ಶ್ರೀ ಕ್ಷೇತ್ರಕದ್ರಿಯಲ್ಲಿ ಬ್ರಹ್ಮಕಲಶೋತ್ಸವಕ್ಕೆ ಗೊನೆಮೂಹೂರ್ತ

12:25 PM, Wednesday, April 24th, 2019
Share
1 Star2 Stars3 Stars4 Stars5 Stars
(No Ratings Yet)
Loading...

Kadri-Gone-muhurthaಮಂಗಳೂರು  : ಶ್ರೀ ಕ್ಷೇತ್ರ ಕದ್ರಿಯಲ್ಲಿ ಜರಗಲಿರುವ ಬ್ರಹ್ಮಕಲಶ, ಮಹಾರುದ್ರಯಾಗ ಹಾಗೂ ಮಹಾದಂಡ ರುದ್ರಾಭಿಷೇಕದಿಂದ ಸರ್ವರಿಗೂ ಒಳಿತಾಗುವ ಮೂಲಕ ಲೋಕ ಕಲ್ಯಾಣವಾಗಲಿ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ವೇದವ್ಯಾಸಕಾಮತ್ ನುಡಿದರು.

ಶ್ರೀ ಕ್ಷೇತ್ರಕದ್ರಿಯಲ್ಲಿ ಬ್ರಹ್ಮಕಲಶೋತ್ಸವ ಗೊನೆಮೂಹೂರ್ತ, ಚಪ್ಪರ ಮುಹೂರ್ತ ಹಾಗೂ ಮಹಾದಂಡ ಮುಹೂರ್ತ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ಕ್ಷೇತ್ರದ ತಂತ್ರಿಗಳಾದ ವಿಠಲದಾಸ ತಂತ್ರಿಗಳು ದೀಪ ಪ್ರಜ್ವಲನಗೊಳಿಸಿ ಮಾತನಾಡಿ ವೈಜ್ಞಾನಿಕ ಪ್ರಕ್ರಿಯೆಗಳಿಗೆ ಅನುಗುಣವಾಗಿ ಬ್ರಹ್ಮಕಲಶೋತ್ಸವದಎಲ್ಲಾ ವಿಧಿ ವಿಧಾನಗಳು ನೆರವೇರಲಿವೆ ಎಂದರು.

ಗಣ್ಯರಾದ ಅಜಿತ್‌ಕುಮಾರ್ ರೈ ಮಾಲಾಡಿ ಮಾತನಾಡುತ್ತಾ ನಮ್ಮೆಲ್ಲರಕಾಲಾವಧಿಯಲ್ಲಿ ನೆರವೇರುವ ಈ ಐತಿಹಾಸಿಕ ಸಮಾರಂಭದಲ್ಲಿಎಲ್ಲರೂ ಸಹಭಾಗಿಗಳಾಗಿ ಕೃತಾರ್ಥರಾಗೋಣ ಎಂದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಹರಿನಾಥಜೋಗಿ ಸಮಾರಂಭದ ಯಶಸ್ಸಿಗೆ ಸರ್ವರ ಸಹಕಾರವನ್ನು ಯಾಚಿಸಿದರು.

ಹೊರೆಕಾಣಿಕೆ ಸಮಿತಿಯ ಅಧ್ಯಕ್ಷ ಗಣೇಶ ಶೆಟ್ಟಿ, ಸ್ವಾಗತ ಸಮಿತಿಯ ಅಧ್ಯಕ್ಷ ಸುಂದರ ಶೆಟ್ಟಿ, ಉದ್ಯಮಿ ರತ್ನಾಕರ ಜೈನ್, ಅಶೋಕ್‌ಡಿ.ಕೆ., ಕಿರಣ್‌ಜೋಗಿ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರು , ಜೀರ್ಣೋದ್ಧಾರ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ದೇವಳದ ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿಜರಗಲಿರುವ ಬ್ರಹ್ಮಕಲಶೋತ್ಸವ ಮಹಾರುದ್ರಯಾಗ, ಮಹಾದಂಡರುದ್ರಾಭಿಷೇಕವು ಐತಿಹಾಸಿಕ ವೈಶಿಷ್ಟತೆಯಿಂದ ಕೂಡಿರುವುದೆಂದು ಪ್ರಚಾರ ಸಮಿತಿಯ ಸಂಚಾಲಕರಾದ ಎಸ್. ಪ್ರದೀಪಕುಮಾರ ಕಲ್ಕೂರ ಹೇಳಿದರಲ್ಲದೆ ಸರ್ವರನ್ನೂ ಸ್ವಾಗತಿಸುತ್ತಾ ಪೂರ್ವ ಸಿದ್ಧತೆಗಳ ಕುರಿತು ವಿವರಣೆ ನೀಡಿದರು. ಸುಧಾಕರರಾವ್ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English