ಮಂಗಳೂರು : ಪುಲ್ವಾಮದಲ್ಲಿ ನಮ್ಮ ದೇಶದ ವೀರ ಯೋಧರ ಮೇಲೆ ನಡೆದ ಅಮಾನುಷ ದಾಳಿ ಮತ್ತು ಹತ್ಯಾಕಾಂಡವನ್ನು ತುಳುನಾಡ ರಕ್ಷಣಾ ವೇದಿಕೆ( ರಿ) ತೀವ್ರವಾಗಿ ಖಂಡಿಸುತ್ತದೆ. ನಮ್ಮ ದೇಶವನ್ನು ಕಾಯುವ ಸೈನಿಕರು ಯಾವುದೇ ಕಷ್ಟ ನಷ್ಟವನ್ನು ಲೆಕ್ಕಿಸದೇ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡುತ್ತಿರುವುದರಿಂದ ನಾವೆಲ್ಲ ಇಂದು ಸುಖ ಸಮೃದ್ಧಿಯಿಂದ ಬದುಕನ್ನು ಸಾಗಿಸುತ್ತಿದ್ದೇವೆ.ನಮ್ಮ ದೆಶದ ಅಸ್ಥಿತ್ವಕ್ಕೆ ಕಂಟಕಪ್ರಾಯವಾಗಿರುವ ಉಗ್ರವಾದಿಗಳಿಗೆ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನವು ಸಕಲ ನೆರವನ್ನು ನೀಡುತ್ತಿರುವುದು ಕಟುಸತ್ಯ ಸಂಗತಿಯಾಗಿದೆ.ಇಂತಹ ನರಭಕ್ಷಕ ಉಗ್ರಗಾಮಿಗಳಿಂದ ನಮ್ಮ ಹೆಮ್ಮೆಯ ಸೈನಿಕರು ಹತರಾಗಿರುವುದು ಖಂಡನೀಯ. ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿಯನ್ನು ಸಮರ್ಪಿಸುತ್ತಿದ್ದೇವೆ. ಹಾಗೆಯೇ ಅವರ ಕುಟುಂಬಿಕರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಇಡೀ ದೇಶವೇ ವೀರ ಯೋಧರ ಸಾಮೂಹಿಕ ಹತ್ಯಾಕಾಂಡದ ಶೋಕ ಸಾಗರದಲ್ಲಿರುವಾಗ ನಾವೂ ಸಹ ಭಾಗಿದಾರರಾಗುವುದು ನಮ್ಮ ಕರ್ತವ್ಯವೆಂಬುದನ್ನು ಮನಗಂಡಿದ್ದೇವೆ. ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿರುವ ನಮ್ಮ ನಾಡಿನ ಹೆಮ್ಮೆಯ ಸಂಘಟನೆಯಾದ ತುಳುನಾಡ ರಕ್ಷಣಾ ವೇದಿಕೆ(ರಿ) ಇದರ ದಶಮಾನೋತ್ಸವದ ಪ್ರಯುಕ್ತ ದಿನಾಂಕ ಫೆಬ್ರವರಿ 23 ಮತ್ತು 24 ನೇ ಶನಿವಾರ ಮತ್ತು ಭಾನುವಾರದಂದು ಹಮ್ಮಿಕೊಂಡಿರುವ ವಿಶ್ವ ತುಳುವರ ಸಮ್ಮಿಲನ ತೌಳವ ಉಚ್ಛಯ ಕಾರ್ಯಕ್ರಮವನ್ನು ಮಾರ್ಚ್ ತಿಂಗಳ ದಿನಾಂಕ 29.30.31. ರ ಶುಕ್ರವಾರ. ಶನಿವಾರ ಮತ್ತು ಭಾನುವಾರ ನಗರದ ಪುರಭವನದಲ್ಲಿ ನಡೆಸುವುದು ಎಂದು ತೀರ್ಮಾನಿಸಲಾಗಿದೆ. ಈ ಬದಲಾವಣೆಗೆ ಸರ್ವರ ಸಹಕಾರವನ್ನು ನಿರೀಕ್ಷಿಸಲಾಗಿದೆ.
Click this button or press Ctrl+G to toggle between Kannada and English