ಸಿಬಿಐ ಪೊಲೀಸರೆಂದು ನಂಬಿಸಿ ಚಿನ್ನಾಭರಣ ಎಗರಿಸಿದ ಚಾಣಾಕ್ಷ ಖದೀಮರು..!

11:24 AM, Wednesday, December 26th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangloreಮಂಗಳೂರು: ಸಿಬಿಐ ಪೊಲೀಸರೆಂದು ನಂಬಿಸಿ ಚಿನ್ನ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡುವ ಖದೀಮರ ಗ್ಯಾಂಗ್ ಕಾರ್‌ಸ್ಟ್ರೀಟ್ ಸಮೀಪ ವ್ಯಕ್ತಿಯೊಬ್ಬರನ್ನು ಲೂಟಿ ಮಾಡಿ ಪರಾರಿಯಾದ ಘಟನೆ ನಿನ್ನೆ ನಡೆದಿದೆ.

ಈ ಕುರಿತು ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ. ಅಳಕೆ ಸಿಂಡಿಕೇಟ್ ಬ್ಯಾಂಕ್ ಬಳಿಯ ನಿವಾಸಿ ಭಗವಾನ್ (70) ಚಿನ್ನಾಭರಣ ದರೋಡೆಗೊಳಗಾದವರು. ಅವರು ನಿನ್ನೆ ಬೆಳಗ್ಗೆ 11:45ರ ವೇಳೆ ನಗರದ ಕಾರ್‌ಸ್ಟ್ರೀಟ್ ಬಿಇಎಂ ಸ್ಕೂಲ್‌ನ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕ್‌ನಲ್ಲಿ ಬಂದ ಇಬ್ಬರು ಹಿಂದಿಯಲ್ಲಿ ಮಾತನಾಡುತ್ತಾ ನಾವು ಸಿಬಿಐ ಪೊಲೀಸರು, ನಗರದಲ್ಲಿ ಚಿನ್ನಾಭರಣ ದರೋಡೆ ಮಾಡುವ ತಂಡವಿದೆ. ನೀವು ನಿಮ್ಮ ಚಿನ್ನಾಭರಣವನ್ನು ಜೋಪಾನವಾಗಿ ಕಿಸೆಯಲ್ಲಿ ಕಟ್ಟಿಡಿ ಎಂದು ಹೇಳಿದ್ದಾರೆ

ಆದರೆ ಭಗವಾನ್‌ರವರು ಏನು ಮಾತನಾಡದೆ ಮುಂದೆ ಹೋದಾಗ, ಹಠ ಬಿಡದ ಆ ಇಬ್ಬರು ಮತ್ತೆ ಅಡ್ಡಗಟ್ಟಿ ಅದೇ ರೀತಿ ಹೇಳುತ್ತಾರೆ. ಅವರ ಮಾತನ್ನು ನಂಬಿದ ಭಗವಾನ್ ಅವರು ಕೂಡಲೇ ಕನ್ನಡಕ, ಮೊಬೈಲ್, ವಾಚ್, ನಗದು, ಉಂಗುರ, ಚಿನ್ನದ ಸರವನ್ನು ಟವಲ್‌ನಲ್ಲಿ ಕಟ್ಟುತ್ತಾರೆ. ಈ ಸಂದರ್ಭ ಆ ಇಬ್ಬರು ನಾವು ಕಟ್ಟಿಕೊಡುತ್ತೇವೆ ಎಂದು ಹೇಳಿ ತೆಗೆದುಕೊಂಡು ಸ್ವಲ್ಪ ಹೊತ್ತಿನಲ್ಲೇ ಆ ಟವಲ್‌ನ್ನು ಮರಳಿ ನೀಡುತ್ತಾರೆ.

ಇದಾದ ನಂತರ ಇಬ್ಬರು ಕೂಡಾ ತಾವು ಬಂದ ಬೈಕ್‌ನಲ್ಲಿ ಪರಾರಿಯಾಗುತ್ತಾರೆ. ಭಗವಾನ್ ಅವರಿಗೆ ಸ್ವಲ್ಪ ಸಮಯದ ಬಳಿಕ ಸಂಶಯ ಬಂದು ಟವಲ್ ಕಟ್ಟು ಬಿಡಿಸಿ ನೋಡಿದಾಗ ಚಿನ್ನದ ಉಂಗುರ ಮತ್ತು ಸರ ಕಳವಾಗಿತ್ತು. ಉಳಿದ ವಸ್ತುಗಳು ಹಾಗೆ ಉಳಿದಿದ್ದವು.

ಈ ಘಟನೆಯ ಕುರಿತು ಬಂದರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಇನ್ನು ಈ ತಂಡ ಉಡುಪಿಯಿಂದ ಮಂಗಳೂರಿಗೆ ಬಂದಿರುವ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಪೊಲೀಸರು ಅಲರ್ಟ್ ಆಗಿದ್ದರು ಕೂಡ ಈ ಘಟನೆ ನಡೆದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English