ಕದ್ರಿ ಶ್ರೀ ಮಂಜುನಾಥ ದೇವರಿಗೆ ಸಂಭ್ರಮದ ಬ್ರಹ್ಮಕಲಶಾಭಿಷೇಕ

7:34 PM, Saturday, May 11th, 2019
Share
1 Star2 Stars3 Stars4 Stars5 Stars
(No Ratings Yet)
Loading...

Kadri Manjunathaಮಹಾನಗರ: ಕದ್ರಿ ಮಠಾಧೀಶ ಶ್ರೀ ರಾಜಾ ನಿರ್ಮಲ ನಾಥ್‌ ಜೀ ಅವರ ಉಪಸ್ಥಿತಿ ಯಲ್ಲಿ ದೇರೆ ಬೈಲ್‌ ಬ್ರಹ್ಮಶ್ರೀ ವಿಟಲದಾಸ್‌ ತಂತ್ರಿಯವರ ನೇತೃತ್ವದಲ್ಲಿ ಕದ್ರಿ ಶ್ರೀ ಮಂಜುನಾಥ ದೇವರಿಗೆ  ಬೆಳಗ್ಗೆ 7 ಗಂಟೆಯಿಂದಲೇ ಕಲಶಾಭಿಷೇಕ ಪ್ರಾರಂಭವಾಗಿ, 9.35ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಗುರುವಾರ ನಡೆಯಿತು.

ಬಳಿಕ ಪ್ರಾಚೀನ ಮೂರ್ತಿಗಳಿಗೆ ವಿಶೇಷ ಕಲಶಾಭಿಷೇಕ, ಅವಸ್ರುತ ಬಲಿ ಜರಗಿ ಶ್ರೀ ದೇವರಿಗೆ ಮಹಾ ಪೂಜೆ ನಡೆ ಯಿತು. ಸಹಸ್ರಾರು ಭಕ್ತರು ಬ್ರಹ್ಮಕಲ ಶಾಭಿಷೇಕವನ್ನು ಕಣ್ತುಂಬಿಕೊಂಡು ಶ್ರೀ ದೇವರ ದರ್ಶನ ಪಡೆದರು. ಮಧ್ಯಾಹ್ನ 2ರಿಂದ ರಥಾರೋಹಣ, ರಾತ್ರಿ 7ರಿಂದ ಮನ್ಮಹಾರಥೋತ್ಸವ, ಮಹಾ ದಂಡ ಜೋಡಣೆ, ವಿವಿಧ ಹೋಮಗಳು, ಉತ್ಸವ ಬಲಿ, ಭೂತಬಲಿ ನೆರವೇರಿತು.

ಬ್ರಹ್ಮಕಲಶಾಭಿಷೇಕದ ವೇಳೆ ಕದ್ರಿ ಶ್ರೀ ಮಂಜುನಾಥ ವ್ಯವಸ್ಥಾಪನ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎ. ಜನಾರ್ದನ ಶೆಟ್ಟಿ, ಕಾರ್ಯ ನಿರ್ವಹ ಣಾಧಿಕಾರಿ ಡಾ| ನಿಂಗಯ್ಯ, ರಾಘವೇಂದ್ರ ಭಟ್‌, ರಂಜನ್‌ಕುಮಾರ್‌ ಬಿ.ಎಸ್‌., ಚಂದ್ರ ಕಲಾ ದೀಪಕ್‌, ಪುಷ್ಪಲತಾ ಶೆಟ್ಟಿ, ಹರಿನಾಥ ಜೋಗಿ, ದಿನೇಶ್‌ ದೇವಾಡಿಗ, ಸುರೇಶ್‌ ಕುಮಾರ್‌ ಕದ್ರಿ, ಎಸ್‌. ಗಣೇಶ್‌ ರಾವ್‌, ಗಣೇಶ್‌ ಶೆಟ್ಟಿ, ಕದ್ರಿ ನವನೀತ್‌ ಶೆಟ್ಟಿ, ಗೋಕುಲ್‌ ಕದ್ರಿ, ಪುರುಷೋತ್ತಮ ಕೊಟ್ಟಾರಿ, ನಿವೇದಿತಾ ಎನ್‌. ಶೆಟ್ಟಿ, ಪ್ರದೀಪ್‌ ಕುಮಾರ್‌ ಕಲ್ಕೂರ, ವಾಸುದೇವ ರಾವ್‌ ಕುಡುಪು ಮತ್ತಿತರರಿದ್ದರು.

ಬ್ರಹ್ಮಕಲಶಾಭಿಷೇಕ ಮುಗಿದ ಬಳಿಕ ಮಧ್ಯಾಹ್ನ 12.45ಕ್ಕೆ ಪಲ್ಲ ಪೂಜೆ ನಡೆಯಿತು. ಬಳಿಕ ಮಹಾ ಅನ್ನ ಸಂತರ್ಪಣೆ ಆರಂಭ ಗೊಂಡಿತು. ಮಧ್ಯಾಹ್ನ 30 ಸಾವಿರಕ್ಕೂ ಅಧಿಕ  ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಅಪರಾಹ್ನ 3ರಿಂದ ಜಗದೀಶ್‌ ಆಚಾರ್ಯ ಪುತ್ತೂರು ಮತ್ತು ಬಳಗದಿಂದ ಭಕ್ತಿಗಾನ ಸುಧೆ, ರಾತ್ರಿ 8ರಿಂದ ಬಾಲಕೃಷ್ಣ ಮಾಸ್ಟರ್‌ ಮಂಜೇಶ್ವರ ತಂಡದಿಂದ ಶಿವಾರ್ಪಣಾ-ನೃತ್ಯ ಗೀತಾ ನಾಟಕ ರೂಪಕ ನಡೆಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English