ಮಂಗಳೂರು : ಮುಸ್ಲಿಮ್ ಸೇಂಟ್ರಲ್ ಕಮಿಟಿ ದ.ಕ ಮತ್ತು ಉಡುಪಿ ಇದರ 50 ನೇ ವಾರ್ಷಿಕೋತ್ಸವದ ಅಂಗವಾಗಿ , ಸ್ವರ್ಣ ಮಹೋತ್ಸವ ಸಮಾರಂಭವನ್ನು, ಕಮಿಟಿಯು ತಾರೀಕು 29 ನೇ ಡಿಸೆಂಬರ್ 2018 ರಂದು ಮಂಗಳೂರಿನ ಪುರಭವನದಲ್ಲಿ ಜರುಗಿಸುತ್ತಿದ್ದು, ಸದ್ರಿ ಸಮಾರಂಭಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.
1968 ರಲ್ಲಿ ಸ್ಥಾಪಿತವಾದ ಈ ಸಂಘಟನೆಯು ಉಭಯ ಜಿಲ್ಲೆಗಳಲ್ಲಿ ಮತೀಯ ಸೌಹಾರ್ದತೆ ಪಾಲನೆಗೆ ಮಹತ್ವ ನೀಡಿ ಹೇಚ್ಚಿನ ಸಂದರ್ಭಗಳಲ್ಲಿ ತನ್ನದೇ ಕಾರ್ಯಶೈಲಿಯಲ್ಲಿ ಈ ಜಿಲ್ಲೇಯ ಸೌಹಾರ್ದತೆ ಸೇವೆ ಸಲ್ಲಿಸಿದೆ. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಪಾಲನೆಗಾಗಿ ಸಂಸ್ಥೆಯು ಈ ಹಿಂದಿನ ಸರಕಾರಗಳು, ಪೊಲೀಸು ಇಲಾಖೆ , ಜಿಲ್ಲಾಡಳಿತ ಮತ್ತು ಸಾರ್ವಜನಿಕರೊಂದಿಗೆ ನಿರಂತರ ಸಂವಹನ ಇಟ್ಟುಕೊಂಡು ಆ ನಿಟ್ಟಿನಲ್ಲಿ ಕಾರ್ಯವೆಸಗೂವುದರೊಂದಿಗೆ ವಿವಿಧ ತುರ್ತುಸಂದರ್ಭಗಳಲ್ಲಿ ಅಗತ್ಯ ವಸ್ತು ಮತ್ತು ಸೇವೇಗಳ ಳನ್ನು ಸಲ್ಲಿಸಿದೇ, ಸಂಸ್ಥೆಯ ಈ ಸಮಾರಂಭವನ್ನು ಯಶಸ್ವಿಗೊಳಿಸಲು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ .ಅಶ್ರಫ್ ಕರೆ ನೀಡಿದ್ದಾರೆ .
Click this button or press Ctrl+G to toggle between Kannada and English
December 28th, 2018 at 16:02:15
ಚುನಾವಣೆ ಹತ್ತಿರ ಬರುವಾಗ
ಮುಸ್ಲಿಂ ಸಮುದಾಯವನ್ನು
ನಿಂದಿಸಿ,
ಪ್ರವಾದಿ(ಸ.ಅ)ರನ್ನು ನಿಂದಿಸಿ,ಶಾಂತಿ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಹಾಗೂ ಧರ್ಮ ಧರ್ಮಗಳ ಮಧ್ಯೆ ವಿಷ ಬೀಜವನ್ನು ಬಿತ್ತುತ್ತಿರುವ
ರಾಜಕೀಯ ಕೊನೆಯಾಗಬೇಕು.