ಕನ್ನಡ ಸಾಹಿತ್ಯ ಪರಿಷತ್- ಸಂಸ್ಮರಣಾ ದಿನಾಚರಣೆ

11:06 AM, Sunday, May 5th, 2019
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು  : sahitya parishathಕನ್ನಡ ಸಾಹಿತ್ಯ ಪರಿಷತ್ತು- ಸಂಸ್ಮರಣಾ ದಿನಾಚರಣೆಯನ್ನುಇತ್ತೀಚೆಗೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಆಚರಿಸಲಾಯ್ತು. ನಗರದ ಬಿಎಡ್. ಕಾಲೇಜು ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯಕ್ಷಗಾನ ಪ್ರಸಂಗಕರ್ತಅರ್ಥದಾರಿ ಪೊಳಲಿ ನಿತ್ಯಾನಂದಕಾರಂತ ಪಾಲ್ಗೊಂಡಿದ್ದರು, ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕುಘಟಕಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ,ಜನಾರ್ದನ ಹಂದೆ, ಶ್ರೀಮತಿ ಶಾರದಮ್ಮ ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಅನನ್ಯ ಸಾಹಿತ್ಯದ ಮೂಲಕ ಪ್ರಸಿದ್ಧರಾದ ನೂರಾರು ಮಂದಿ ಮಹಾನ್ ಕವಿಗಳ ಗ್ರಂಥಗಳು, ಕವಿತೆಗಳು ಸಾರ್ವಕಾಲಿಕವಾಗಿ ನೆಲೆನಿಂತುಯುವ ಸಾಹಿತಿ ಗಳಿಗೆ, ಬರಹಗಾರರಿಗೆ ಸ್ಪೂರ್ತಿದಾಯಕವಾಗಿದೆ. ಕನ್ನಡ ಸಾಹಿತಿಗಳು, ಬರಹಗಾರರು, ಕವಿಗಳ ಪ್ರಾತಿನಿಧಿಕ ಸಂಸ್ಥೆಯಾದಕನ್ನಡ ಸಾಹಿತ್ಯ ಪರಿಷತ್ತುಕನ್ನಡಭಾಷಾ ಬೆಳವಣಿಗೆಯಲ್ಲಿ ನೀಡುತ್ತಿರುವ ಕೊಡುಗೆ ಅನನ್ಯವಾಗಿದೆ ಎಂದುಅಧ್ಯಕ್ಷ ಸ್ಥಾನದಿಂದ ಎಸ್. ಪ್ರದೀಪಕುಮಾರಕಲ್ಕೂರ ನುಡಿದರು.

ಶ್ರೀಮತಿ ವಿಜಯಲಕ್ಷ್ಮೀ ಭಟ್ ಸ್ವಾಗತಿಸಿದರು. ದೇವಕಿಅಚ್ಯುತ ವಂದನಾರ್ಪಣೆಗೈದರು. ಉಪನ್ಯಾಸಕಿ ಶ್ರೀಮತಿ ಫ್ಲೇವಿ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English