ಗಾಯಕ ಪದ್ಮಶ್ರೀ ಹರಿಹರನ್‌ಗೆ ಆಳ್ವಾಸ್ ವಿರಾಸತ್ 2019 ಪ್ರಶಸ್ತಿ

11:39 AM, Thursday, December 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

play-back-singerಮಂಗಳೂರು: ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನೀಡುವ ಈ ಬಾರಿಯ ಆಳ್ವಾಸ್ ವಿರಾಸತ್‌ ಪ್ರಶಸ್ತಿಯನ್ನು ದೇಶದ ಖ್ಯಾತ ಗಾಯಕ ಪದ್ಮಶ್ರೀ ಹರಿಹರನ್ ಅವರಿಗೆ ನೀಡಲು‌ ನಿರ್ಧರಿಸಿದೆ.

25ನೇ ವರ್ಷದ ಆಳ್ವಾಸ್ ವಿರಾಸತ್ ಜನವರಿ 4ರಿಂದ 6 ರವರೆಗೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಹರಿಹರನ್ ಅವರಿಗೆ ಆಳ್ವಾಸ್ ವಿರಾಸತ್-2019 ನೀಡಿ ಗೌರವಿಸಲು ನಿರ್ಧರಿಸಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಡುಬಿದಿರೆಯ ಪುತ್ತಿಗೆಯಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಸ್ಕೃತಿ ಪ್ರಿಯರಿಗೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಸದೌತಣ ನೀಡಲು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಆಳ್ವಾಸ್ ವಿರಾಸತ್‌ನಲ್ಲಿ ಕಳೆದ 25 ವರ್ಷಗಳಿಂದ ಮಹೋನ್ನತ ಸಾಂಸ್ಕೃತಿಕ ಪ್ರತಿಭೆಯೊಂದನ್ನು ಗುರುತಿಸಿ ಆಳ್ವಾಸ್ ವಿರಾಸತ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರೂ.1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಈ ಬಾರಿಯ ಪ್ರಶಸ್ತಿಯನ್ನು ಪಡೆಯುತ್ತಿರುವವರು ಭಾರತೀಯ ಚಲನಚಿತ್ರ ರಂಗದಲ್ಲಿ ಹಿನ್ನಲೆ ಗಾಯಕರಾಗಿ ಪ್ರಸಿದ್ಧರಾದ ಹರಿಹರ ಅನಂತ ಸುಬ್ರಮಣಿಯನ್ ಅವರ ಹರಿಹರನ್ ಎಂದೇ ಖ್ಯಾತರು.

ಗಜಲ್, ಭಕ್ತಗೀತೆ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತಗಳಲ್ಲಿ ಅಸಾಧಾರಣ ಪ್ರತಿಭೆಯಾಗಿರುವ ಹರಿಹರನ್ ತಮಿಳು, ಹಿಂದಿ, ಮಲಯಾಳಂ, ಕನ್ನಡ, ಮರಾಠಿ, ಭೋಜ್‌ಪುರಿ ಮತ್ತು ತೆಲುಗು ಭಾಷೆಗಳ ಚಲನಚಿತ್ರರಂಗದ ಹಿನ್ನಲೆ ಗಾಯಕರಾಗಿ ಜನಮನ ಗೆದ್ದವರು. ಕೇರಳದ ತಿರುವಂತಪುರದಲ್ಲಿ ಜನಿಸಿರುವ ಹರಿಹರನ್ ಅವರು ಸಂಗೀತ ಸಂಯೋಜಕರೂ ಆಗಿದ್ದು 30 ಕ್ಕಿಂತಲೂ ಅಧಿಕ ಗಜಲ್ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. 1996ರಲ್ಲಿ ಕಲೋನಿಯಲ್ ಕಸಿನ್ಸ್’ ಎಂಬ ಆಲ್ಬಂನ್ನು ಖ್ಯಾತ ಹಾಡುಗಾರ ಹಾಗೂ ಸಂಗೀತ ನಿರ್ದೇಶಕ ಲೆಸ್ಲಿ ಲೆವಿಸ್ ಅವರೊಂದಿಗೆ ತಯಾರಿಸಿ ಫ್ಯೂಶನ್ ಸಂಗೀತದ ಸಾಧಕರಾಗಿಯೂ ಹೊರಹೊಮ್ಮಿದ್ದಾರೆ.

ಹರಿಹರನ್ ಅವರ ಸಂಗೀತ ಪ್ರತಿಭೆಗೆ 2004ರಲ್ಲಿ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರಿ ಪ್ರಶಸ್ತಿ ಸಂದಿದೆ. ಅನುಮಲಿಕ್ ಸಂಯೋಜನೆಯ ಬಾರ್ಡರ್ ಸಿನಿಮಾದ ಮೇರೆ ದುಶ್ಮನ್ ಮೇರೆ ಭಾಯಿ ಹಾಗೂ ಅಜಯ್ ಅತುಲ್ ಸಂಯೋಜನೆಯ ಮರಾಠಿ ಚಿತ್ರ ಜೋಗ್ವಾದ ಜೀವ್ ರಾಂಗ್ಳ ಹಾಡುಗಳಿಗೆ ಎರಡು ಬಾರಿ ರಾಷ್ಟ್ರೀಯ ಪುರಸ್ಕಾರ ಸಹಿತ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English