ಕಾರಿನಲ್ಲಿ ದಂಪತಿಗಳ ಜೊತೆ ಮುಸ್ಲಿಂ ಯುವತಿ ಇರುವುದನ್ನು ಪ್ರಶ್ನಿಸಿ ಹಲ್ಲೆ

2:37 PM, Wednesday, January 30th, 2019
Share
1 Star2 Stars3 Stars4 Stars5 Stars
(No Ratings Yet)
Loading...

Tausiraಮಂಗಳೂರು : ದಂಪತಿಗಳ ಜೊತೆ ಮುಸ್ಲಿಂ ಯುವತಿ ಕಾರಿನಲ್ಲಿರುವುದನ್ನು ಗಮನಿಸಿದ ಕೆಲ ಯುವಕರು ವ್ಯಕ್ತಿಗೆ ಹಲ್ಲೆ ಮಾಡಿ ಗೂಂಡಾಗಿರಿ‌ ಮೆರೆದಿರುವ ಘಟನೆ ಮಂಗಳೂರಿನ ಮುಡಿಪುವಿನಲ್ಲಿ ನಿನ್ನೆ ನಡೆದಿದೆ.

ಥೋಮಸ್ ಡಿಸೋಜ ಎಂಬವರು ಯುವಕರಿಂದ ಹಲ್ಲೆಗೊಳಗಾದವರು. ಥೋಮಸ್ ಡಿಸೋಜ, ಪತ್ನಿ ಮಲ್ಲಿಕಾ ಡಿಸೋಜ ಹಾಗೂ ನೆರೆಮನೆಯ ಕುಮಾರಿ ತೌಸೀರ ಜೊತೆ ಮುಡಿಪುವಿನಿಂದ ಮಲ್ಲಿಕಾ ಡಿಸೋಜ ಅವರ ತಾಯಿ ಮನೆಯಾದ ಸುರತ್ಕಲ್ನ ತಡಂಬೈಲ್ಗೆ ಹೋಗಿ ವಾಪಸ್ ಕಾರಿನಲ್ಲಿ ಬರುವಾಗ ಈ ಘಟನೆ ನಡೆದಿದೆ.

ಕನಚೂರು ಆಸ್ಪತ್ರೆ ಬಳಿ ಅವರ ಕಾರನ್ನು ಸ್ಕೂಟರ್ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಅವರ ಜೊತೆಯಲ್ಲಿ ಇದ್ದ ಕೆಲವು ವ್ಯಕ್ತಿಗಳು ಅಡ್ಡಗಟ್ಟಿ ರಸ್ತೆಯ ಬದಿಗೆ ಬರುವಂತೆ ತಿಳಿಸಿದ್ದಾರೆ. ಅವರ ಪೈಕಿ ಸ್ಕೂಟರ್ನಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿಯಾಗಿ ಚಾಲಕ ಥಾಮಸ್ ಡಿಸೋಜಾರವರಿಗೆ ತಲೆ, ಮುಖಕ್ಕೆ ಕೈಯಿಂದ ಹೊಡೆದಿದ್ದಾರೆ. ಕಾರಿನ 2 ಗಾಜುಗಳನ್ನು ಪುಡಿ ಮಾಡಲಾಗಿದ್ದು, ಸುಮಾರು 20 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಕೋಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English