರೋಪ ಸಮಾರಂಭ, ವಿಸರ್ಜನಾ ಪೂಜೆ , ಸಂಜೆ 6.00ಕ್ಕೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಶಿವಾಜಿ ಮಂಟಪದಿಂದ ವಿವಿಧ ವಾದ್ಯಾಘೋಷಗಳೊಂದಿಗೆ ಹೊರಟು ರಥ ಬೀದಿ ಮಹಮ್ಮಾಯಿ ಕೆರೆಯಲ್ಲಿ ವಿಗ್ರಹದ ಜಲಸ್ತಂಭನವಾಗಲಿದೆ ಎಂದು ಯಾಗ ಸಮಿತಿಯ ಗೌರವ ಅಧ್ಯಕ್ಷರಾದ ಮೋನಪ್ಪ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Shanyeswara Yagaಯಾಗದ ಪುರೋಹಿತರಾದ ಎಮ್.ಗಿರಿಧರ್ ಭಟ್ ಮಾತನಾಡಿ  ಶ್ರೀ ಸಗ್ರಹಮಖ ಶನೈಶ್ಚರ ಮಹಾಯಾಗ ಸುಮಾರು 2,500 ಚದರಡಿಯ ಯಾಗ ಕುಂಡದಲ್ಲಿನಡೆಯಲಿದೆ. 1 ಲಕ್ಷ ಎಳ್ಳಿನ ಆಹುತಿ,  ಸುಮಾರು 80 ಪುರೋಹಿತರು ಯಾಗದ ವೈದಿಕ ಕಾರ್ಯಗಳಲ್ಲಿ ತೊಡಗಲಿದ್ದಾರೆ. ಶನೀಶ್ವರನ ಮಣ್ಣಿನ ವಿಗ್ರಹವನ್ನು ನಿರ್ಮಿಸಲಾಗಿದೆ ಎಂದರು.

ಕಾರ್ಯಾಧ್ಯಕ್ಷರಾದ ಎಚ್.ಕೆ.ಪುರುಷೋತ್ತಮ್, ಸಂಚಾಲಕ ರಾಮಚಂದ್ರ ಚೌಟ ಪದವು, ವಾಸುದೇವ ಆರ್.ಕೊಟ್ಟಾರಿ , ಉಪಾಧ್ಯಕ್ಷ ಉಮೇಶ್ ರೈ ಪದವು ಮೇಗಿನ ಮನೆ,ಅಶ್ವಿತ್ ಕೊಟ್ಟಾರಿ ಉಪಸ್ಥಿತರಿದ್ದರು. ಮಾದ್ಯಮ ಸಮಿತಿ ಸಂಚಾಲಕರಾದ ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ ದನ್ಯವಾದ ಗೈದರು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English