ಕೈಕೊಟ್ಟ ಕರೆಂಟ್, ಜನರೇಟರ್​: ಬೈಕ್ ಹೆಡ್‌ಲೈಟ್ ಬೆಳಕಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರು!

10:36 AM, Wednesday, December 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

karavaliಮಂಗಳೂರು: ಜನರೇಟರ್ ಕೈಕೊಟ್ಟ ಪರಿಣಾಮ ಕರಾವಳಿ ಉತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾವಿದರು ಬೈಕ್ ಹೆಡ್‌ಲೈಟ್ ಹಾಗೂ ಮೊಬೈಲ್ ಬೆಳಕಿನ ನೆರವಿನಲ್ಲೇ ಪ್ರದರ್ಶನ ನೀಡಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮೈಮ್ ರಾಮ್‌ದಾಸ್ ಮತ್ತು ತಂಡದವರಿಂದ ಜಾನಪದ ಹಾಡುಗಳ ಗಾಯನವು ಸಂಜೆ 6 ಗಂಟೆಗೆ ನಿಗದಿಯಾಗಿತ್ತು. ಆದರೆ ಸಮಯ 6:25 ಆಗಿದ್ದರೂ ವಿದ್ಯುತ್ ವ್ಯವಸ್ಥೆ ಆಗಿರಲಿಲ್ಲ. ಜನರೇಟರ್‌ನ ಡೀಸೆಲ್ ಖಾಲಿಯಾಗಿದ್ದು, ಡೀಸೆಲ್ ಹಾಕುವ ಹೊಣೆ ಯಾರದ್ದು ಎಂಬ ಗೊಂದಲ ಇತ್ಯರ್ಥವಾಗದೆ ಜನರೇಟರ್ ಕೂಡಾ ಚಾಲು ಆಗಿರಲಿಲ್ಲ.

ಪ್ರೇಕ್ಷಕರ ಅಪೇಕ್ಷೆಯ ಮೇರೆಗೆ ಮೈಮ್ ರಾಮ್‌ದಾಸ್ ತಂಡದವರು ಬೆಳಕಿಲ್ಲದೆ, ಮೈಕಿಲ್ಲದೆ ಗಾಯನ ಆರಂಭಿಸಿದರು. ಪ್ರೇಕ್ಷಕರು ಕುರ್ಚಿಗಳನ್ನು ವೇದಿಕೆಯ ಹತ್ತಿರ ಎಳೆದುಕೊಂಡರು. ಈ ವೇಳೆ ತಂಡದ ಸದಸ್ಯರೊಬ್ಬರು ತಮ್ಮ ಬೈಕ್ ಸ್ಟಾರ್ಟ್ ಮಾಡಿ, ಹೆಡ್‌ಲೈಟ್ ಬೆಳಕನ್ನು ವೇದಿಕೆ ಮೇಲೆ ಬೀರಿದರು. ಆಗ ನೆರೆದಿದ್ದ ಪ್ರೇಕ್ಷಕರು ಕುಡಾ ತಮ್ಮ ಮೊಬೈಲ್ ಬೆಳಕು ಬೀರಿ ಸಹಕರಿಸಿದರು.

ಸುಮಾರು 6:50ರವರೆಗೆ ಆರೇಳು ಹಾಡು ಹಾಡುವವರೆಗೂ ವಿದ್ಯುತ್ ಬರಲೇ ಇಲ್ಲ. ಅರ್ಧ ಗಂಟೆ ಕಳೆದ ಮೇಲೆ ಜನರೇಟರ್‌ಗೆ ಜೀವ ಬಂದಿತ್ತು. ಬೆಳಕಿನ ವ್ಯವಸ್ಥೆ ಮರಳಿ ಬಂದಿತ್ತು. ಆದರೆ ಪ್ರೇಕ್ಷಕರು, ಕಲಾವಿದರು ಬೇಸರಗೊಂಡಿದ್ದರು. ಕೊನೆಗೆ 7:30ರವರೆಗೆ ಪ್ರದರ್ಶನ ನೀಡಿ ವಿರಮಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English