ಕುಂದಾಪುರ: ಮಹಿಳೆಯರಿಗೆ ವಾಹನ ಚಾಲನೆ ನಿಷೇಧ ತೆರವಿನ ಬಳಿಕ ಗಲ್ಫ್ ರಾಷ್ಟ್ರದಲ್ಲಿ ಕುಂದಾಪುರ ಮೂಲದ ಮಹಿಳೆಯೊಬ್ಬರು ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಗಲ್ಫ್‌ನಲ್ಲಿ ಚಾಲನಾ ಪರವಾನಗಿ ಪಡೆದ ಕರ್ನಾಟಕದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಳಿಯಂಗಡಿ ಸಮೀಪದ ಅಲ್ಬಾಡಿ ಗ್ರಾಮದ ಕೊಂಜಾಡಿ ನಿವಾಸಿ ಡಾ. ವಾಣಿಶ್ರೀ ಸಂತೋಷ್ ಶೆಟ್ಟಿ ಈ ಸಾಧನೆ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಡ್ರೈವಿಂಗ್ ಲೈಸನ್ಸ್ ಪಡೆದ ಮೊದಲ ಭಾರತೀಯ ಮಹಿಳೆ ಕೇರಳದ ಸಾರಮ್ಮ ಥಾಮಸ್ ಆಗಿದ್ದರೆ, ಕರ್ನಾಟಕದ ಮೊದಲ ಮಹಿಳೆ ಹೆಗ್ಗಳಿಕೆಗೆ ವಾಣಿಶ್ರೀ ಪಾತ್ರರಾಗಿದ್ದಾರೆ.
ಚಾಲನಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪರವಾನಗಿ ಪಡೆದುಕೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಕುಟುಂಬದೊಂದಿಗೆ ನೆಲೆಸಿರುವ ಇವರು ವೃತ್ತಿಯಲ್ಲಿ ದಂತ ವೈದ್ಯರು. ಸೌದಿ ಡ್ರೈವಿಂಗ್ ಲೈಸನ್ಸ್ ಪಡೆದ ಕರ್ನಾಟಕದ ಮೊದಲ ಮಹಿಳೆಯಾಗಿದ್ದಾರೆ. ವಾಹನ ಚಾಲನೆಯಲ್ಲಿ ಆಸಕ್ತಿ ಹೊಂದಿದ್ದ ಇವರು 2002ರಲ್ಲಿ ಭಾರತೀಯ ಡ್ರೈವಿಂಗ್ ಲೈಸನ್ಸ್ ಪಡೆದಿದ್ದರು.
Click this button or press Ctrl+G to toggle between Kannada and English