ವಿದ್ಯಾರ್ಥಿಗಳಿಗೆ ಜಪಾನ್ ಸರ್ಕಾರ, ವಿಶ್ವವಿದ್ಯಾನಿಲಯದಿಂದ ಪೂರ್ಣ ವಿದ್ಯಾರ್ಥಿವೇತನ

12:15 AM, Tuesday, January 22nd, 2019
Share
1 Star2 Stars3 Stars4 Stars5 Stars
(No Ratings Yet)
Loading...

Japan AITEಮೂಡುಬಿದಿರೆ: ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಜಪಾನ್ ವಿಶ್ವ ವಿದ್ಯಾನಿಲಯದ ಪ್ರತಿನಿಧಿಗಳಾದ ಹೀರೋಷಿಯೋಶಿನೊ ಮತ್ತುಪ್ರಿಯಾಂಕ ಪರಾಶ ಜಪಾನ್ ಉನ್ನತ ಶಿಕ್ಷಣ ಕುರಿತು ಮಾಹಿತಿ ನೀಡಲು ಆಗಮಿಸಿದ್ದರು. ಭಾರತ ಸರ್ಕಾರ ಹಾಗೂ ಜಪಾನ್ ಸರ್ಕಾರದ ನಡುವಿನ ಶೈಕ್ಷಣಿಕ ಒಪ್ಪಂದ, ವಿದ್ಯಾರ್ಥಿವೇತನದ ಕುರಿತು ಮಾಹಿತಿ ನೀಡಿ, ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.

ಎರಡೂ ಸರ್ಕಾರಗಳ ಒಪ್ಪಂದದಂತೆ ಭಾರತೀಯ ಆಯ್ದ ವಿದ್ಯಾರ್ಥಿಗಳನ್ನು ಜಪಾನ್‍ನಲ್ಲಿ ಉನ್ನತ ಶಿಕ್ಷಣಕ್ಕೆ ಆಹ್ವಾನಿಸುವುದು ಸಂವಾದದ ಮುಖ್ಯ ಉದ್ದೇಶ. ಟೋಕಿಯೋ ಸಹಿತ ಜಪಾನ್‍ನ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ಸಿಗಬಹುದಾದ ಅವಕಾಶಗಳು ಮತ್ತು ಬೋಧಕವರ್ಗ ಹಾಗೂ ದಾಖಲಾತಿ ಪ್ರಕ್ರಿಯೆ, ಅರ್ಹ ವಿದ್ಯಾರ್ಥಿಗಳಿಗೆ ಜಪಾನ್‍ನ ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳು ನೀಡುವ ಪೂರ್ಣ ವಿದ್ಯಾರ್ಥಿವೇತನದ ಕುರಿತು ಜಪಾನ್ ಪ್ರತಿನಿಧಿಗಳು ಮಾಹಿತಿ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಯೋಜನೆಯ ನಿರ್ದೇಶಕರಾದ ಶಿಗೆಕಿಆಶಿಡ ಮತ್ತು ಸಹಾಯಕ ನಿರ್ವಹಣಾಧಿಕಾರಿ ಸಾಕ್ಸಿವರ್ಮಾ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English