ಮಂಗಳೂರು: ರಫೇಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಕಾಂಗ್ರೆಸ್ನ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯವಿದ್ದರೆ ಜಂಟಿ ಸಂಸತ್ ಸಮಿತಿ ರಚಿಸಲಿ ಎಂದು ಸಚಿವ ಯು.ಟಿ.ಖಾದರ್ ಸವಾಲು ಹಾಕಿದರು.
ಹೆಚ್ಎಎಲ್ನೊಂದಿಗೆ ಆದ ಒಪ್ಪಂದವನ್ನು ಮುರಿದು ವಿದೇಶಿ ಕಂಪನಿಯೊಂದಿಗೆ ರಫೇಲ್ ಒಪ್ಪಂದಕ್ಕೆ ಸಹಿ ಹಾಕಿದ್ದು ಯಾಕೆ ಎಂದು ಇಂದು ದೇಶದ ಜನತೆ ಕೇಳುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಲಿ ಎಂದು ಗುಡುಗಿದರು.
ಒಂದು ಪ್ಲಾಸ್ಟಿಕ್ ವಿಮಾನವನ್ನು ತಯಾರಿಸದ ಅಂಬಾನಿಯ ಸಂಸ್ಥೆಗೆ ಯಾಕೆ ಇದನ್ನು ಕೊಡಬೇಕಿತ್ತು. ಐನೂರು ಕೋಟಿ ರೂ.ವರೆಗೆ ಇದ್ದ ಒಪ್ಪಂದ ಸಾವಿರ ಕೋಟಿಗೆ ಏರಿದ್ದು ಹೇಗೆ. ಇದಕ್ಕೆ ಉತ್ತರ ಸಿಗಬೇಕಾದರೆ ಜಂಟಿ ಸಂಸತ್ ಸಭೆ ರಚಿಸಬೇಕು. ಸುಪ್ರೀಂ ಕೋರ್ಟ್ ಯಾವ ಆಧಾರ ಕೊಡುತ್ತೇವೆ ಅದರ ಮೇಲೆ ತೀರ್ಪು ನೀಡುತ್ತದೆ. ರಫೇಲ್ ಒಪ್ಪಂದದಲ್ಲಿ ಯಾವುದೇ ಹಗರಣ ಆಗದಿದ್ದರೆ ಪ್ರಧಾನಿ ಕಚೇರಿಯಿಂದ ಯಾಕೆ ರಾತ್ರಿ ಹನ್ನೆರಡು ಗಂಟೆಗೆ ಸಿಬಿಐ ಕಚೇರಿಗೆ ಫ್ಯಾಕ್ಸ್ ಸಂದೇಶ ರವಾನಿಸಿ, ಸಿಬಿಐ ಅಧಿಕಾರಿಗಳಿಗೆ ಅನಿರ್ದಿಷ್ಟಾವಧಿ ರಜೆ ನೀಡಿ ಕಳುಹಿಸಿದ್ದು ಎಂದು ಪ್ರಶ್ನಿಸಿದರು.
ಬೆಳಗಾವಿ ಅಧಿವೇಶನ ಅತ್ಯಂತ ಯಶಸ್ವಿಯಾಗಿದ್ದು, ಆದರೆ ಅದನ್ನು ಕೆಡಿಸಬೇಕು ಎಂದು ಪ್ರತಿಪಕ್ಷಗಳು ಕ್ಷುಲ್ಲಕ ವಿಷಯಕ್ಕೆ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಜನರಿಗೆ ಇದರ ಬಗ್ಗೆ ತಿಳಿದಿದೆ. ಸರಿಯಾದ ಉತ್ತರವನ್ನು ಕೊಡುತ್ತಾರೆ. ಕಾರ್ಯಕ್ರಮದ ಮೊದಲಿಗೆ ಸಭೆಯನ್ನು ಕೆಡಿಸಬೇಕೆಂಬ ಉದ್ದೇಶದಿಂದ ವಕ್ಫ್ಗೆ ಸಂಬಂಧಪಟ್ಟ ವಿಷಯವನ್ನು ಹಿಡಿದು ಮಾತನಾಡಿದರು. ಅದರ ವರದಿ ಕೋರ್ಟ್ನಲ್ಲಿ ಇದೆ. ಕೋರ್ಟ್ನ ತೀರ್ಮಾನದಂತೆ ಅದು ನಡೆಯುತ್ತದೆ. ಅದು ಗೊತ್ತಿದ್ದೂ ಅದರ ಬಗ್ಗೆ ಮಾತನಾಡುವುದು ಸಭೆಯನ್ನು ಕೆಡಿಸಬೇಕೆಂಬ ದುರುದ್ದೇಶದಿಂದಲೇ ಎಂದು ದೂರಿದರು.
Click this button or press Ctrl+G to toggle between Kannada and English