ಫೇಸ್ ಬುಕ್ ನಲ್ಲಿ ಅವಮಾನ, ಸೌದಿಯಲ್ಲಿ ಬಂಧಿತರಾಗಿರುವ ಹರೀಶ್ ಬಂಗೇರ ನಿರಪರಾಧಿ, ಬಿಡುಗಡೆ

Saturday, August 14th, 2021
Harish Bangera

ಉಡುಪಿ : ಸೌದಿ ಅರೇಬಿಯಾದ ದೊರೆ ಹಾಗೂ ಧರ್ಮದ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳನ್ನು ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಹಾಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು,  ಈ ಸಂಬಂಧ ಸೌದಿಯಲ್ಲಿ ಬಂಧಿತರಾಗಿರುವ ಕುಂದಾಪುರ ತಾಲೂಕಿನ ಹರೀಶ್ ಬಂಗೇರ ಅವರು ಆ.18ರಂದು ಬಿಡುಗಡೆಗೊಂಡು ಬೆಂಗಳೂರು ತಲುಪಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಪೂರೈಸಬೇಕಾಗಿದ್ದ  ಕೆಲಸಗಳು ಪೂರ್ಣಗೊಂಡಿದ್ದು ಆ.17ರಂದು ಸೌದಿ ಅರೇಬಿಯಾದ ದಮ್ಮಾಮ್ ವಿಮಾನ ನಿಲ್ದಾಣದಿಂದ ದೋಹಾ ಹೊರಟು ಆ.18 ರಂದು ಬೆಂಗಳೂರು […]

ಸೌದಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಡುಬಿದ್ರೆಯ ಯುವಕ ಸಾವು

Friday, October 18th, 2019
Abdul

ಪಡುಬಿದ್ರೆ : ಸೌದಿಯಲ್ಲಿ ನಡೆದ ಅಪಘಾತದಲ್ಲಿ ಪಡುಬಿದ್ರೆಯ ಯುವಕ ಮೃತಪಟ್ಟಿದ್ದಾನೆ. ಪಡುಬಿದ್ರೆಯ ಕಂಚಿನಡ್ಕ ನಿವಾಸಿ ಹಂಝ ಎಂಬವರ ಪುತ್ರ ಅಬ್ದುಲ್ ಖಾದರ್ (35) ಮೃತರು ಎಂದು ಗುರುತಿಸಲಾಗಿದೆ. ಅವರು ಸೌದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದು, ಕಾರಿನಲ್ಲಿ ಪ್ರಾಯಾಣಿಸುತ್ತಿದ್ದಾಗ ಹೈಲ್ ನ 180 ಕಿಲೋ.ಮೀ. ದೂರದಿಂದ ತಯಾರ್ ಸ್ಪೋಟಗೊಂಡು ಅಪಘಾತ ಸಂಭವಿಸಿತ್ತು. ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಸ್ಪಂದಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ಎಂದು ತಿಳಿದು ಬಂದಿದೆ. ಮೃತರ ತಂದೆ, ಪತ್ನಿ, ಪುತ್ರರು, ಸಹೋದದರು ಆಗಲಿದ್ದಾರೆ. ಮೃತದೇಹವನ್ನು ಸೌದಿಯಲ್ಲಿಯೇ […]

ಸೌದಿಯಲ್ಲಿ ಡಿ.ಎಲ್. ಪಡೆದ ಮೊದಲ ಕನ್ನಡತಿ ಕುಂದಾಪುರ ಮೂಲದ ಡಾ. ವಾಣಿಶ್ರೀ ಶೆಟ್ಟಿ

Tuesday, December 25th, 2018
vanishri-shetty

ಕುಂದಾಪುರ: ಮಹಿಳೆಯರಿಗೆ ವಾಹನ ಚಾಲನೆ ನಿಷೇಧ ತೆರವಿನ ಬಳಿಕ ಗಲ್ಫ್‌ ರಾಷ್ಟ್ರದಲ್ಲಿ ಕುಂದಾಪುರ ಮೂಲದ ಮಹಿಳೆಯೊಬ್ಬರು ಚಾಲನಾ ಪರವಾನಗಿ ಪಡೆದುಕೊಳ್ಳುವ ಮೂಲಕ ಗಲ್ಫ್‌ನಲ್ಲಿ ಚಾಲನಾ ಪರವಾನಗಿ ಪಡೆದ ಕರ್ನಾಟಕದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗೋಳಿಯಂಗಡಿ ಸಮೀಪದ ಅಲ್ಬಾಡಿ ಗ್ರಾಮದ ಕೊಂಜಾಡಿ ನಿವಾಸಿ ಡಾ. ವಾಣಿಶ್ರೀ ಸಂತೋಷ್‌ ಶೆಟ್ಟಿ ಈ ಸಾಧನೆ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಡ್ರೈವಿಂಗ್‌ ಲೈಸನ್ಸ್‌ ಪಡೆದ ಮೊದಲ ಭಾರತೀಯ ಮಹಿಳೆ ಕೇರಳದ ಸಾರಮ್ಮ ಥಾಮಸ್‌ ಆಗಿದ್ದರೆ, […]

ಢೋಂಗಿ, ಲೋಫರ್ ಹೇಳಿಕೆ ವಿವಾದ: ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಖಾದರ್

Friday, March 2nd, 2018
kader

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ‘ಢೋಂಗಿ, ಲೋಫರ್’ ಹೇಳಿಕೆಗೆ ಮುಸ್ಲಿಂ ಸಮುದಾಯದಿಂದಲೇ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಚಿವ ಖಾದರ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿ ಉದ್ಯೋಗದಲ್ಲಿರುವ ಕರಾವಳಿಗರನ್ನು ನಾನು ಢೋಂಗಿಗಳು, ಲೋಫರ್ ಗಳು ಎಂದು ಹೇಳಿದ್ದಲ್ಲ ಎಂದು ಖಾದರ್ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾನು ಲೋಫರ್ ಎಂದು ಹೇಳಿದ್ದು ಕೊಲ್ಲಿ ರಾಷ್ಟ್ರದಲ್ಲಿ ಕುಳಿತು ನಾನು ಏನು ಮಾಡಬೇಕು? ಏನು ಮಾಡಬಾರದು? […]

ಮಂಗಳೂರು ಮೂಲದ ವೀಸಾ ಏಜೆನ್ಸಿಯ ಮೋಸದಿಂದ ಸೌದಿಯಲ್ಲಿ ಸಂಕಷ್ಟಕ್ಕೀಡಾದ ಯುವಕರು

Friday, December 8th, 2017
saudi

ಮಂಗಳೂರು: ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಸೌದಿ ಅರೇಬಿಯದ ದಮಾಮ್‌ ನಗರಕ್ಕೆ ಉದ್ಯೋಗಕ್ಕೆ ತೆರಳಿದ ಅವಿಭಜಿತ ದ.ಕ.ಜಿಲ್ಲೆಯ ಮೂವರು ಯುವಕರು ಸಂಕಷ್ಟಕ್ಕೀಡಾದ ಘಟನೆ ವರದಿಯಾಗಿದೆ. ಉಡುಪಿಯ ಸಚಿನ್‌ ಕುಮಾರ್‌, ಉಪ್ಪಿನಂಗಡಿಯ ಅಬ್ದುಲ್‌ ರಶೀದ್‌ ಹಾಗೂ ಬೆಳ್ತಂಗಡಿಯ ಸಂತೋಷ್‌ ಶೆಟ್ಟಿ ಉದ್ಯೋಗ ವಂಚನೆಗೊಳಗಾದ ಯುವಕರು. 2017ರ ಮಾರ್ಚ್‌ 24ರಂದು ಮಂಗಳೂರು ಮೂಲದ ವೀಸಾ ಏಜೆನ್ಸಿಯ ಮೂಲಕ ಎಲೆಕ್ಟ್ರೀಶಿಯನ್‌ ವೀಸಾದಲ್ಲಿ ಸೌದಿಯ ದಮಾಮ್‌ಗೆ ತೆರಳಿದ್ದು, ಉತ್ತಮ ವೇತನದ ಭರವಸೆಯನ್ನೂ ನೀಡಲಾಗಿತ್ತು. ಆದರೆ ಕಂಪೆನಿ ಭರವಸೆ ನೀಡಿದ್ದ ಉದ್ಯೋಗವನ್ನಾಗಲೀ, ವಾಸ್ತವ್ಯ, ಆಹಾರ ಯಾವುದೇ […]

ಸೌದಿಯಲ್ಲಿ ಗೃಹ ಬಂಧನದಲ್ಲಿದ್ದ ಮಹಿಳೆಯ ರಕ್ಷಣೆ

Tuesday, November 21st, 2017
Vijaya

ಮಂಗಳೂರು: ಅನಾರೋಗ್ಯ ಪೀಡಿತ ಪತಿ ಮತ್ತು ಮಗನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ ಮಂಗಳೂರಿನ ವಾಮಂಜೂರಿನ ಮಹಿಳೆಯೋರ್ವರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಎಸ್‌ಡಿಪಿಐ ಸಂಘಟನೆಯು ಸೌದಿಯಲ್ಲಿರುವ ತನ್ನ ಯುವಕರ ಸಂಘಟನೆಯ ಮೂಲಕ ಈ ಮಹಿಳೆಯನ್ನು ಪತ್ತೆಹಚ್ಚಿ ರಕ್ಷಿಸುವಲ್ಲಿ ನೆರವಾಗಿದೆ. ವಾಮಂಜೂರಿನ ಕೆಲರಾಯ್‌ಕೋಡಿ 2ನೇ ಬ್ಲಾಕ್‌ನ ಬಾಲಪ್ಪ ಬಾಲಕೃಷ್ಣ (55) ಅವರ ಪತ್ನಿ ವಿಜಯಾ (43) ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಮಹಿಳೆ.ಹಲವು ತಿಂಗಳುಗಳಿಂದ ಸರಿಯಾಗಿ ಫೋನ್‌ ಸಂಪರ್ಕಕ್ಕೆ […]